Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಮನೆಗೆ ತಲುಪಿದ ತರಗತಿ ಕೋಣೆ ಉದ್ಯಾವರ ಗುಡ್ಡೆ ಶಾಲೆಯ ಸಲ್ಮಾನುಲ್ ಫಾರಿಷ್ ಗೆ ಮಹದಾನಂದ.

ಮನೆಗೆ ತಲುಪಿದ ತರಗತಿ ಕೋಣೆ ಉದ್ಯಾವರ ಗುಡ್ಡೆ ಶಾಲೆಯ ಸಲ್ಮಾನುಲ್ ಫಾರಿಷ್ ಗೆ ಮಹದಾನಂದ.
ಮಂಜೇಶ್ವರ: ಸಮಗ್ರ ಶಿಕ್ಷಾ ಕೇರಳ ಬಿ. ಆರ್. ಸಿ. ಮಂಜೇಶ್ವರದ ವತಿಯಿಂದ ಸ್ಟಾರ್ಸ್ ಯೋಜನೆಯ ಭಾಗವಾಗಿ ವರ್ಚುವಲ್ ಕ್ಲಾಸ್ ರೂಮನ್ನು ಸರಕಾರಿ ಪ್ರೌಢಶಾಲೆ ಉದ್ಯಾವರದಲ್ಲಿ ಸ್ಥಾಪಿಸಲಾಯಿತು. ಇದರ ಉದ್ಘಾಟನೆಯನ್ನು ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿಗಳಾದ ದಿನೇಶ ವಿ. ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ಮಂಜೇಶ್ವರದ ಬಿ. ಪಿ. ಸಿ. ಸುಮಾ ದೇವಿಯವರು ಟ್ಯಾಬ್ಲೆಟ್ ಮತ್ತು ಅಗತ್ಯದ ಉಪಕರಣಗಳನ್ನು ಹಸ್ತಾಂತರಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ನಾರಾಯಣ ದೇಲಂಪಾಡಿಯವರು ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಶಾಲಾ ರಕ್ಷಕ - ಶಿಕ್ಷಕ ಸಂಘದ ಅಧ್ಯಕ್ಷರಾದ ಅಬೂಬಕ್ಕರ್ ಸಿದ್ದಿಕ್ ಅಧ್ಯಕ್ಷತೆ ವಹಿಸಿದರು. ಶಿಕ್ಷಕರಾದ ಗುರುರಾಜ್ ತರಗತಿಯನ್ನು ಸ್ಥಾಪಿಸಲು ಅಗತ್ಯವಾದ ತಾಂತ್ರಿಕ ಬೆಂಬಲವನ್ನು ನೀಡಿದರು. ಶಿಕ್ಷಕ ಜಯರಾಜ್ ರವರು ಧನ್ಯವಾದ ಸಮರ್ಪಿಸಿದರು.
ಆಸ್ಟಿಯೋಪೆಟ್ರೋಸಿಸ್ ಕಾಯಿಲೆಯಿಂದ ಬಳಲುತ್ತಿದ್ದು ಶಾಲೆಗೆ ಹಾಜರಾಗಲು ಕಷ್ಟಪಡುತ್ತಿರುವ ಉದ್ಯಾವರ ಶಾಲೆಯ 6ನೇ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿಯಾದ ಮಹಮ್ಮದ್ ಸಲ್ಮಾನುಲ್ ಫಾರಿಸ್ ಗೆ ಮನೆಯಿಂದಲೇ ತರಗತಿಯಲ್ಲಿ ಭಾಗವಹಿಸುವ ವ್ಯವಸ್ಥೆಯನ್ನು ಕಲ್ಪಿಸಲಾಯಿತು. ಇನ್ನು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಯಾದ ಫಾರಿಸ್, ತನ್ನ ಮನೆಯ ಕೋಣೆಯಲ್ಲಿ ಶಿಕ್ಷಕರ ತರಗತಿಗಳನ್ನು, ಸ್ನೇಹಿತರನ್ನು ನೋಡಬಹುದು, ಪ್ರಶ್ನೆಗಳನ್ನು ಕೇಳಬಹುದು, ಸ್ನೇಹಿತರೊಂದಿಗೆ ಮಾತುಕತೆ ನಡೆಸಬಹುದು. ಮನೆಯಲ್ಲಿ ತರಗತಿಯ ವಾತಾವರಣವನ್ನು ವ್ಯವಸ್ಥೆಗೊಳಿಸಿರುವ ಕುರಿತು ಫಾರಿಸ್ ನ ಮನೆಯವರು ಸಂತೋಷ ವ್ಯಕ್ತಪಡಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.