Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಜಾಗ ಅಡವಿಟ್ಟು 1 ಲಕ್ಷ ರೂಪಾಯಿ ಸಾಲ ನೀಡಲು ನಿರಾಕರಿಸಿದಕ್ಕೆ ಹೆತ್ತಬ್ಬೆಯನ್ನು ಕೊಂದ ಪುತ್ರ. ಆರೋಪಿಯಿಂದ ಹೇಳಿಕೆ ಸಂಗ್ರಹ.

ಜಾಗ ಅಡವಿಟ್ಟು 1 ಲಕ್ಷ ರೂಪಾಯಿ ಸಾಲ ನೀಡಲು ನಿರಾಕರಿಸಿದಕ್ಕೆ ಹೆತ್ತಬ್ಬೆಯನ್ನು ಕೊಂದ ಪುತ್ರ. ಆರೋಪಿಯಿಂದ ಹೇಳಿಕೆ ಸಂಗ್ರಹ.
ಮಂಜೇಶ್ವರ: ನಿನ್ನೆ ವರ್ಕಾಡಿ ಬಳಿಯ ನಲ್ಲೆಂಗಿಯಲ್ಲಿ ನಡೆದ ಕೊಲೆ ಪ್ರಕರಣದಲ್ಲಿ, ಕೆಲವೇ ಗಂಟೆಗಳ ಅಂತರದಲ್ಲಿ ಬಂಧಿಸಲ್ಪಟ್ಟ ಆರೋಪಿಯಿಂದ ಮಹತ್ತರವಾದ ಹೇಳಿಕೆಯನ್ನು ಪೊಲೀಸರು ಸಂಗ್ರಹಿಸಿದ್ದಾರೆ.
ದಿ. ಲೂಯಿಸ್ ಮೊಂತೇರೋರ ಪತ್ನಿ ಹಿಲ್ದಾ ಮೊಂತೇರೋ (60) ರವರನ್ನು ಪುತ್ರ ಮೆಲ್ವಿನ್ ಮೊಂತೇರೋ (33) ಕೊಲೆಗೈಯ್ಯಲು ಕಾರಣ ಹಣದ ವಿಚಾರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರ್ಥಿಕ ಪರಿಸ್ಥಿತಿಯಲ್ಲಿದ್ದ ಪುತ್ರ
ಮೆಲ್ವಿನ್ ಮೊಂತೇರೋ ತನ್ನ ತಾಯಿಯಲ್ಲಿ ಜಾಗೆಯನ್ನು ಅಡವಿಟ್ಟು 1 ಲಕ್ಷ ರೂಪಾಯಿ ಸಾಲ ನೀಡುವಂತೆ ಕೋರಿದ್ದನ್ನು. ಇದಕ್ಕೆ ತಾಯಿ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಕೊಲೆ ಕೃತ್ಯ ನಡೆಯಲು ಕಾರಣವಾಗಿದೆ ಎಂದು ಆರೋಪಿ ಪೊಲೀಸರಲ್ಲಿ ತಿಳಿಸಿದ್ದಾನೆ. ಇದೀಗ ಆರೋಪಿಯನ್ನು ಬಂಧಿಸಲಾಗಿದ್ದು, ನ್ಯಾಯಾಲಯದಲ್ಲಿ ಸಮಗ್ರ ವಿಚಾರಣೆ ನಡೆಯಲಿದೆ. ಕೊಲೆಗೈಯಲ್ಪಟ್ಟ ಹಿಲ್ದಾ ಮೊಂತೇರೋರವರ ಶವ ಮಹಜರು ಪೆರಿಯಾರಂ ಮೆಡಿಕಲ್ ಕಾಲೇಜ್ ನಲ್ಲಿ ನಡೆಸಲಾಯಿತು. ಬಳಿಕ ಇಂದು ಬೆಳಗ್ಗೆ ಇನ್ನೊರ್ವ ಪುತ್ರ ಆಲ್ವಿನ್ ಮೊಂತೆರೋ ಕೊಲ್ಲಿ ರಾಷ್ಟ್ರದಿಂದ ಆಗಮಿಸಿದ ಬಳಿಕ ಇಂದು ಮಧ್ಯಾಹ್ನ 3 ಗಂಟೆಗೆ ಮೃತದೇಹದ ಅಂತ್ಯ ಸಂಸ್ಕಾರ ವರ್ಕಾಡಿ ಸೀಕ್ರೆಟ್ ಹಾರ್ಟ್ ಚರ್ಚ್ ನಲ್ಲಿ ನಡೆಯಿತು.
ಚರ್ಚಿನ ಫಾದರ್ ರೆ.ಫಾ. ಬೇಸಿಲ್ ವಾಸ್ ಧಾರ್ಮಿಕ ವಿಧಿ ವಿಧಾನಗಳಿಗೆ ನೇತೃತ್ವವನ್ನು ನೀಡಿದರು. ಹಿಲ್ಡ ಮೊಂತೆರೋರವರ ಪುತ್ರ ಕೊಲ್ಲಿ ಉದ್ಯೋಗಿ ಆಲ್ವಿನ್ ಮೊಂತೆರೋರ ಕೂಗು ಮುಗಿಲು ಮುಟ್ಟಿತ್ತು. ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಕಾಸರಗೋಡು ಜಿಲ್ಲಾ ಪಂಚಾಯತು ಸದಸ್ಯೆ ಕಮಲಾಕ್ಷಿ ಕೆ, ಮಾಜಿ ಸದಸ್ಯ ಹರ್ಷಾದ್ ವರ್ಕಾಡಿ, ವಿವಿಧ ಪಕ್ಷಗಳ ನೇತಾರರಾದ: ಅಬ್ದುಲ್ ಅಜೀಜ್ ಮರಿಕೆ, ಮೊಹಮ್ಮದ್ ಮಜಾಲ್, ಪುರುಷೋತ್ತಮ ಅರಿಬೈಲು, ದಾಮೋದರ ಮಾಸ್ತರ್, ರೋನಿ ಡಿ'ಸೋಜಾ, ಎಸ್. ಅಬ್ದುಲ್ ಖಾದರ್ ಹಾಜಿ, ಡಿ .ಬೂಬ, ಮೊಹಮ್ಮದ್ ಹನೀಫ್ ಎಚ್. ಎ, ಅಬ್ದುಲ್ ಮಜೀದ್ ಬಿ.ಎ., ವಿನೋದ್ ಕುಮಾರ್, ಶ್ರೀ ವತ್ಸ ಭಟ್, ರಾಜೇಶ್ ಡಿ' ಸೋಜ, ಗಾಡ್ವಿನ್, ರಾಬಿಯಾ, ಅಬುಸಾಲಿ, ಮುಂತಾದವರು ಸಂತೈಸಿ, ಸಂತಾಪ ಸೂಚಿಸಿದರು. ದಿ. ಹಿಲರಿ ಡಿ'ಸೋಜಾ - ದಿ. ಜೋಸ್ಪಿನ್ ಡಿ'ಸೋಜ ದಂಪತಿಗಳ ಪುತ್ರಿಯಾಗಿರುವ ಹಿಲ್ಡ ಡಿ'ಸೋಜರವರು ಅವಿವಾಹಿತರಾದ ಇಬ್ಬರು ಪುತ್ರರನ್ನು ಹಾಗೂ ಸಹೋದರ - ಸಹೋದರಿಯರಾದ: ಇವಿಜಿನ್ ಮೊಂತೆರೋ, ಜೇಸಿಂತ ಮೊಂತೆರೋ, ಹೆಲೆನ್ ಡಿ'ಸೋಜಾ, ಲೀನಾ ಡಿ'ಸೋಜಾ, ಐರಿನ್ ಡಿ'ಸೋಜಾ, ಕ್ಲೇಮೆಂಟ್ ಡಿ'ಸೋಜಾ, ನ್ಯಾನ್ಸಿ ಡಿ'ಸೋಜಾ, ವಿಕ್ಟರ್ ಡಿ'ಸೋಜಾ, ಗಾಡ್ವಿನ್ ಡಿ'ಸೋಜಾ, ಸೆಲಿನ್ ಡಿ'ಸೋಜಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಸಹೋದರರ ಪೈಕಿ ಮೆಕ್ಸಿನ್ ಡಿ'ಸೋಜಾ ಈ ಹಿಂದೆ ನಿಧನರಾಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.