ದಂಪತಿಗಳಿಬ್ಬರು ಮಗುವನ್ನು ಸಹೋದರಿಯ ಮನೆಯಲ್ಲಿ ಬಿಟ್ಟು ಮನೆಗೆ ಬಂದು ವಿಷ ಸೇವಿಸಿ ಆತ್ಮಹತ್ಯೆ.
ಅಕ್ಟೋಬರ್ 07, 2025
0
ದಂಪತಿಗಳಿಬ್ಬರು ಮಗುವನ್ನು ಸಹೋದರಿಯ ಮನೆಯಲ್ಲಿ ಬಿಟ್ಟು ಮನೆಗೆ ಬಂದು ವಿಷ ಸೇವಿಸಿ ಆತ್ಮಹತ್ಯೆ.
ಮಂಜೇಶ್ವರ: ದಂಪತಿಗಳಿಬ್ಬರು ಮಗುವನ್ನು ಸಹೋದರಿಯ ಮನೆಯಲ್ಲಿ ಬಿಟ್ಟು ಮನೆಗೆ ಬಂದು ವಿಷ ಸೇವಿಸಿ ಆತ್ಮಹತ್ಯೆಗೈದ ದಾರುಣ ಘಟನೆ ಹೊಸಂಗಡಿ ಬಳಿಯ ಕಡಂಬಾರು ಚೆಂಬಪದವಿನಲ್ಲಿ ನಡೆದಿದೆ. ಇಲ್ಲಿನ ನಿವಾಸಿಗಳಾದ ಅಜಿತ್ (35), ಪತ್ನಿ ಶ್ವೇತ (27) ಆತ್ಮಹತ್ಯೆಗೈದಿರುವ ದಂಪತಿಗಳಾಗಿದ್ದಾರೆ. ವಿಷ ಸೇವಿಸಿದ ಅಜಿತ್ ಕಡಂಬಾರು ಮನೆಯಲ್ಲಿ ಮೃತಪಟ್ಟರೆ, ಶ್ವೇತ ರವರು ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತ ಅಜಿತ್ ಪೈಂಟಿಂಗ್ ಕಾರ್ಮಿಕನಾಗಿದ್ದು, ಪತ್ನಿ ಶ್ವೇತ ವರ್ಕಾಡಿ ಕಳಿಯೂರಿನ ಪ್ರತಿಷ್ಠಿತ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದಾರೆ. ನಿನ್ನೆ ಅಜಿತ್ ಹಾಗೂ ಶ್ವೇತ ತಮ್ಮ ಕೆಲಸ ಕಾರ್ಯ ಬಿಟ್ಟು ಮನೆಗೆ ಬೇಗನೆ ಬಂದಿದ್ದು ಅನಂತರ ಮಗನನ್ನು ಬಂದ್ಯೋಡಿನ ಸಹೋದರಿಯ ಮನೆಯಲ್ಲಿ ಬಿಟ್ಟು ಬಂದಿದ್ದರು. ನಮಗೆ ತುರ್ತು ಬೇರೆ ಕಡೆಗೆ ಹೋಗಲಿಕ್ಕಿದೆ, ಮಗುವನ್ನು ನೋಡಿಕೊಳ್ಳಿ ಎಂದು ಹೇಳಿ ಬಂದಿದ್ದು, ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರು ಆತ್ಮಹತ್ಯೆ ಮಾಡಲು ಆರ್ಥಿಕ ಸಂಕಷ್ಟವೆಂದು ಸ್ಥಳೀಯರ ಮಾತಾಗಿದೆ. ಪ್ರಕರಣ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ
ದಾಖಲಾಗಿದೆ.

