ಕೆಯುಡಬ್ಲ್ಯೂಜೆ ಚುನಾವಣಾಧಿಕಾರಿಯಾಗಿ ರವಿ ನಾಯ್ಕಾಪು ನೇಮಕ
ಅಕ್ಟೋಬರ್ 10, 2025
0
ಕೆಯುಡಬ್ಲ್ಯೂಜೆ ಚುನಾವಣಾಧಿಕಾರಿಯಾಗಿ ರವಿ ನಾಯ್ಕಾಪು ನೇಮಕ
ಕಾಸರಗೋಡು : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ದ 2025 - 28 ನೇ ಸಾಲಿನ ಚುನಾವಣೆಗೆ ಆಖಾಡ ಸಿದ್ಧವಾಗಿದ್ದು, ಕಾಸರಗೋಡು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣಾಧಿಕಾರಿಯಾಗಿ ರವಿ ನಾಯ್ಕಾಪು ಅವರನ್ನು ನೇಮಿಸಿ ಸಂಘದ ರಾಜ್ಯ ಸಮಿತಿಯು ಆದೇಶ ಹೊರಡಿಸಿದೆ. ಚುನಾವಣೆ ನಿಯಮಗಳನ್ವಯ ಹಾಗೂ ಸಂಘದ ಬೈಲಾ ಪ್ರಕಾರ ಚುನಾವಣೆ ನಡೆಸಿಕೊಡಲು ಆದೇಶದಲ್ಲಿ ಸೂಚಿಸಲಾಗಿದ್ದು, ಈಗಾಗಲೇ ನೀತಿ ಸಂಹಿತೆ ಜ್ಯಾರಿಗೊಳಿಸಲಾಗಿದೆ. ಇದೇ ಅಕ್ಟೊಬರ 13 ರಂದು ಚುನಾವಣೆ ಪ್ರಕ್ರಿಯೆ ಆರಂಭವಾಗಲಿದ್ದು, ನವಂಬರ ಒಂಭತ್ತರ ವರೆಗೆ ಮುಂದುವರಿಯಲಿದೆ.
ಜಿಲ್ಲಾ ಚುನಾವಣಾ ಅಧಿಕಾರಿಯಾಗಿ ನೇಮಕಗೊಂಡ ರವಿ ನಾಯ್ಕಾಪು ಅವರನ್ನು ಕಾಸರಗೋಡು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಅಭಿನಂದಿಸಿದೆ.
ಕಾಸರಗೋಡು ಜಿಲ್ಲಾ ಸಮಿತಿಯ ಚುನಾವಣೆಯನ್ನು ಕಾನೂನಾತ್ಮಕವಾಗಿ ನಡೆಸುವರೇ ಎಲ್ಲ ಸದಸ್ಯರೂ ಸಹಕರಿಸಬೇಕೆಂದು ನಿಯುಕ್ತ ಚುನಾವಣಾ ಅಧಿಕಾರಿ ರವಿ ನಾಯ್ಕಾಪು ಅವರು ಪತ್ರಿಕಾ ಹೇಳಿಕೆಯಲ್ಲಿ ವಿನಂತಿಸಿದ್ದಾರೆ.

