Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

29 ರಂದು ಗಡಿನಾಡ ಕನ್ನಡ ರಾಜ್ಯೋತ್ಸವ ಆಚರಣೆ; ಪೌರ ಸನ್ಮಾನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ.

29 ರಂದು ಗಡಿನಾಡ ಕನ್ನಡ ರಾಜ್ಯೋತ್ಸವ ಆಚರಣೆ; ಪೌರ ಸನ್ಮಾನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ.

ಕಾಸರಗೋಡು: ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಆಶ್ರಯದಲ್ಲಿ ನ.29ರಂದು ಕಾಯರ್ ಕಟ್ಟೆ ಸರಕಾರಿ ಹೈಯರ್ ಸೆಕೆಂಡರಿ ಶಾಲಾ ಸಭಾಂಗಣದಲ್ಲಿ ಗಡಿನಾಡ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಅಕಾಡೆಮಿ ಸಂಸ್ಥಾಪಕ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ, ತ್ರಿವರ್ಣ ನ್ಯೂಸ್ ಬೆಂಗಳೂರು ಮುಖ್ಯಸ್ಥ ಬಿ.ಎಂ.ಹನೀಫ್ ಉದ್ಘಾಟಿಸುವರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡುವರು. 

ದ.ಕ. ಜಿಲ್ಲೆ ಹಾಗೂ ಉಡುಪಿ ಜಿಲ್ಲೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಹಾಬಲೇಶ್ವರ ಭಟ್ ಎಡಕಾನ, ಶಿವಾನಂದ ಕೋಟ್ಯಾನ್ ಕಟಪಾಡಿ, ಇವರಿಗೆ ಪೌರ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಕರ್ನಾಟಕ ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್ ಪೌರ ಸನ್ಮಾನ ಕಾರ್ಯಕ್ರಮ ನೆರವೇರಿಸುವರು‌.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಅಧ್ಯಕ್ಷ ಶಿವಾನಂದ ತಗಡೂರು, ಕರ್ನಾಟಕ ಕಾರ್ಮಿಕ ಪರಿಷತ್ತು ಬೆಂಗಳೂರು ಅಧ್ಯಕ್ಷ ಡಾ.ರವಿಶೆಟ್ಟಿ ಬೈಂದೂರು, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತ ಗಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ರಾಧಾಕೃಷ್ಣ ಕೆ. ಉಳಿಯತ್ತಡ್ಕ ರಾಜ್ಯೋತ್ಸವ ಸಂದೇಶ ವಾಚಿಸುವರು. 

ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಜಿಲ್ಲಾಧ್ಯಕ್ಷ ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಕಾಸರಗೋಡು ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಗಂಗಾಧರ ತೆಕ್ಕೇಮೂಲೆ, ಅಕಾಡೆಮಿ ಅಧ್ಯಕ್ಷ ಚನಿಯಪ್ಪ ನಾಯ್ಕ ಎನ್., ಕಾರ್ಯದರ್ಶಿ ಅಖಿಲೇಶ್ ನಗುಮುಗಂ, ಖಜಾಂಚಿ ಝಡ್.ಎ.ಕಯ್ಯಾರ್, ಲೇಖಕ, ಪತ್ರಕರ್ತ ರವಿ ನಾಯ್ಕಾಪು, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧ್ಯಕ್ಷ ಸುಖೇಶ ಎ., ನಾಂಸ್ಕೃತಿಕ, ಧಾರ್ಮಿಕ ಮುಖಂಡ ಅರಿಬೈಲು ಗೋಪಾಲ ಶೆಟ್ಟಿ, ಕನ್ನಡ ಭವನ ಕಾಸರಗೋಡು ಸಂಸ್ಥಾಪಕ ವಾಮನ ರಾವ್ ಬೇಕಲ್ ದ ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ ಬಿ ಎನ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ ಕರ್ನಾಟಕ ಜಾನಪದ ಪರಿಷತ್ತು ದ ಕ ಜಿಲ್ಲಾ ಅಧ್ಯಕ್ಷ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್ ಉದ್ಯಮಿ ಯುವರಾಜ ಸಾಲಿಯಾನ್ ಕರ್ನಾಟಕ ಜಾನಪದ ಪರಿಷತ್ತು ಕೇರಳ ಘಟಕದ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಎಸ್ ನಾಸಿ. ಗಮಕ ಕಲಾ ಪರಿಷತ್ತು ಅಧ್ಯಕ್ಷ ಟಿ ಶಂಕರಣರಾಯಣ ಭಟ್ ಶಾಲಾ ಪ್ರಾಂಶುಪಾಲ ಡೊಮಿನಿಕ್ ಆಗಸ್ಟಿನ್ಭಾಗ್ಯಲಕ್ಷ್ಮಿ, ಆದಂ ಬಳ್ಳೂರು, ಸುಮಿತ್ರಾ, ರಾಘವ ಚೇರಾಲ್ ಮತ್ತಿತರರು ಉಪಸ್ಥಿತರಿರುವರು.

ಕಾಯರ್ ಕಟ್ಟೆ ಶಾಲೆಯ ಪಿಟಿಎ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದ್ದು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡಮಿ ಯು.ಎ.ಇ ಘಟಕ ದುಬೈ ಹಾಗೂ ಒಮಾನ್ ಘಟಕ, ಸಪ್ತಸ್ವರ ಸಿಂಗಾರಿ ಮೇಳ ಆವಳ ಮಠ ಯೋಗ ಫಾರ್ ಕಿಡ್ಸ್ ಕರಂದಕ್ಕಾಡು, ಸುಭಾಶ್ ಫ್ರೆಂಡ್ಸ್ ಸರ್ಕಲ್ ಲಾಲ್ ಬಾಗ್, ಪೈವಳಿಕೆ ಸಹಕರಿಸುವರು.

ಗಡಿನಾಡ ರಾಜ್ಯೋತ್ಸವ ಪ್ರಶಸ್ತಿ
------------------------
ವೇಮಗಲ್ ಸೋಮಶೇಖರ್ (ಸಾಹಿತಿ), ಡಾ.ಬಿ.ನಾರಾಯಣ ನಾಯ್ (ವೈದ್ಯಕೀಯ), ಜೇಮ್ಸ್ ಮೆಂಡೋನ್ಸಾ (ಉದ್ಯಮ, ಸಮಾಜ ಸೇವೆ), ರೊನಾಲ್ಡ್ ಮಾರ್ಟಿಸ್ ( ಹೊರನಾಡ ಕನ್ನಡ ಸೇವೆ), ಪ್ರಕಾಶ್ ಕುಂಪಲ (ಉದ್ಯಮ, ಸಮಾಜ ಸೇವೆ), ಕಟಪಾಡಿ ಸತ್ಯೇಂದ್ರ ಪೈ (ಸಿನೆಮಾ), ಶಿವಶಂಕರ ಭಟ್ ದಿವಾಣ (ಯಕ್ಷಗಾನ), ಕೃಷ್ಣ ಜಿ.ಮಂಜೇಶ್ವರ (ರಂಗಭೂಮಿ)
, ಪಿ.ಬಿ.ಹರೀಶ್ ರೈ (ಪತ್ರಿಕಾ ರಂಗ), ಎ.ಬಿ. ಮಧುಸೂದನ್ ಬಲ್ಲಾಳ್ (ಕಲಾಕ್ಷೇತ್ರ), ನವೀನ್ ಮೋಂತೇರೋ ದೇಹದಾರ್ಡ್ಯ ಪಟು, ಸಂದೀಪ್ ಪುರಂದರ ಶೆಟ್ಟಿ (ಕ್ರೀಡೆ, ಕಲಾಕ್ಷೇತ್ರ), ಡಾ.ನೂರಾ ಕಲ್ಲಡ್ಕ (ವೈದ್ಯಕೀಯ), ವಿದುಷಿ ತೀರ್ಥ ಕಟೀಲು (ಜನಪದ) ಸುಜಾತ ಮುಳ್ಳೇರಿಯಾ(ನೃತ್ಯ) ಯಕ್ಷಗಾನ ಅಭ್ಯಾಸ ಕೇಂದ್ರ (ದುಬೈ) ಯು.ಎ.ಇ. ಪ್ರಶಸ್ತಿ ಪ್ರದಾನ ಹಾಗೂ ದ.ಕ.ಜಿಲ್ಲಾ ರಾಜ್ಯೋತ್ಸವ ಅಭಿನಂದನ ಪುರಸ್ಕೃತ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಲಿದೆ.


ಸಾಂಸ್ಕೃತಿಕ ಕಾರ್ಯಕ್ರಮ
----------------------
ಯೋಗೇಶ್ ಶರ್ಮ ಬಳ್ಳಪದವು ಅವರಿಂದ ಗಾನ ಮಾಧುರಿ, ತೇಜಕುಮಾರಿ ಶಿಷ್ಯರಿಂದ ಯೋಗ ನೃತ್ಯ, ಗಜಾನನ ನಾಟ್ಯಾಂಜಲಿ ಮುಳ್ಳೇರಿಯ ಇವರಿಂದ ನೃತ್ಯ ನೃತ್ಯಂ, ಧನ್ಸಿರೈ ಕೋಟೆ ಪಾಣಾಜೆ ಶಾಸ್ತ್ರೀಯ ನೃತ್ಯ, ಸ್ಕಂದ ಪ್ರಸಾದ್, ಪೆರ್ಮುದೆ ಸಾಮಾಜಿಕ ಕಥಾ ಪ್ರಸಂಗ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.