ಮಧೂರು ಬ್ರಹ್ಮಕಲಶ: ಭರತನಾಟ್ಯದ ಕಲಾ ಪ್ರದರ್ಶನ ವೇಳೆ ನಿಮಿಷಗಳಲ್ಲಿ ರಚಿಸಿದ ಮಧೂರು ಮಹಾಗಣಪತಿಯ ಅಕ್ರಿಲಿಕ್ ಬಣ್ಣದ ಚಿತ್ರವನ್ನು ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿಗೆ ಸಮರ್ಪಿಸಿದ ಬೆಂಗಳೂರಿನ ಯುವ ಕಲಾವಿದ.
ಏಪ್ರಿಲ್ 02, 2025
0
ಮಧೂರು ಬ್ರಹ್ಮಕಲಶ; ಭರತನಾಟ್ಯದ ಕಲಾ ಪ್ರದರ್ಶನ ವೇಳೆ ನಿಮಿಷಗಳಲ್ಲಿ ರಚಿಸಿದ ಮಧೂರು ಮಹಾಗಣಪತಿಯ ಅಕ್ರಿಲಿಕ್ ಬಣ್ಣದ ಚಿತ್ರವನ್ನು ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿಗೆ ಸಮರ್ಪಿಸಿದ ಬೆಂಗಳೂರಿನ ಯುವ ಕಲಾವಿದ.
ಕಾಸರಗೋಡು: ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಮೂಡಪ್ಪ ಸೇವೆಯ ಸಾಂಸ್ಕತಿಕ ಕಾರ್ಯಕ್ರಮದಂಗವಾಗಿ ಇಂದು ಸಂಜೆ ಪುತ್ತಿಗೆ ಶ್ರೀ ಕುಮಾರ ಸ್ವಾಮಿ ನಾಟ್ಯಾಲಯದ ನಾಟ್ಯಗುರು ಶ್ರೀಮತಿ ಭವ್ಯ ಶ್ರೀ ಬಾಡೂರು ಶಿಷ್ಯ ವೃಂದದ ವತಿಯಿಂದ ನಡೆದ ಭರತನಾಟ್ಯ ಕಲಾ ಪ್ರದರ್ಶನ ವೇಳೆ ಮೂಲತಃ ಕಾಸರಗೋಡು ಕೆರೆಮನೆ ನಿವಾಸಿ, ಇದೀಗ ಬೆಂಗಳೂರಿನ ಕತ್ತರಿಗುಪ್ಪೆಯಲ್ಲಿ ವಾಸಿಸುತ್ತಿರುವ ದಿ. ಗಣೇಶ್ ಆಚಾರ್ಯರ ಸುಪುತ್ರ, ಯುವ ಕಲಾವಿದ ಯಾಜ್ಞಿಕ್ ಜಿ. ಆಚಾರ್ಯರವರು ವೇದಿಕೆಯಲ್ಲಿ ನಡೆದ ಭರತನಾಟ್ಯದ ಕಲಾ ಪ್ರದರ್ಶನ ವೇಳೆ ಕೇವಲ 10 ನಿಮಿಷದಲ್ಲಿ ರಚಿಸಿದ ಮಧೂರು ಮಹಾಗಣಪತಿಯ ಅಕ್ರಿಲಿಕ್ ಬಣ್ಣದ ಚಿತ್ರವನ್ನು ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿಗೆ ಸಮರ್ಪಿಸಲಾಯಿತು. ಬ್ರಹ್ಮಕಲಶೋತ್ಸವ ಸಮಿತಿ ಪ್ರದಾನ ಕಾರ್ಯದರ್ಶಿ ಜಯದೇವ ಖಂಡಿಗೆಯವರು ಸ್ವೀಕರಿಸಿದರು. ಈ ವೇಳೆ ಸಾಂಸ್ಕೃತಿಕ ಕಾರ್ಯಕ್ರಮದ ಸಹ ಸಂಚಾಲಕ ಮಹೇಶ್ ಆಚಾರ್ಯ ಮಧೂರು ಉಪಸ್ಥಿತರಿದ್ದರು.




