Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಮಧೂರು ಬ್ರಹ್ಮಕಲಶೋತ್ಸವದಲ್ಲಿ ವೀಕ್ಷಕರ ಮನಸೂರೆಗೊಂಡ "ಅಹಲ್ಯೆ" ತುಳು ನಾಟಕ.

ಮಧೂರು ಬ್ರಹ್ಮಕಲಶೋತ್ಸವದಲ್ಲಿ ವೀಕ್ಷಕರ ಮನಸೂರೆಗೊಂಡ "ಅಹಲ್ಯೆ" ತುಳು ನಾಟಕ.
ಕಾಸರಗೋಡು: ಮಧೂರು ಶ್ರೀ ಮದ ನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನದ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಹಾಗೂ ಮೂಡಪ್ಪ ಸೇವೆಯ ಸಾಂಸ್ಕತಿಕ ಕಾರ್ಯಕ್ರಮದ ಅಂಗವಾಗಿ ಏಪ್ರಿಲ್ 1 ರಂದು ಎರಡನೇ ವೇದಿಕೆಯಲ್ಲಿ ರಾತ್ರಿ 9:30 ಗಂಟೆಗೆ ಪ್ರದರ್ಶನಗೊಂಡ ಕುಂಬಳೆಯ ಕಲಾಸಂಗಮ ಶೇಡಿ ಕಾವು ತಂಡದವರ "ಅಹಲ್ಯೆ" ಎಂಬ ಪೌರಾಣಿಕ ತುಳು ನಾಟಕವು ಜನ ಮನಸ್ಸಿನಲ್ಲಿ ತನ್ನ ಚಾಪನ್ನು ಮೂಡಿಸಿತು. ಅಚ್ಚುಕಟ್ಟಾದ ನಿರ್ದೇಶನ ನವೀರದ ಸಂಗೀತ ಹಾಗೂ ಮಂಗಳೂರಿನ ಖ್ಯಾತ ನಾಟಕಗಾರ ಕದ್ರಿ ನವನಿತ ಶೆಟ್ಟಿ ಅವರ ಕಥಾ ಸಂಕಲನ ಹೊಂದಿರುವಂತ ಪೌರಾಣಿಕ ಕಥಾ ಭಾಗವು ಅಹಲ್ಯ ಮತ್ತು ಗೌತಮನ ಜೀವನ ಆಧಾರಿತ ದೃಶ್ಯಕಾವ್ಯವಾಗಿ ಮೂಡಿ ಬಂದಿತು.
ಚಿತ್ರದ ಕಥಾನಾಯಕಿ ಪ್ರಮುಖ ಅಂಗವಾದ ಅಹಲ್ಯ ಪಾತ್ರದಲ್ಲಿ ಯಶೂ ತುಂಬೆ ಮನೋಜ್ಞವಾಗಿ ಅಭಿನಯಿಸಿದರೆ , ನಾಯಕನಾದ ಗೌತಮನಾಗಿ ಲೋಕನಾಥ್ ಶೆಟ್ಟಿ ಕೆಳಗಿನ ಉಜಾರು ಮತ್ತು ಪ್ರತಿ ನಾಯಕ ದೇವೇಂದ್ರನ ಪಾತ್ರದಲ್ಲಿ ಪೃಥ್ವಿರಾಜ್ ಶೆಟ್ಟಿ ಕುಂಬಳೆ ಒಬ್ಬರನ್ನೊಬ್ಬರು ಮೀರುವಂತೆ ಸಂಭಾಷಣೆ ಹರಿಸಿದ್ದು ಮತ್ತು ಅಭಿನಯಿಸಿದ್ದು ಸೇರಿದ ಜನಸ್ತೋಮವನ್ನು ಬಹುವಾಗಿ ಮೆಚ್ಚಿಸಿದೆ,
ಹಾಗೆ ಅಗ್ನಿಯಾಗಿ ಅನಿಲ್ ಕುಮಾರ್ ದೇವಿನಗರ, ಬ್ರಹ್ಮನಾಗಿ ಚಂದ್ರಶೇಖರಗಟ್ಟಿ ದೇವಿನಗರ, ನಾಟಕದ ಸೂತ್ರದಾರ ವಿಲಾಸನಾಗಿ ಗಿರೀಶ್ ಆಚಾರ್ಯ ಕೃಷ್ಣ ನಗರ ಸೂತ್ರಧಾರಿಣಿ ಮಂಜರಿಯಾಗಿ ಹರೀಶ್ ಪಾಟಾಲಿ ಶೇಡಿಕಾವು, ಶಿವನಾಗಿ ರಾಮಚಂದ್ರ ಗಟ್ಟಿ ಅಣ್ಣು ಕುಂಬಳೆ, ವಿಶ್ವಮಿತ್ರನಾಗಿ ನಾರಾಯಣ ಕುಲಾಲ್ ನಾರಾಯಣಮಂಗಲ, ಶ್ರೀರಾಮನ ಪಾತ್ರದಲ್ಲಿ ಮಾ:ತ್ರಿಶಾಂತ್ ಕಟ್ಟತಡ್ಕ, ಲಕ್ಷ್ಮಣನಾಗಿ ಮಾ: ಶ್ರೀ ನಂದನ್ ಕುಂಬಳೆ, ಇತರ ಪಾತ್ರದಲ್ಲಿ ಮಾ: ನಂದ ಕುಂಬಳೆ, ಪ್ರಸಾದ್ ಕೃಷ್ಣ ನಗರ, ಜಯಪ್ರಶಾಂತ್ ಶೆಟ್ಟಿ ನಾರಾಯಣ ಮಂಗಳ, ನವೀನ್ ಪಾಟಾಳಿ ನಾರಾಯಣಮಂಗಳ ನಮ್ಮ ಪಾತ್ರಗಳಿಗೆ ಜೀವತುಂಬಿ ಅಭಿನಯಿಸಿದ್ದಾರೆ. ಮಧೂರಿನಲ್ಲಿ 3ನೇ ಪ್ರಯೋಗವಾದ ಈ ನಾಟಕವು, ತುಳು ಭಾಷೆಯಲ್ಲಿ ಪೌರಾಣಿಕ ನಾಟಕಗಳ ಸಾಲಿನಲ್ಲಿ ತನ್ನದೇ ಚಾಪನ್ನು ಇನ್ನು ಮುಂದೆ ಮೂಡಿಸುವಲ್ಲಿ ಯಾವುದೇ ಸಂಶಯವಿಲ್ಲ. ಇಂಚರ ವಿಟ್ಲ ಇವರ ಮಾಧುರ್ಯದ ಸಂಗೀತ ಇದ್ದರೆ ಏ.ಎನ್ ಕೊಳಂಬೆ ಇವರು ಮುಖ ವರ್ಣಿಕೆಯಲ್ಲಿ ಸಹಕರಿಸಿದರು.
ಅಯೋಧ್ಯೆಯ ರಾಜಕುಮಾರ ಶ್ರೀರಾಮಚಂದ್ರನು ಬಂದು ಅಹಲ್ಯ ಶಾಪವಿಮೋಚನ ಮಾಡುವವರೆಗಿನ ಕಥೆ ಇರುವ ಈ ಕಥೆಯು ಸೇರಿದ ಆಸ್ತಿಕರಲ್ಲಿ ಭಕ್ತಿ ಭಾವ ಮೂಡಿಸುವಲ್ಲಿ ಯಶಸ್ವಿಯಾಗಿದೆ ಎಂದು ಈ ನಾಟಕದ ಮೂಲಕ ಕಲಾ ಸೇವೆ ಮಾಡಿದ ನಾಟಕ ತಂಡದ ಸಂಚಾಲಕರಾದ ಯೋಗಿಶ್ ಕೃಷ್ಣನಗರ ಮತ್ತು ಆನಂದ ಶೇಡಿಕಾವು ತಿಳಿಸಿದ್ದಾರೆ. ಈ ನಾಟಕಕ್ಕೆ ನಿರ್ದೇಶನ ಮತ್ತು ಸಹ ನಿರ್ದೇಶನ ಕಣಿಪುರದ ಮುತ್ತು ಶ್ರೀ ಗೋಪಾಲಕೃಷ್ಣ ದೇವರು ಹಾಗೂ ಶೇಡಿಕಾವಿನ ಶಂಕರನಾರಾಯಣ ದೇವರೇ ಆಗಿರುವರು. ಅವರ ಆಶೀರ್ವಾದದ ಫಲದಿಂದ ಪ್ರದರ್ಶನಗೊಂಡ ಕಡೆಗಳಲ್ಲಿ ಪ್ರಶಂಸೆಯ ಮಾತುಗಳು ಕೇಳಿ ಬರುತ್ತಿವೆ ಎಂದು ನಾಟಕ ತಂಡದವರ ಮಾತಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.