ದೇವಸ್ಥಾನ ಗ್ರಾಮದ ಶ್ರದ್ಧಾ ಕೇಂದ್ರಗಳು ಆಗಿರುವುದು ಮಾತ್ರವಲ್ಲದೆ ಶಕ್ತಿ ಕೇಂದ್ರಗಳೂ ಆಗಿವೆ - ಎಡನೀರು ಶ್ರೀ.
ಮಾರ್ಚ್ 06, 2025
0
ಮನುಷ್ಯರಾದರೆ ಸಾಲದು ಮನುಷ್ಯತ್ವ ಹೊಂದಿರಬೇಕು ಆಗಿದ್ದ ಮಾತ್ರವೇ ಮನುಷ್ಯನಾಗಿ ಹುಟ್ಟಿದಕ್ಕೆ ಸಾರ್ಥಕ - ಕೊಂಡೆವೂರು ಶ್ರೀ.
ಮಂಜೇಶ್ವರ: ಮನುಷ್ಯರಾದರೆ ಸಾಲದು ಮನುಷ್ಯತ್ವ ಹೊಂದಿರಬೇಕು ಆಗಿದ್ದ ಮಾತ್ರವೇ ಮನುಷ್ಯನಾಗಿ ಹುಟ್ಟಿದಕ್ಕೆ ಸಾರ್ಥಕವೆಂದು ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ನುಡಿದರು. ಕೀರ್ತೇಶ್ವರ ಶ್ರೀ ಸದಾಶಿವ ದೇವಸ್ಥಾನದಲ್ಲಿ ನಡೆಯುತ್ತಿರುವ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಐದನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ‘ದೇವರಿಗಾಗಿ ಒಟ್ಟಾಗಿ ಕೆಲಸ ಮಾಡಿದಾಗ ತನ್ನ ಮನಸ್ಸಿನ ಕೋಪ, ವೈರತ್ವಗಳು ನಾಶವಾಗಿ ಒಗ್ಗಟ್ಟು ನಿರ್ಮಾಣವಾಗಲು ಸಾಧ್ಯ. ಮನಸ್ಸಿನಲ್ಲಿ ಕೊಳಕು ತುಂಬಿದಲ್ಲಿ ಶಾಂತಿ ಸಮಾಧಾನ ಸಿಗಲು ಸಾಧ್ಯವಿಲ್ಲ. ಹಾಗಾಗಿ ಮನದ ಕಲ್ಮಶ ಬಿಟ್ಟು ಭಕ್ತಿ ಭಾವನೆಯ ಮಧ್ಯೆ ದೇವಸ್ಥಾನಕ್ಕೆ ಬಂದಾಗ ದೇವರು ಪ್ರತಿಫಲ ನೀಡುವನು’ ಎಂದವರು ತಮ್ಮ ಸಂದೇಶದಲ್ಲಿ ತಿಳಿಸಿದರು. ಎಡನೀರು ಜಗದ್ಗುರು ಶ್ರೀ ಶಂಕರಾಚಾರ್ಯ ಮಠದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಆಶೀರ್ವಚನವಿತ್ತು
‘ಎಲ್ಲೋ ದಾರಿಯಲ್ಲಿ ಇದೆ ಎಂಬ ಕಾರಣಕ್ಕೆ ದೇವಸ್ಥಾನಕ್ಕೆ ಹೋಗುವುದಲ್ಲ. ಮನೆಯಿಂದ ಹೊರಡುವಾಗಲೇ ಸಂಕಲ್ಪ ಮಾಡಿ ದೇವಸ್ಥಾನಕ್ಕೆ ಬರಬೇಕು. ದೇವಸ್ಥಾನ ಆ ಗ್ರಾಮದ ಶ್ರದ್ಧಾ ಕೇಂದ್ರಗಳು ಆಗಿರುವುದು ಮಾತ್ರವಲ್ಲದೆ ಶಕ್ತಿ ಕೇಂದ್ರಗಳೂ ಆಗಿವೆ. ಗ್ರಾಮದ ದೇವಸ್ಥಾನ ಧಾರ್ಮಿಕ ಕೇಂದ್ರವಾಗಿರುವ ಜತೆಗೆ ಬಡವರ ಶಿಕ್ಷಣಕ್ಕೆ, ಅಸಕ್ತರಿಗೆ ನೆರವಾಗುವ ಸಾಮಾಜಿಕ ಕೆಲಸಗಳಿಗೂ ಒತ್ತು ನೀಡಲಿ ‘ ಎಂದು ಆಶಿಸಿದರು. ಮಂಜೇಶ್ವರ ಶ್ರೀ ಶನೈಶ್ಚರ ಮಂದಿರದ
ಧರ್ಮದರ್ಶಿ ಶ್ರೀ ಕೃಷ್ಣ ಭಟ್ ದೀಪ ಪ್ರಜ್ವಲನೆಗೈದರು. ಶ್ರೀ ವಿಶ್ವನಾಥ್ ಪೊಯ್ಯಕಂಡ ಆಡಳಿತ ಮೋಕೇಸರರು, ಶ್ರೀ ಕೀರ್ತೇಶ್ವರ ಸದಾಶಿವ ದೇವಸ್ಥಾನ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಶ್ರೀ ಸೋಮಶೇಖರ್ ಎಮ್. ಎನ್. ಉಪಾಧ್ಯಕ್ಷರು, ಶ್ರೀ ಕ್ಷೇತ್ರ ಕನಿಲ, ಶ್ರೀ ರಾಮಚಂದ್ರ ಬಡಾಜೆ ಅಧ್ಯಕ್ಷರು ಮಂಜೇಶ್ವರ ಸರ್ವಿಸ್ ಕೋ ಆಪ್ ಬ್ಯಾಂಕ್, ಶ್ರೀ ವೆಂಕಟೇಶ್ ಅಧ್ಯಕ್ಷರು ಕರಾವಳಿ ಕ್ರೆಡಿಟ್ ಕೋ ಆಪ್ ಸೊಸೈಟಿ, ಮಂಗಳೂರು, ಶ್ರೀ ಅನಿಲ್ ಕುಮಾರ್ ಎಮ್ ಜನರಲ್ ಮ್ಯಾನೆಜರ್ ಕರಾವಳಿ ಕ್ರೆಡಿಟ್ ಕೋ.ಅಪರೇಟಿವ್ ಸೊಸೈಟಿ, ಮಂಗಳೂರು, ಶ್ರೀ ವಿಶ್ವನಾಥ ಮಡಿವಾಳ ಪಾಲ್ ಅಧ್ಯಕ್ಷರು, ಬಂಟರ ಸಂಘ, ಮಂಜೇಶ್ವರ, ಶ್ರೀ ಹರಿರಾಮಚಂದ್ರ ಅಧ್ಯಕ್ಷರು ಗಾಣಿಗ ಸಂಘ ಪುತ್ತೂರು ತಾಲೂಕು, ಶ್ರೀ ಸಂಜೀವ ಅಡ್ಯಾರ್ ಅಧ್ಯಕ್ಷರು ಸಫಲ ಸೌಹಾರ್ದ ಸಹಕಾರಿ ಸಂಘ, ಗುರುಪುರ ಕೈಕಂಬ, ಶ್ರೀ ಕಿರಣ್ ಶೆಟ್ಟಿ ಆಡಳಿತ ಮೋಕೇಸರರು ಉದ್ಯಾವರ ಮಾಡ, ಶ್ರೀ ನರಸಪ್ಪ ಸಪಲ್ಯ (ಪ್ರಭಾರ ಅಧ್ಯಕ್ಷರು ಗಾಣಿಗ ಸಂಘ ಬಂಟ್ವಾಳ ತಾಲೂಕು, ಶ್ರೀ ಕೇಶವ ಮಳಲಿ ಆಡಳಿತ ಮೊಕ್ತೇಸರರು ಶ್ರೀ ಉಮಾಮಹೇಶ್ವರ ಕ್ಷೇತ್ರ ಅತ್ತಾವರ, ಮಂಗಳೂರು, ಶ್ರೀ ಸುಪ್ರೀತ್ ಯು. ಎ. ಇ ಗಾಣಿಗ ಫ್ಯಾಮಿಲಿ ಟ್ರಸ್ಟ್ ಮುಖ್ಯಸ್ಥರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ಶುಭಾಸಂಶನೆಗೈದರು. ಈ ವೇಳೆ ವಿವಿಧ ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಸಾಧನೆಗೈದ ಗಣೇಶ್, ಅಶೋಕ್, ಲಕ್ಷ್ಮಣ, ದಿನೇಶ್ ನಟ್ಟಿ, ಸುರೇಶ್ ಎಂ. ಕೆ, ಹರೀಶ್ ಶೆಟ್ಟಿ ಮಾಡ, ವಿಜಯ ಕುಮಾರ್ ಕೊಡಿಯಾಲ್ ಬೈಲ್, ಡಾ. ನಿರುಪಮಾ ಪುರುಷೋತ್ತಮ್ ಇವರನ್ನು ಕೀರ್ತಿ ಕಲಾವೃಂದ ಕೀರ್ತೆಶ್ವರ ವತಿಯಿಂದ ಸನ್ಮಾನಿಸಲಾಯಿತು. ಬ್ರಹ್ಮಕಲಶೋತ್ಸವ ಸಮಿತಿ ಜತೆ ಕಾರ್ಯದರ್ಶಿ ಯಶ್ ರಾಜ್ ಉದ್ಯಾವರ ಸ್ವಾಗತಿಸಿ, ಧಾರ್ಮಿಕ ಮುಂದಾಳು ಹರೀಶ್ ಶೆಟ್ಟಿ ಮಾಡ ನಿರೂಪಿಸಿ , ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ದಿನೇಶ್ ನಟ್ಟಿ ಕೀರ್ತೆಶ್ವರ ವಂದಿಸಿದರು. ವೈದಿಕ ಕಾರ್ಯಕ್ರಮದಂತೆ ಬೆಳಿಗ್ಗೆ ಗಣಪತಿ ಹೋಮ, ಅಂಕುರ ಪೂಜೆ, ತತ್ವ ಹೋಮ, ತತ್ವಕಲಶ, ಚಂಡಿಕಾಯಾಗ, ನಾಗದೇವರಿಗೆ ಕಲಶಾಭಿಷೇಕ, ಬ್ರಹ್ಮಕಲಶ ಮಂಡಲ ರಚನೆ, ಮಹಾಪೂಜೆ, ಅನ್ನಸಂತರ್ಪಣೆ, ಶ್ರೀ ಶಾಸ್ತಾವೇಶ್ವರ ಭಜನಾ ಮಂಡಳಿ ಇವರಿಂದ ಭಜನಾ ಸಂಕೀರ್ತನೆ, ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಕೀರ್ತಿ ಕಲಾವೃಂದ ಕೀರ್ತೇಶ್ವರ
ಪಾಯೋಜಕತ್ವದಲ್ಲಿ ಶ್ರೀ ವಿಜಯ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ 'ಶಿವದೂತ ಗುಳಿಗೆ' ಎಂಬ ಭಕ್ತಿ ಪ್ರಧಾನ ನಾಟಕ ಪ್ರದರ್ಶನಗೊಂಡಿತು.










