ಸರಳತೆಯ ಜೀವನ ಸಾಗಿಸಿದರೆ ಸಮಗ್ರ ವ್ಯಕ್ತಿತ್ವ ನಿರ್ಮಾಣ ಸಾಧ್ಯ - ಸಾದ್ವಿ ಶ್ರೀ ಮಾತಾನಂದಮಯೀ.
ಮಾರ್ಚ್ 05, 2025
0
ಸರಳತೆಯ ಜೀವನ ಸಾಗಿಸಿದರೆ ಸಮಗ್ರ ವ್ಯಕ್ತಿತ್ವ ನಿರ್ಮಾಣ ಸಾಧ್ಯ - ಸಾದ್ವಿ ಶ್ರೀ ಮಾತಾನಂದಮಯೀ.
ಮಂಜೇಶ್ವರ: ಸರಳತೆ ಸಜ್ಜನಿಕೆಯನ್ನೊಳಗೊಂಡು ಸಮಾಜಮುಖಿಯಾಗಿ ಜೀವನ ಸಾಗಿಸಿದರೆ ಸಮಗ್ರ ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಎಂದು ಶ್ರೀ ಕ್ಷೇತ್ರ ಒಡಿಯೂರಿನ ಪರಮ ಪೂಜ್ಯ ಶ್ರೀ ಶ್ರೀ ಸಾದ್ವಿ ಮಾತಾನಂದಮಂಯೀ ನುಡಿದರು. ಅವರು ಮಂಜೇಶ್ವರ ಕೀರ್ತೇಶ್ವರ ಶ್ರೀ ಸದಾಶಿವ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದಂಗವಾಗಿ ನಿನ್ನೆ ರಾತ್ರಿ ನಡೆದ ಮಾತೆಯರ ಸಮಾವೇಶ "ಮಾತೃ ಸಂಗಮ" ವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಆದರ್ಶ ಬದುಕು ನಮ್ಮದಾಗಬೇಕಾದರೆ ನಾವು ಬದುಕುವುದರೊಂದಿಗೆ ಬೇರೆಯವರಿಗೆ ಬದುಕುವುದಕ್ಕಾಗಿ ಅವಕಾಶ ಮಾಡುವುದೇ ಜೀವನದ ಸಾರ್ಥಕತೆ ಎಂದು ತಮ್ಮ
ಆಶೀರ್ವಚನದಲ್ಲಿ ನುಡಿದರು. ಸಭೆಯ ಅಧ್ಯಕ್ಷತೆಯನ್ನು ಶ್ರೀ ಕೀರ್ತೇಶ್ವರ ಮಹಿಳಾ ಮಂಡಳಿ ಅಧ್ಯಕ್ಷೆ ಶ್ರೀಮತಿ ರೇವತಿ ಶೈಲೇಶ್ ವಹಿಸಿದರು. ವೇದಿಕೆಯಲ್ಲಿ ಶ್ರೀಮತಿ ಡಾ. ಕೆ.ವಿ. ಮಾಲಿನಿ, ನಿವೃತ ಪ್ರಾಂಶುಪಾಲೆ, ಕೆನರಾ ಕಾಲೇಜು, ಮಂಗಳೂರು, ಶ್ರೀಮತಿ ಶಶಿಕಲಾ ಸುವರ್ಣ
ಯೋಜನಾಧಿಕಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಂಜೇಶ್ವರ ತಾಲೂಕು, ಶ್ರೀಮತಿ ಅಶ್ವಿನಿ ಎಮ್. ಎಲ್ ರಾಷ್ಟ್ರೀಯ ಮಹಿಳಾ ಮೋರ್ಚಾ ಸದಸ್ಯೆ, ಪ್ರೊ. ಸುಜಾತ ಸರಕಾರಿ ಕಾಲೇಜು ಕಾಸರಗೋಡು, ಶ್ರೀಮತಿ ಜೀನ್ ಲವಿನಾ ಮೊಂತೇರೋ ಅಧ್ಯಕ್ಷರು ಮಂಜೇಶ್ವರ ಗ್ರಾಮ ಪಂಚಾಯತ್, ಶ್ರೀಮತಿ ಕೃಷ್ಣವೇಣಿ ಮುಖ್ಯೋಪಾಧ್ಯಾಯಿನಿ, ಶ್ರೀ ವಿದ್ಯಾವರ್ಧಕ ಜಿ.ಎಸ್.ಎಸ್ ಕೊಡ್ಲಮೊಗರು, ಶ್ರೀಮತಿ ರೇಖಾ ಪ್ರೇಮ್ ದಾಸ್, ಶ್ರೀಮತಿ ಸುಪ್ರೀಯಾ ಶೆಣೈ ಮಂಜೇಶ್ವರ ಗ್ರಾಮ ಪಂಚಾಯತ್ ಸದಸ್ಯರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ಶುಭಾಸಂಶನೆಗೈದರು. ಕ್ಷೇತ್ರದ ಮಹಿಳಾ ಸಂಘದ ಸದಸ್ಯೆ ಕು. ತೃಪ್ತಿ ಪ್ರಾರ್ಥನೆ ಹಾಡಿ, ಸ್ವಾಗತಿಸಿದರು. ಶ್ರೀಮತಿ ಅನುಷಾ ಶರತ್ ಕಾರ್ಯಕ್ರಮ ನಿರೂಪಿಸಿ, ಮಹಿಳಾ ಸಂಘದ ಸದಸ್ಯೆ ಶ್ರೀಮತಿ ಸ್ನೇಹ ನವೀನ ವಂದಿಸಿದರು. ಬಳಿಕ ಸಾಂಸ್ಕತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಕೀರ್ತೇಶ್ವರ ಮಹಿಳಾ ಮಂಡಳಿಯವರಿಂದ ನೃತ್ಯ ಸಂಗಮ, ನಾಟ್ಯ ಮಯೂರ ಡಾ. ಶ್ರೀಕಾಂತ್ ಕೊಂಡಾಣ ನೇತೃತ್ವದ ನಾಲ್ವಡಿ ಕೃಷ್ಣರಾಜ ಒಡೆಯರು ಪ್ರಶಸ್ತಿ ವಿಜೇತ ತಂಡ ಯಶಸ್ವಿ ಡಾನ್ಸ್ ಗ್ರೂಪ್ ಬೇರಿಕೆ ರಕ್ತಶ್ವರಿ ಕಟ್ಟೆ ಇವರಿಂದ "ನೃತ್ಯ ವೈಭವ" ನಡೆಯಿತು. ವೈದಿಕದಂಗವಾಗಿ ಬೆಳಿಗ್ಗೆ ಅಂಕುರ ಪೂಜೆ, 108 ಕಾಯಿ ಮಹಾಗಣಪತಿ ಹೋಮ, ತ್ರಿಕಾಲ ಪೂಜೆ, ಪವಮಾನ ಹೋಮ, ಶತರುದ್ರಾಭಿಷೇಕ, ಮಹಾರುದ್ರಯಾಗ, ಮಹಾಪೂಜೆ ಅನ್ನಸಂತರ್ಪಣೆ, ಕೀರ್ತೇಶ್ವರ ಮಹಿಳಾ ಮಂಡಳಿ ಇವರಿಂದ ಭಜನಾ ಸಂಕೀರ್ತನೆ, ಸಂಜೆ ಶೂಲಿನಿ ಹೋಮ, ಮಹಾಬಲಿ ಪೀಠ ಪ್ರತಿಷ್ಠೆ ನಾಗದೇವರ ಬನದಲ್ಲಿ ವಾಸ್ತು ಪೂಜೆ, ಕಲಶಾಧಿವಾಸ ಅಧಿವಾಸ ಹೋಮ, ಅಂಕುರ ಪೂಜೆ, ರಾತ್ರಿ ಪೂಜೆ ಅನ್ನಸಂತರ್ಪಣೆ ನಡೆಯಿತು.

















