ಕೇಂದ್ರ ಸರ್ಕಾರದ ವಿರುದ್ಧ ಸಿ.ಐ.ಟಿ.ಯು ಆಶಾ ಕಾರ್ಯಕರ್ತೆಯರಿಂದ ಉಪ್ಪಳ ಅಂಚೆ ಕಚೇರಿ ಮುಂದೆ ಧರಣಿ.
ಮಾರ್ಚ್ 21, 2025
0
ಕೇಂದ್ರ ಸರ್ಕಾರದ ವಿರುದ್ಧ ಸಿ.ಐ.ಟಿ.ಯು ಆಶಾ ಕಾರ್ಯಕರ್ತೆಯರಿಂದ ಉಪ್ಪಳ ಅಂಚೆ ಕಚೇರಿ ಮುಂದೆ ಧರಣಿ.
ಮಂಜೇಶ್ವರ: ಕೇಂದ್ರ ಸರ್ಕಾರ 2005 ರಲ್ಲಿ ಆಶಾ ಯೋಜನೆ ಯನ್ನು ಜಾರಿಗೆ ತಂದು ಅದರ ಮೂಲಕ ಸಾಮಾಜಿಕ ಕಾರ್ಯಕರ್ತರಾಗಿ ನೇಮಕವಾದವರನ್ನು ಕೇಂದ್ರ ಸರ್ಕಾರ ಸ್ಥಿರ ಕಾರ್ಮಿಕರಾಗಿ ನೇಮಿಸಬೇಕು, ಮಿನಿಮಮ್ ವೇತನ 26000 ವಾಗಿ ಕೊಡಬೇಕು ,ಪಿ ಎಫ್, ಪೆನ್ಸನ್ ಗ್ರಾಟಿವಿಟಿ ನೀಡಬೇಕು, ಇನ್ಸುರೆನ್ಸ್ ಪುನರ್ ಸ್ತಾಪಿಸಬೇಕು, ಕೇಂದ್ರ ಬಜೆಟ್ ನಲ್ಲಿ ರಾಜ್ಯ ಸರ್ಕಾರಕ್ಕೆ ನೀಡುವ ಅರ್ಹವಾದ ಪಾಲು ನೀಡಬೇಕು ಎಂಬ ಘೋಷನೆಯನ್ನು ಮುಂದಿಟ್ಟು ಕೇಂದ್ರ ಸರ್ಕಾರದ ಕಛೇರಿಯಾದ ಉಪ್ಪಳ ಪೋಸ್ಟ್ ಆಫೀಸ್ ಮುಂಭಾಗದಲ್ಲಿ ಧರಣಿಯನ್ನು ನಡೆಸಿತು. ಸಿ.ಐ.ಟಿ.ಯು ಜಿಲ್ಲಾ ಕಾರ್ಯದರ್ಶಿ ಕಾಂ. ಗಿರಿ ಕೃಷ್ಣನ್ ಉದ್ಘಾಟಿಸಿ ಮಾತನಾಡಿದರು. ಅವರು ಮಾತನಾಡಿ ದೇಶವ್ಯಾಪಕವಾಗಿ ಆಶಾ ಕಾರ್ಯಕರ್ತೆಯರನ್ನು ಅವಗಣಿಸುವ ಕೇಂದ್ರ ಸರ್ಕಾರ ಇನ್ಸೆಂಟಿವ್ ಮುಖಾಂತರ ಕೇವಲ 60 % ಮಾತ್ರ ಕೊಡುತ್ತಿದ್ದು ಬಾಕಿ ಮೊತ್ತ 40% ರಾಜ್ಯ ಸರ್ಕಾರಗಳು ಕೊಡುತ್ತಿದ್ದು ಕೇಂದ್ರದ ಯೋಜನೆಯಾದರೂ, ಅವರಿಗೆ 3000 ಮಾತ್ರ ಇನ್ಸೆಂಟಿವ್ ಕೊಡುತ್ತದೆ ಅದರಲ್ಲೂ 1800 ಮಾತ್ರ ಪ್ರತಿ ಆಶಾ ಕಾರ್ಯಕರ್ತೆಯರಿಗೆ ನೀಡುತ್ತದೆ. ಈ ಹಣವನ್ನು ರಾಜ್ಯ ಸರ್ಕಾರಕ್ಕೆ ಕೊಡದೆ ಸತಾಯಿಸುತ್ತಿದ್ದು ಅವರಿಗೆ ಹೆರಿಗೆ ಭತ್ಯೆ, ಹಾಗೂ ಇತರ ಸರ್ವೆ ಮುಖಾಂತರ ಕೇರಳ ಸರ್ಕಾರ ಒನೆರೆರಿಯಮ್ ಕೊಟ್ಟು ಅವರಿಗೆ ಅಲ್ಪಮಟ್ಟದ ಪ್ರಯೋಜನ ಲಭಿಸುವಂತೆ ಮಾಡುತ್ತಿದೆ ಆಶಾ ಕಾರ್ಯಕರ್ತೆಯನ್ನು ಸ್ಥಿರ ಉದ್ಯೋಗಿಯಾಗಿ ಘೋಷಿಸದ ಕೇಂದ್ರ ಸರ್ಕಾರದ ನೀತಿ ಖಂಡನೀಯವಾಗಿದೆ. ಈ ರೀತಿ ಕೇಂದ್ರವನ್ನು ಆಳುವ ಜನ ವಿರೋಧಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಶೋಷಣೆ ಮಾಡುತ್ತಿದ್ದು, ಈಗ ಕೇರಳದಲ್ಲಿ ಜನರ ದಾರಿ ತಪ್ಪಿಸುವ ರೀತಿಯಲ್ಲಿ ಪ್ರತಿಭಟನೆ ಬಿಜೆಪಿ ಕಾಂಗ್ರೆಸ್ ಕಪಟ ಮುಖವನ್ನು ತೋರಿಸುವಂತೆ ಕಾಣುತ್ತಿದ್ದು ಬಿಜೆಪಿ ನಾಯಕರು ಆಶಾ ಕಾರ್ಯಕರ್ತರ ಮೇಲೆ ತೋರಿಸುವ ಮೊಸಳೆ ಕಣ್ಣೀರು ಕೋಣೆಗೊಳಿಸಿ ಕೇಂದ್ರದ ಯೋಜನೆಯಾದ ಆಶಾ ಕಾರ್ಯಕರ್ತೆಯರ ನ್ಯಾಯವಾದ ಬೇಡಿಕೆಗೆ ಸ್ಪಂದಿಸಿ ನ್ಯಾಯ ಒದಗಿಸಲು ಮುಂದಾಗಬೇಕು ಎಂದು ಅವರು ಹೇಳಿದರು. ಸಿ.ಐ.ಟಿ.ಯು ಆಶಾ ಯೂನಿಯನ್ ಮಂಜೇಶ್ವರ ಏರಿಯಾ ಅಧ್ಯಕ್ಷೆ ಜಲಜಾ .ಸಿ ಅಧ್ಯಕ್ಷತೆ ವಹಿಸಿದ್ದರು. ಸಿ.ಐ.ಟಿ.ಯು ಮಂಜೇಶ್ವರ ಏರಿಯಾ ಕಾರ್ಯದರ್ಶಿ ಪ್ರಶಾಂತ್ ಕನಿಲ ,ಡಿ ಕಮಲಾಕ್ಷ, ಸತೀಶ್ ಎಲಿಯಾನ, ಹುಸೇನ್ ಮಾಸ್ಟರ್ ಮೊದಲಾದವರು ಉಪಸ್ಥಿತರಿದ್ದರು. ಕೆ.ಎನ್ ಶುಭಾ ಸ್ವಾಗತಿಸಿದರು.


