Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಮಧೂರು ಮೂಡಪ್ಪ ಸೇವೆ.

ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಮಧೂರು ಮೂಡಪ್ಪ ಸೇವೆ. ಸಾವಿರಾರು ಮಂದಿ ಭಕ್ತರ ಸಮ್ಮುಖದಲ್ಲಿ ಮೂಡಪ್ಪ ಸೇವೆಯನ್ನು ಸ್ವೀಕರಿಸಿದ ಮಧೂರಿನ ಬೊಡ್ಡಜ್ಜ. ದರ್ಶನಕ್ಕಾಗಿ ಉರಿ ಬಿಸಿಲೆನ್ನದೆ ಕಿಲೋ ಮೀಟರ್ ಗಟ್ಟಲೆ ಸರತಿ ಸಾಲಿನಲ್ಲಿ ಆಗಮಿಸುವ ಲಕ್ಷಾಂತರ ಭಕ್ತ ಜನತೆ.
ಕಾಸರಗೋಡು: 33 ವರ್ಷಗಳ ಬಳಿಕ ನಡೆದ ಐತಿಹಾಸಿಕ ಮೂಡಪ್ಪ ಸೇವೆಯು ಇಂದು ಬೆಳಗ್ಗೆ ಮಧೂರು ಶ್ರೀ ಮಹಾಗಣಪತಿಗೆ ನಡೆಯಿತು. ಸಾವಿರಾರು ಮಂದಿ ಭಕ್ತರು ನಿನ್ನೆ ಸಂಜೆಯಿಂದಲೇ ಕ್ಷೇತ್ರ ಪರಿಸರದಲ್ಲಿ ಉಪಸ್ಥಿತರಿದ್ದು, ಮೂದಪ್ಪ ಸೇವೆಯ ಕ್ಷಣಗಣನೆಗೆ ಕಾತರದಿಂದ ಕಾಯುತ್ತಿದ್ದರು. ನಿನ್ನೆ ರಾತ್ರಿ ಮೂಡಪ್ಪ ಸೇವೆಯ ವೈದಿಕ ಕಾರ್ಯಕ್ರಮಗಳು ನಡೆದು ಕವಾಟ ಬಂಧನ ನಡೆಯಿತು. ಬಳಿಕ ಇಂದು ಮುಂಜಾನೆ 6.20 ರ ಶುಭ ಮುಹೂರ್ತಕ್ಕೆ ಕಾವಾಟೋದ್ಘಾಟನೆ, ಅಪೂಪಪರ್ವತದ ಮಧ್ಯದಿಂದ ಮೂಡಿ ಬರುವ ಬೊಡ್ಡಜ್ಜ ಶ್ರೀ ಮಧೂರು ಸಿದ್ಧಿವಿನಾಯಕ ದೇವರ ದಿವ್ಯ ದರ್ಶನ, ವಿಶೇಷಾಭಿಷೇಕ, ಪ್ರಸನ್ನಪೂಜೆ, ಅಪೂಪಪ್ರಸಾದ ವಿತರಣೆ, 128 ಕಾಯಿ ಅಷ್ಟದ್ರವ್ಯ ಮಹಾಗಣಪತಿ ಯಾಗ, ಮಹಾಪೂಜೆ ನಡೆಯಿತು.
ಮೂಡಪ್ಪ ಸೇವೆಯ ಬಳಿಕ ದೇವರ ದರುಶನ ಹಾಗೂ ಅಪ್ಪ ಪ್ರಸಾದ ಸ್ವಿಕಾರಕ್ಕಾಗಿ ಲಕ್ಷಾಂತರ ಮಂದಿ ಭಕ್ತರು ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದು, ಸುಡುವ ಬಿಸಿಲನ್ನು ಲೆಕ್ಕಿಸದೆ ಸುಮಾರು ನಾಲ್ಕು ಕಿಲೋ ಮೀಟರ್ ದೂರದಲ್ಲಿರುವ ಉಳಿಯತ್ತಡ್ಕ, ಮೀಪುಗುರಿ ತನಕ ಎರಡು ಲೈನ್ ನಲ್ಲಿ ಭಕ್ತರು ಕ್ಷೇತ್ರಕ್ಕೆ ಸಾಗಿ ಬರುವುದು ಕಂಡು ಬರುತಿದೆ.
ಅಲ್ಲದೆ ನೀರ್ಚಾಲು ಭಾಗದಲ್ಲೂ ಕೂಡಾ ಸುಮಾರು 4 ಕಿಲೋ ಮೀಟರ್ ದೂರದ ವರೆಗೆ ಸರತಿ ಸಾಲಿನಲ್ಲಿ ಭಕ್ತರು ಆಗಮಿಸುತ್ತಿದ್ದು, ಭಕ್ತರ ಪಾಲಿಗೆ ಇದೀಗ ಮಹಾಗಣಪತಿಯನ್ನು ಕಣ್ತುಂಬಿಕೊಳ್ಳುವುದೇ ಮೂಲ ಆಧಾರವಾಗಿದೆ.
ಬಿಸಿಲ ಬೇಗೆಗೆ ಸರತಿ ಸಾಲಿನಲ್ಲಿ ಕಿಲೋ ಮೀಟರ್ ದೂರದಿಂದ ಕ್ರಮೀಕರಿಸಿ ಬರುತ್ತಿರುವ ಭಕ್ತರಿಗೆ ಸ್ವಯಂ ಸೇವಕರು ನೀರು, ಪಾನೀಯಗಳನ್ನು ನೀಡಿ ದಾಹ ತೀರಿಸಲು ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.
ಸುಡು ಬಿಸಿಲಿನ ತಾಪ ಸಹಿಸದ ಅನೇಕ ಭಕ್ತರು ಕೊಡೆ ಹಿಡಿದು ಸರತಿ ಸಾಲಿನಲ್ಲಿ ಆಗಮಿಸುತ್ತಿದ್ದರು.
ಅಲ್ಲದೆ ಮಗುವಿನ ಜೊತೆ ಆಗಮಿಸುವ ಮಹಿಳೆಯರನ್ನು, ವಯೋ ವೃದ್ಧರನ್ನು ಸರತಿ ಸಾಲಿನಲ್ಲಿ ಬಿಡದೆ ನೇರವಾಗಿ ದರ್ಶನ ಕರುಣಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಇದೀಗ ಬೆಳಗ್ಗಿನಿಂದ ಎರಡು ಲಕ್ಷದಷ್ಟು ಭಕ್ತರು ಆಗಮಿಸಿ ದೇವರ ದರ್ಶನ ಪಡೆದ ಬಗ್ಗೆ ಮಾಹಿತಿ ಲಭಿಸಿದೆ.
ಇನ್ನು ಕೂಡಾ ಭಕ್ತರ ಸಂದಣಿ, ಜನ ಜಂಗುಳಿಯಿದ್ದು, ಕ್ಷೇತ್ರ ಪರಿಸರದಲ್ಲಿ ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ಸ್ವಯಂ ಸೇವಕರು ಸನ್ನದ್ಧರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವೇದಿಕೆಗಳಲ್ಲಿ ಸಾಂಸ್ಕತಿಕ ಕಾರ್ಯಕ್ರಮ, ಭಜನೆ ಸಂಕೀರ್ತನೆ, ಎರಡು ಕಡೆಗಳ ಭೋಜನ ಶಾಲೆಯಲ್ಲಿ ನಿರಂತರವಾಗಿ ಅನ್ನದಾನ ವಿತರಣೆ ನಡೆಯುತ್ತಿದೆ. ಸಂಜೆ ಜಳಕದ ಬಲಿ, ಕಟ್ಟೆಪೂಜೆ, ಶ್ರೀದೇವರಕೆರೆಯಲ್ಲಿ ಅವಭೃತ ಸ್ನಾನ, ದರ್ಶನಬಲಿ, ರಾಜಾಂಗಣ ಪ್ರಸಾದ, ಧ್ವಜಾವರೋಹಣ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.