Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಪೈವಳಿಕೆ ಯಲ್ಲಿ ಸಿಪಿಐಎಂ ವತಿಯಿಂದ ವಿಚಾರ ಸಂಕಿರಣ.

ಪೈವಳಿಕೆ ಯಲ್ಲಿ ಸಿಪಿಐಎಂ ವತಿಯಿಂದ ವಿಚಾರ ಸಂಕಿರಣ.
ಪೈವಳಿಕೆ: ಸಿಪಿಐಎಂ ಕಾಸರಗೋಡು ಜಿಲ್ಲಾ ಸಮ್ಮೇಳನವು ಫೆಬ್ರವರಿ 5,6,7 ರಂದು ಕಾಞಂಗಾಡ್ ನಲ್ಲಿ ನಡೆಯಲಿದೆ ಸಮ್ಮೇಳನದ ಅಂಗವಾಗಿ ಸಿಪಿಐಎಂ ವತಿಯಿಂದ ಕನ್ನಡ ಪ್ರಮುಖ ಸಾಹಿತಿ ನಿರಂಜನರ ಶತಾಬ್ದಿ ಸಂಭ್ರಮದ ಅಂಗವಾಗಿ ತುಳುನಾಡಿನ ರೈತ ಹೋರಾಟ ಹಾಗೂ ಕಯ್ಯೂರು ಚಿರಸ್ಮರಣೆಯ ನೆನಪುಗಳ ಕುರಿತಿರುವ ಸೆಮಿನಾರ್ ಪೈವಳಿಕೆ ನಗರದಲ್ಲಿ ನಡೆಯಿತು. ಕನ್ನಡ ಸಾಹಿತ್ಯಗಾರರಾದ ಮಾಜಿ ಹಂಪಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಪುರುಷೋತ್ತಮ ಬಿಳಿಮಲೆ ಉದ್ಘಾಟಿಸಿದರು. ಸಿಪಿಐಎಂ ಜಿಲ್ಲಾ ಕಾರ್ಯಕಾರಣಿ ಸಮಿತಿ ಸದಸ್ಯ ಕೆ.ಆರ್ ಜಯಾನಂದ ಅಧ್ಯಕ್ಷತೆ ವಹಿಸಿದ್ದರು. ಸಿಪಿಐಎಂ ಕರ್ನಾಟಕ ರಾಜ್ಯ ಸಮಿತಿ ಸದಸ್ಯೆ ಯಮುನಾ ಗಾಂವ್ಕರ್,ಸಿಪಿಐಎಂ ಮಂಜೇಶ್ವರ ಏರಿಯಾ ಕಾರ್ಯದರ್ಶಿ ವಿ.ವಿ ರಮೇಶನ್ ಮಾತನಾಡಿದರು. ಅಬ್ದುಲ್ ರಝಾಕ್ ಚಿಪ್ಪಾರು ಸ್ವಾಗತಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.