ಸಿಪಿಐ ಕಣ್ವತೀರ್ಥ ಬ್ರಾಂಚ್ ಸಮ್ಮೇಳನ.
ಮಾರ್ಚ್ 05, 2025
0
ಸಿಪಿಐ ಕಣ್ವತೀರ್ಥ ಬ್ರಾಂಚ್ ಸಮ್ಮೇಳನ.
ಮಂಜೇಶ್ವರ: ಸಿಪಿಐ ಕಣ್ವತೀರ್ಥ ಬ್ರಾಂಚ್ ಸಮ್ಮೇಳನವು ಕಾಂ. ಮೋನಪ್ಪ ಬಂಜನ್ ನಗರ, ಕಾಂ. ಜಾ ಅಂತ ರಾಘವ ಪಟ್ನ ವೇದಿಕೆಯಲ್ಲಿ ನಡೆಯಿತು. ಪಕ್ಷದ ಹಿರಿಯ ನೇತಾರ ವಾಮನ ಕೆ ಧ್ವಜಾರೋಹಣಗೈದರು. ಹುತಾತ್ಮರಿಗೆ ಶ್ರದಾಂಜಲಿ ಅರ್ಪಿಸಲಾಯಿತು.ಜಿಲ್ಲಾ ಸಮಿತಿ ಸದಸ್ಯರಾದ ರಾಮಕೃಷ್ಣ ಕಡಂಬಾರ್ ಸಮ್ಮೇವನ್ನು ಉದ್ಘಾಟಿಸಿದರು.ಕ್ರಷ್ಣಪ್ಪ ಕಣ್ವತೀರ್ಥ ಅಧ್ಯಕ್ಷತೆ ವಹಿಸಿದರು. ಮಂಡಲ ಸಮಿತಿ ಸದಸ್ಯೆ ನಾರಾಯಣಿ ರಾಜನ್, ಲೋಕಲ್ ಕಾರ್ಯದರ್ಶಿ ಶ್ರೀಧರ್ ಆರ್.ಕೆ, ಮೋಟಾರ್ ಯೂನಿಯನ್ ಜಿಲ್ಲಾ ಅಧ್ಯಕ್ಷ ಮುಸ್ತಫಾ ಕಡಂಬಾರ್ ಮೊದಲಾದವರು ಭಾಷಣ ಮಾಡಿದರು. ಕೇರಳ ಕೃಷಿ ವಿಶ್ವವಿದ್ಯಾಲಯ ಫುಡ್ ಸೈನ್ಸ್ & ನ್ಯೂಟ್ರಿಷಿಯನ್ ನಲ್ಲಿ PHD ಪಡೆದ ಕಾಂ. ರಮ್ಯಾ ರಾಜನ್ ರಿಗೆ ಸ್ಮರಣಿಕೆ ನೀಡಲಾಯಿತು. ಅವರ ಅನುಪಸ್ಥಿತಿಯಲ್ಲಿ ಅವರ ತಾಯಿ ನಾರಾಯಣಿ ರಾಜನ್ ಸ್ಮರಣಿಕೆ ಪಡೆದುಕೊಂಡರು. ಕೇಶವ ಕೆ, ಉಮೇಶ್ ಕುಚ್ಚಿಕ್ಕಾಡ್, ಉಮೇಶ್ ಉಳಿಯ, ಸೇಸಮ್ಮ ಕೊಳಕೆ, ಯಮುನಾ ಕಣ್ವತೀರ್ಥ, ನಿರಂಜನ್ ಕಣ್ವತೀರ್ಥ,ಸೂರಜ್,ನೂತನ ಕಾರ್ಯದರ್ಶಿಯಾಗಿ ಕಿರಣ್ ಮಾಡ ಹಾಗೂ ಜೊತೆ ಕಾರ್ಯದರ್ಶಿಯಾಗಿ ಪ್ರಥಮ ಕಣ್ವತೀರ್ಥ ಆಯ್ಕೆಯಾದರು. ಕಿರಣ್ ಮಾಡ ಸ್ವಾಗತಿಸಿ, ದಯಾಕರ ಮಾಡ ವಂದಿಸಿದರು.




