Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಪುನೀತ ಸಾಗರ ಅಭಿಯಾನದೊಂದಿಗೆ ಎನ್.ಸಿ.ಸಿ.ದಿನಾಚರಣೆ.

ಪುನೀತ ಸಾಗರ ಅಭಿಯಾನದೊಂದಿಗೆ ಎನ್.ಸಿ.ಸಿ.ದಿನಾಚರಣೆ.

ಕಾಸರಗೋಡು: ಎನ್.ಸಿ.ಸಿ. ದಿನಾಚರಣೆಯ ಅಂಗವಾಗಿ ಪುನೀತ ಸಾಗರ ಅಭಿಯಾನವನ್ನು ಕಾಸರಗೋಡು ಬಿ.ಇ.ಎಮ್.ಎಚ್.ಎಸ್.ಎಸ್ ನ NCC ವಿದ್ಯಾರ್ಥಿಗಳು ಕಾಸರಗೋಡು ಕಡಪ್ಪುರ ಸಮುದ್ರ ಬದಿಯಲ್ಲಿ ಮಲಿನದಿಂದ ತುಂಬಿದ ಪ್ಲಾಸ್ಟಿಕ್, ಬಾಟಲ್, ಕಸಕಡ್ಡಿ ಇತ್ಯಾದಿಗಳನ್ನು ಹೆಕ್ಕಿ ಸುಚಿಗೊಳಿಸಿದರು. ಇದಕ್ಕೆ ಮುನ್ನುಡಿಯಾಗಿ ಕಡಪ್ಪುರದ ಅಚ್ಚನವರು, ಸ್ಥಳೀಯ ಪ್ರಮುಖರು ಕಾರ್ಯಕ್ರಮಕ್ಕೆ ಚಾಲನೆ‌ ನೀಡಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪದ್ಯಾಯ ಶ್ರೀ ಗಣೇಶ್ ಶಾಲಾ ನೌಕರ ಸಮಿತಿ ಕಾರ್ಯದರ್ಶಿ ವೈ. ಯಶವಂತ್ ಉಪಸ್ಥಿತರಿದ್ದರು.
ಶಾಲಾ ಎನ್.ಸಿ.ಸಿ. ಕೇರ್ ಟೇಕರ್ ಲಿನೋಲ್ಡ್ ಜೋಸೆಪ್, ಶಾಲಾ ಎಸ್.ಎಮ್.ಸಿ. ಚಯರ್ ಮೆನ್ ಡಾ.ಕೆ.ಎನ್. ವೆಂಕಟ್ರಮಣ ಹೊಳ್ಳ ಕಾರ್ಯಕ್ರಮಕ್ಕೆ ನೇತೃತ್ವ ನೀಡಿದರು. ಕೊನೆಯಲ್ಲಿ ಮಕ್ಕಳಿಗೆ ತಂಪು ಪಾನೀಯ, ಉಪಹಾರ ವಿತರಿಸಲಾಯಿತು. ನೂರು ಮಕ್ಕಳು ಸುಚೀಕರಣದಲ್ಲಿ ಭಾಗಿಯಾದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.