ಆನೆಗುಂದಿ ಶ್ರೀಗಳವರ ಚಾತುರ್ಮಾಸ್ಯ ಜುಲೈ 10 ರಿಂದ ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ವಿಶೇಷ ಸಭೆ.
ಜೂನ್ 27, 2025
0
ಆನೆಗುಂದಿ ಶ್ರೀಗಳವರ ಚಾತುರ್ಮಾಸ್ಯ ಜುಲೈ 10 ರಿಂದ
ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ವಿಶೇಷ ಸಭೆ.
ಪಡುಕುತ್ಯಾರು: ಕಟಪಾಡಿ ಪಡುಕುತ್ಯಾರಿನ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಶ್ರೀಗಳವರ 21 ನೇ ವರ್ಷದ ಚಾತುರ್ಮಾಸ್ಯ ಜುಲೈ 10ರಿಂದ ಆರಂಭಗೊಳ್ಳಲಿದ್ದು ಈ ಬಗ್ಗೆ ವಿಶೇಷ ಸಭೆಯು ಪಡುಕುತ್ಯಾರಿನ ಶ್ರೀ ಸರಸ್ವತೀ ಯಾಗ ಶಾಲೆಯಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಹಾಗೂ ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ಶ್ರೀ ವಿ ಶ್ರೀಧರ ಆಚಾರ್ಯ ವಡೇರಹೋಬಳಿ ವಹಿಸಿದ್ದರು. ಸಭೆಯಲ್ಲಿ ಚಾತುರ್ಮಾಸ್ಯದ ಯಶಸ್ವಿಗೆ ರಚಿಸಲಾದ ವಿವಿಧ ವಿಭಾಗಗಳ ಸಮಿತಿಗಳಿಗೆ ಪ್ರಮುಖರಿಗೆ ಅಗತ್ಯವಿರುವ ಸೂಚನೆಗಳನ್ನು ಸಭೆಯಲ್ಲಿ ನೀಡಲಾಯಿತು. ಹಾಗೆಯೇ ಚಾತುರ್ಮಾಸ್ಯದ ಯಶಸ್ವಿಗೆ ವಿವಿಧ ತೀರ್ಮಾನಗಳನ್ನು ಕೈಗೊಳ್ಳಲಾಯಿತು.
ಪ್ರತೀ ಮನೆಯಿಂದಲೂ ಗುರುಪಾದುಕಾ ಪೂಜೆ : ಈ ಬಾರಿಯ ಚಾತುರ್ಮಾಸ್ಯದ ಸಮಾಜದ ಪ್ರತೀ ಮನೆಯವರೂ ಕುಲಗುರುಗಳ ಗುರುಪಾದುಕಾ ಪೂಜೆಯಲ್ಲಿ ಪಾಲ್ಗೊಳ್ಳುವಂತೆ ಪ್ರಚಾರ ನಡೆಸಲಾಗುತ್ತದೆ. ಭಾನುವಾರ ಗುರುವಾರ ಸೇರಿದಂತೆ ಜನದಟ್ಟೆಣೆಯಿರುವ ದಿನಗಳಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ಬೆಳಗ್ಗೆ 10ಘಂಟೆಯಿಂದ ವಿವಿಧ ಹಂತಗಳಲ್ಲಿ ಗುರುಪಾದುಕಾ ಪೂಜೆಯ ವ್ಯವಸ್ಥೆ ಮಾಡಲಾಗುತ್ತದೆ. ಗುರುಬಿಕ್ಷಾವಂದನೆ, ಸಂತರ್ಪಣೆ, ವಸ್ತ್ರದಾನ ಸೇರಿದಂತೆ ಭಕ್ತಾದಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಗುರುಪಾದುಕಾ ಪೂಜೆಯನ್ನು ನೇರವೇರಿಸಲು ಅವಕಾಶವಿದೆ
ಪ್ರತೀ ದಿನ ದುರ್ಗಾ ನಮಸ್ಕಾರ ಫೂಜೆ: ಪ್ರತೀ ದಿನ ಬೆಳಗ್ಗೆ 8.00ಘಂಟೆಗೆ ಮತ್ತು ಸಂಜೆ 5.30ಘಂಟೆಗೆ ದುರ್ಗಾ ನಮಸ್ಕಾರ ಪೂಜೆ ವ್ಯವಸ್ಥೆ ಮಾಡಲಾಗುತ್ತದೆ.
ಕುಲಗುರುಗಳ ತುಲಾಭಾರ ಸೇವೆ: ಜುಲೈ 22ರಂದು ಗುರುಗಳ ಜನ್ಮ ವರ್ಧಂತಿಯ ಶುಭದಿನದಂದು ವರ್ಷಕ್ಕೆ ಒಂದು ಭಾರಿ ನಡೆಯುವ ಜಗದ್ಗುರುಗಳ ತುಲಾಭಾರ ಸೇವೆಯಲ್ಲಿ ಭಕ್ತಾದಿಗಳಿಗೆ ಭಾಗವಹಿಸಲು ಅವಕಾಶವಿದೆ.
ಸಮಾಜದ ಯುವಸಾಧಕರಿಗೆ ಅಭಿನಂದನೆ: ಗುರುಗಳ ಜನ್ಮವರ್ಧಂತಿಯಂದು ಸಮಾಜದ ಯುವಸಾಧಕರನ್ನು ಗೌರವಿಸಲಾಗುವುದು ಹಾಗೂ ಸಮಾಜದಲ್ಲಿ 95 ಶೇಕಡಾಕ್ಕಿಂತ ಹೆಚ್ಚು ಅಂಕಗಳಿಸಿದ ಎಸ್.ಎಸ್ ಎಲ್ ಸಿ, ಪಿ.ಯು.ಸಿ ವಿಭಾಗದ ವಿದ್ಯಾರ್ಥಿಗಳನ್ನು, ಪದವಿ, ಸ್ನಾತಕೋತ್ತರ ಮತ್ತು , ಇಂಜಿನಿಯರಿಂಗ್, ವೈದ್ಯಕೀಯ ಪದವಿ, ಹಾಗೂ ಪಿ ಎಚ್ ಡಿ ಪದವಿ ಪಡೆದ ವಿದ್ಯಾರ್ಥಿಗಳನ್ನು ಅಬಿನಂದಿಸಲಾಗುವುದು. ಈ ಬಗ್ಗೆ ಸ್ವಾಗತ ಸಮಿತಿ ವಿಭಾಗದ ಶ್ರೀ ಹರೀಶ್ ಆಚಾರ್ಯ ಕಾರ್ಕಳ ( ಮೊ.9945867425 ) ಇವರಿಗೆ ಜವಾಬ್ದಾರಿ ನೀಡಲಾಯಿತು.
ವಿದ್ಯಾರ್ಥಿಗಳಿಗಾಗಿ ವಿಶೇಷ ವಿಚಾರ ಗೋಷ್ಠಿಗಳು ಹಾಗೂ ಸಮಾವೇಶಗಳು: ಸಮಾಜದ ಪಂಚಶಿಲ್ಪಗಳ ಪ್ರಾಮುಖ್ಯತೆ ಹಾಗೂ ಅವುಗಳ ಯಾಂತ್ರೀಕರಣ ನಾವಿನ್ಯತೆ ಮತ್ತು ಸಾಧಕರ ಬಗ್ಗೆ ಯುವಜನರಿಗೆ ಜಾಗೃತಿ ಮೂಡಿಸುವುದು ಮತ್ತು ಯುವಜನರು ಸಮಾಜ ಸೇವೆಯಲ್ಲಿ ತೊಡಗಿಸಿಕ್ಕೊಳ್ಳುವ ಅಗತ್ಯತೆಯ ಬಗ್ಗೆ ಅರಿವು ಮೂಡಿಸುವ ವಿಚಾರಗಳ ಬಗ್ಗೆ ವಿಚಾರಗೋಷ್ಠಿಗಳನ್ನು ಚಾತುರ್ಮಾಸ್ಯದ ವೇಳೆ ನಡೆಸಲಾಗುವುದು. ಹಾಗೆಯೇ ಶ್ರೀ ಸರಸ್ವತೀ ಮಾತೃಮಂಡಳಿ ಹಾಗೂ ಗುರುಸೇವಾಪರಿಷತ್‌ಗಳ ಸಮಾವೇಶಗಳನ್ನು ವಿಶೇಷ ಕಾರ್ಯಕ್ರಮಗಳನ್ನು ಚಾತುರ್ಮಾಸ್ಯದ ವೇಳೆ ಆಯೋಜಿಸಲಾಗುವುದು.
ಐದು ಬಾಷೆಗಳಲ್ಲಿ ಆಮಂತ್ರಣ: ಸಮಾಜದ ಎಲ್ಲರಿಗೂ ಆಮಂತ್ರಣ ತಲುಪುವ ನಿಟ್ಟಿನಲ್ಲಿ ಕನ್ನಡ, ಮಲೆಯಾಳ, ತಮಿಳು, ತೆಲುಗು ಮತ್ತು ಇಂಗ್ಲೀ಼ಷ್ ಭಾಷೆಗಳಲ್ಲಿ ಚಾತುರ್ಮಾಸ್ಯದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಗುವುದು, ವಿವಿಧ ಸಮಾರಂಭಗಳ ಆಮಂತ್ರಣಗಳನ್ನು ಪ್ರತ್ಯೇಕವಾಗಿ ಮಾಡಲಾಗುವುದು. ಚಾತುರ್ಮಾಸ್ಯದ ವೇಳೆ ವಿಶೇಷ ವೇದಿಕೆ, ಪ್ರಚಾರಕ್ಕಾಗಿ ವೈವಿಧ್ಯಮಯ ಪ್ಲಕ್ಸ್, ಸ್ವಾಗತ ಕಮಾನುಗಳು, ಅಲಂಕಾರಗಳ ವ್ಯವಸ್ಥೆಗಳ ಬಗ್ಗೆ ಸಭೆಯಲ್ಲಿ ತೀರ್ಮಾನ ಮಾಡಲಾಯಿತು.
ಹಸಿರುವಾಣಿ ಹೊರೆಕಾಣಿಕೆ: ಚಾತುರ್ಮಾಸ್ಯದ ವೇಳೆ ದೇವಸ್ಥಾನ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಹಸಿರುವಾಣಿ ಹೊರೆಕಾಣಿಕೆ ಸಲ್ಲಿಸುವವರು ಸಂಬಂಧಪಟ್ಟವರಿಗೆ ನಿಗದಿಪಡಿಸಿದ ವಾರಗಳಿಗಿಂತ ಮುಂಚಿತವಾಗಿ ಸಮರ್ಪಿಸಿದಲ್ಲಿ ವಿನಿಯೋಗಿಸಲು ಹೆಚ್ಚು ಸಹಕಾರಿಯಾಗುತ್ತದೆ ಎಂದು ಸಭೆಯಲ್ಲಿ ಅಭಿಪ್ರಾಯ ಮೂಡಿತು.
ಆನೆಗುಂದಿ ಗುರು ಸೇವಾಪರಿಷತ್‌ಗೆ ಹೆಚ್ಚುವರಿ ಹೊಣೆ: ಆನೆಗುಂದಿ ಗುರುಸೇವಾಪರಿಷತ್‌ನ ಘಟಕಗಳಿಗಿರುವ ಪ್ರದೇಶಗಳಲ್ಲಿ ಚಾತುರ್ಮಾಸ್ಯದ ಆಮಂತ್ರಣ ಪತ್ರಿಕೆಯನ್ನು ಪ್ರತೀ ಮನೆಗಳಿಗೆ ತಲುಪಿಸಿ ಚಾತುರ್ಮಾಸ್ಯಕ್ಕೆ ಆಹ್ವಾನಿಸಲು ಮತ್ತು ನಿಗದಿತ ವಾರಗಳ ಜವಾಬ್ದಾರಿ ಇರುವ ದೇವಸ್ಥಾನಗಳ ಕಾಲಾವಧಿಯಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸಲು ಅಗತ್ಯ ಕ್ರಮಕೈಗೊಳ್ಳಲು ಪರಿಷತ್ ನ ಕೇಂದ್ರ ಸಮಿತಿ ಪದಾಧಿಕಾರಿಗಳಿಗೆ ಸೂಚನೆ ನೀಡಲಾಯಿತು. ಈ ಬಗ್ಗೆ ಎಲ್ಲಾ ಮಂಡಲ ಮತ್ತು ಮಹಾಮಂಡಲದ ಘಟಕಗಳ ಮುಖ್ಯಸ್ಥರ ಆನ್ ಲೈನ ಸಭೆಯನ್ನು ನಡೆಸಲು ತೀರ್ಮಾನಿಸಲಾಯಿತು.
ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಗೌರವಾಧ್ಯಕ್ಷ ಶ್ರೀ ಪಿ.ವಿ ಗಂಗಾಧರ ಆಚಾರ್ಯ ಉಡುಪಿ,ಸ್ವಾಗತ ಸಮಿತಿ ವಿಭಾಗದ ಆನೆಗುಂದಿ ಮಹಾಸಂಸ್ಥಾನ ಪಂಚಸಿಂಹಾಸನ ಸರಸ್ವತೀ ಪೀಠ ವಿಕಾಸ ಸಮಿತಿ ಅಧ್ಯಕ್ಷ ಶ್ರೀ ದಿನೇಶ್ ಆಚಾರ್ಯ ಪಡುಬಿದ್ರಿ, ದೇವಸ್ಥಾನಗಳ ಪ್ರಮುಖರಾದ ಬಿ.ಎಂ ಯದುನಂದನ ಆಚಾರ್ಯ ಬಂಗ್ರಮಂಜೇಶ್ವರ, ಶ್ರೀ ಪಿ. ಜಗದೀಶ್ ಆಚಾರ್ಯ ಪಡುಪಣಂಬೂರು, ಎಂ ಸುಬ್ರಾಯ ಆಚಾರ್ಯ ಕೋಟ, ಸ್ವಾಗತ ಸಮಿತಿಯ ಪ್ರತಿಷ್ಠಾನದ ಉಪಾಧ್ಯಕ್ಷ ಕೆ ನಾಗರಾಜ ಆಚಾರ್ಯ ಕಾಡಬೆಟ್ಟು,ಶ್ರೀ ಹರ್ಷ ಆಚಾರ್ಯ ಕಾಡಬೆಟ್ಟು, ಶ್ರೀ ಗಣೇಶ್ ಆಚಾರ್ಯ ಕುಂದಾಪುರ, ಆನೆಗುಂದಿ ಗುರುಸೇವಾಪರಿಷತ್ ಕೇಂದ್ರಸಮಿತಿ ಅಧ್ಯಕ್ಷ ಶ್ರೀ ಗಣೇಶ್ ಆಚಾರ್ಯ ಕೆಮ್ಮಣ್ಣು ಅಧ್ಯಕ್ಷ ಶ್ರೀ ಸರಸ್ವತೀ ಮಾತೃ ಮಂಡಳಿ ಅಧ್ಯಕ್ಷೆ ಶ್ರೀಮತಿ ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ಮಾಧ್ಯಮ ವಿಭಾಗದ ಮುಖ್ಯಸ್ಥರಾದ ನಿವೃತ್ತ ಸುಬೇದಾರ್ ಶ್ರೀ ವೈ ಧರ್ಮೇಂದ್ರ ಆಚಾರ್ಯ ಕಾಸರಗೋಡು ,ಪ್ರಚಾರ ಸಮಿತಿ ವಿಭಾಗದ ಮುಖ್ಯಸ್ಥರಾದ ಶ್ರೀ ದಯಾನಂದ ಆಚಾರ್ಯ ಕೆಳಾರ್ಕಳಬೆಟ್ಟು,ಶ್ರೀ ಯೋಗೀಶ್ ಆಚಾರ್ಯ ಕರಂಬಳ್ಳಿ ಕೆ ಪ್ರಸಾದ್ ಆಚಾರ್ಯ ಉಡುಪಿ , ವೈದಿಕ ವಿಭಾಗದ ಶ್ರೀ ಸರಸ್ವತೀ ಪೂರ್ವ ಛಾತ್ರ ಸಂಘ ಅಧ್ಯಕ್ಷ ವಿದ್ವಾನ್ ಬ್ರಹ್ಮಶ್ರೀ ಕೇಶವ ಶರ್ಮಾ ಇರುವೈಲು , ಸಭಾ ವೇದಿಕೆ ವ್ಯವಸ್ಥೆ ವಿಭಾಗದ ನ್ಯಾಯವಾದಿ ಕೆ.ಎಂ ಗಂಗಾಧರ ಆಚಾರ್ಯ ಕೊಂಡೆವೂರು, ಶ್ರೀ ಹರೀಶ್ ಆಚಾರ್ಯ ಬೇಲಾಡಿ, ಗುರು ಪಾದುಕಾ ಪೂಜೆ ವ್ಯವಸ್ಥೆ ವಿಭಾಗದ ಶ್ರೀ ವಾದಿರಾಜ ಆಚಾರ್ಯ ಮಂಗಳೂರು, ಶ್ರೀ ಐ ಲೋಲಾಕ್ಷ ಶರ್ಮಾ, ಶ್ರೀ ವಸಂತ ಆಚಾರ್ಯ ಮಜೂರು, ಶ್ರೀ ಗಣೇಶ್ ಆಚಾರ್ಯ ಕೋಟ, ಶ್ರೀ ವಿ ಪುರುಷೋತ್ತಮ ಆಚಾರ್ಯ ಪುತ್ತೂರು, ಶ್ರೀ ರವೀಂದ್ರ ಮಂಗಳಾದೇವಿ, ಶ್ರೀ ಶೇಖರ ಆಚಾರ್ಯ ಮಂಗಳೂರು, ಕೆ ಸತೀಶ್ ಆಚಾರ್ಯ ಕಡಂದಲೆ, ಭಜನಾ ಸಂಕೀರ್ತನಾ ವಿಭಾಗದ ಶ್ರೀ ರೂಪೇಶ್ ಆಚಾರ್ಯ ಕಾರ್ಕಳ, ಸಾಂಸ್ಕೃತಿಕ ಕಾರ್ಯಕ್ರಮ ವಿಭಾಗದ ಶ್ರೀಮತಿ ರಮಾ ನವೀನ್ ಆಚಾರ್ಯ ಕಾರ್ಕಳ, ಆಹಾರ ವಿಭಾಗದ ಶ್ರೀ ದಿನೇಶ್ ಆಚಾರ್ಯ ಕಿನ್ನಿಗೋಳಿ, ಶ್ರೀ ವಿಠಲ ಆಚಾರ್ಯ ಎಲ್ಲೂರು, ಸ್ವಾಗತ ವಿಭಾಗದ ಶ್ರೀಮತಿ ದೀಪಾ ಸುರೇಶ್ ಆಚಾರ್ಯ ಉಡುಪಿ, ಶ್ರೀಮತಿ ಲತಾ ಎಸ್. ಆಚಾರ್ಯ ಕುತ್ಯಾರು, ಶ್ರೀಮತಿ ಜ್ಯೋತಿ ರಾಘವೇಂದ್ರ ಆಚಾರ್ಯ ಉಡುಪಿ, ಶ್ರೀಮತಿ ಕವಿತಾ ಹರೀಶ್ ಆಚಾರ್ಯ ಕಾರ್ಕಳ, ಶ್ರೀಮತಿ ನಳಿನಿ ವಿಜೇಂದ್ರ. ಆಚಾರ್ಯ ಕಾರ್ಕಳ, ಶ್ರೀಮತಿ ಜ್ಯೋತಿ ರವಿ ಆಚಾರ್ಯ ಕಾರ್ಕಳ, ಶ್ರೀಮತಿ ಆಶಾ ನಾಗರಾಜ ಆಚಾರ್ಯ ಕಾಡಬೆಟ್ಟು, ಶ್ರೀಮತಿ ಶ್ರೀಮತಿ ತ್ರಿವೇಣಿ ವಿಶ್ವೇಶ್ವರ ಆಚಾರ್ಯ ಬಾಳಿಲ, ಮುಂತಾದವರು ಮಾತನಾಡಿದರು.
ಶ್ರೀ ನಾಗಧರ್ಮೇಂದ್ರ ಸರಸ್ವತೀ ಸಂಸ್ಕ್ಕೃತ ವೇದ ಸಂಜೀವಿನೀ ಪಾಠ ಶಾಲೆಯ ವಿದ್ಯಾರ್ಥಿಗಳಿಂದ ವೇದ ಗೋಷಣೆ ನಡೆಯಿತು.ಚಾತುರ್ಮಾಸ್ಯ ವ್ರತ ನಿರ್ವಹಣಾಸಮಿತಿ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ ಆಚಾರ್ ಕಂಬಾರು ಸ್ವಾಗತಿಸಿ ಪ್ರಸ್ತಾವನೆಯೊಂದಿಗೆ ಸಭಾ ನಿರ್ವಹಣೆ ಮಾಡಿದರು. ಕೋಶಾಧಿಕಾರಿ ಅರವಿಂದ ವೈ ಆಚಾರ್ಯ ಬೆಳುವಾಯಿ ವಂದಿಸಿದರು.

