ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್ ವಾರ್ಷಿಕ ಮಹಾಸಭೆ. ಬ್ಯಾಂಕ್ ನಲ್ಲಿ 196 ಕೋಟಿ ವ್ಯವಹಾರ.
ಅಕ್ಟೋಬರ್ 03, 2025
0
ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್ ವಾರ್ಷಿಕ ಮಹಾಸಭೆ. ಬ್ಯಾಂಕ್ ನಲ್ಲಿ 196 ಕೋಟಿ ವ್ಯವಹಾರ.
ವರ್ಕಾಡಿ: ವರ್ಕಾಡಿ ಸೇವಾ ಸಹಕಾರಿ ಬ್ಯಾಂಕಿ ನ 2024 - 25 ನೇ ವಾರ್ಷಿಕ ಮಹಾಸಭೆಯು ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಪ್ರಾರ್ಥನೆಯನ್ನು ಕು|ಸಾನ್ವಿ, ಲಕ್ಷ್ಯ ಹಾಗೂ ಕ್ರಿತಾಂಜಲಿಯವರು ಹಾಡಿದರು. ಬ್ಯಾಂಕಿನ ಅಧ್ಯಕ್ಷರಾದ ಮೊಹಮ್ಮದ್ ಹನೀಫ್ ಅಧ್ಯಕ್ಷತೆ ವಹಿಸಿದ್ದು, ಉಪಾಧ್ಯಕ್ಷರಾದ ಸತ್ಯನಾರಾಯಣ ಭಟ್ ಸ್ವಾಗತಿಸಿದರು. ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಶ್ರೀವತ್ಸ ಭಟ್ ವಾಚಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಬ್ಯಾಂಕಿನ ಹಿರಿಯ ಸದಸ್ಯರಾದ ದೇವಪ್ಪ ಮಾಸ್ಟರ್, ಗೋವಿಂದ ಭಟ್, ಮೊಹಿದ್ದೀನ್ ಕುಂಞಿ, ರವಿಂದ್ರ, ಸುಶೀಲಮ್ಮ ಇವರನ್ನು ಗೌರವಿಸಲಾಯಿತು. ಹಾಗೂ ಅಪ್ರತಿಮ ಸಾಧನೆಗೈದ ಕು| ಪೂಜಾಲಕ್ಷ್ಮಿಯವರನ್ನು ಸನ್ಮಾನಿಸಲಾಯಿತು. ನಿರ್ದೇಶಕರಾದ: ವಿನೋದ್ ಕುಮಾರ್, ಜಗದೀಶ್, ಸತೀಶ್, ಮೂಸಾ ಕುಂಞಿ, ನಿಕೋಲಸ್, ಶ್ರೀಮತಿ ರಾಬಿಯಾ, ಸುನಿತಾ ಡಿ' ಸೋಜ, ತುಳಸಿ ಕುಮಾರಿ, ಪ್ರವೀಣ್ ಉಪಸ್ಥಿತರಿದ್ದರು. ಶ್ರೀಮತಿ ದಯಾವತಿ, ಆರತಿ, ಜೀವನ್, ಅನೀಶ್ ಸಹಕರಿಸಿದ್ದು, ಶ್ರೀಪತಿ ರಾವ್, ಸುರೇಶ್ ಬಿ. ವಿ, ನಾರಾಯಣ ನಾವಡ, ಲಕ್ಷ್ಮೀನಾರಾಯಣ ಭಟ್, ಕೃಷ್ಣಕುಮಾರ್ ಮುಂತಾದವರು ಪ್ರಶ್ನೆಗಳನ್ನು ಕೇಳಿ ಸಹಕರಿಸಿದರು.
2024 - 25 ನೇ ವರ್ಷದಲ್ಲಿ ಬ್ಯಾಂಕು 196 ಕೋಟಿ ವ್ಯವಹಾರವನ್ನು ನಡೆಸಿದ್ದು, 16 ಲಕ್ಷದಷ್ಟು ಲಾಭವನ್ನು ನೀಡಿದೆ.




