ಕುಂಬಳೆ: ಅನಂತಪುರದ ಪ್ಲೈವುಡ್ ಕಾರ್ಖಾನೆಯೊಂದರ ಬಾಯ್ಲರ್ ಸ್ಪೋಟಗೊಂಡು ಓರ್ವ ಮೃತಪಟ್ಟು ಹಲವರು ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿರುವುದು ಇಂದು ಸಂಜೆ (ಸೋಮವಾರ) ಸಂಭವಿಸಿದ್ದು, ಪರಿಸರದ ಜನತೆಯಲ್ಲಿ ಆತಂಕ ಮೂಡಿಸಿದೆ.
ಸಂಜೆ 7.30 ರ ಸುಮಾರಿಗೆ ಘಟನೆ ಸಂಭವಿಸಿದ್ದು, ಸ್ಪೋಟದ ಪರಿಣಾಮ ಸುಮಾರು 8 ಕಿಲೋಮೀಟರ್ ವ್ಯಾಪ್ತಿಯಲ್ಲಿ ಭೂಮಿ ಅಲುಗಾಡಿ ಭೂಕಂಪನದ ಅನುಭವವಾಗಿದೆ. ಅನಂತಪುರ ಬಳಿಯ ಕಣ್ಣೂರು ಡೆಕ್ಕೂರ್ ಫ್ಲೈವುಡ್ ಕಾರ್ಖಾನೆಯ ಬಾಯ್ಲರ್ ಸ್ಪೋಟಗೊಂಡು ವ್ಯಾಪಕ ಬೆಂಕಿ ಹತ್ತಿಕೊಂಡಿತು. 300 ರಷ್ಟು ಅನ್ಯರಾಜ್ಯ ಕಾರ್ಮಿಕರು ಆ ಸ್ಥಳದಲ್ಲಿದ್ದರೆಂದು ತಿಳಿದುಬಂದಿದೆ. ಘಟನೆಯ ತಕ್ಷಣ ಕಾಸರಗೋಡು, ಉಪ್ಪಳ, ಕಾಞಂಗಾಡುಗಳಿಂದ 30 ರಷ್ಟು ಅಗ್ನಿಶಾಮಕ ದಳಗಳು, ಕಾಸರಗೋಡು, ಕುಂಬಳೆ, ಬದಿಯಡ್ಕ ಪೋಲೀಸರು ಸ್ಥಳಕ್ಕೆ ದೌಡಾಯಿಸಿ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಘಟನೆಯ ವಿಷಯ ತಿಳಿದ ತಕ್ಷಣ ನೂರಾರು ಜನರು ಆಗಮಿಸಿದ್ದು, ಪೋಲೀಸರು ಆ ಪ್ರದೇಶವನ್ನು ಸುತ್ತುವರಿದು ಜನರನ್ನು ನಿಯಂತ್ರಿಸಿರುವರು.

ಕಾರ್ಮಿಕರ ಬಗ್ಗೆ ಅಸ್ಪಷ್ಟತೆ: