Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಮಂಜೇಶ್ವರ ಉಪಜಿಲ್ಲಾ ಕೆ.ಪಿ.ಎಸ್‌.ಟಿ.ಎ ವಾರ್ಷಿಕ ಸಭೆ ಹಾಗೂ ಬೀಳ್ಕೊಡುಗೆ ಸಮಾರಂಭ. ಹರ್ಷಾದ್ ವರ್ಕಾಡಿಯಿಂದ ಉದ್ಘಾಟನೆ.

ಮಂಜೇಶ್ವರ ಉಪಜಿಲ್ಲಾ ಕೆ.ಪಿ.ಎಸ್‌.ಟಿ.ಎ ವಾರ್ಷಿಕ ಸಭೆ ಹಾಗೂ ಬೀಳ್ಕೊಡುಗೆ ಸಮಾರಂಭ. ಹರ್ಷಾದ್ ವರ್ಕಾಡಿಯಿಂದ ಉದ್ಘಾಟನೆ.
ಉಪ್ಪಳ: ಕೇರಳ ಪ್ರದೇಶ್ ಶಾಲಾ ಶಿಕ್ಷಕರ ಸಂಘದ (ಕೆ.ಪಿ.ಎಸ್‌.ಟಿ.ಎ) ರಾಜ್ಯ ಮಹಾಸಭೆಯ ಪೂರ್ವಭಾಗಿಯಾಗಿ ಮಂಜೇಶ್ವರ ಉಪಜಿಲ್ಲಾ ಸಮಾವೇಶವನ್ನು ಉಪ್ಪಳ ಮುಳಿಂಜ ಜಿ ಎಲ್ ಪಿ ಶಾಲೆಯಲ್ಲಿ ನಡೆಸಲಾಯಿತು.
ಕಾಸರಗೋಡು ಜಿಲ್ಲಾ ಪಂಚಾಯತ್ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಉದ್ಘಾಟನೆ ನೆರವೇರಿಸಿದರು. ಉಪಜಿಲ್ಲಾ ಕಾರ್ಯದರ್ಶಿ ಓ. ಎಮ್. ರಶೀದ್ ಸ್ವಾಗತ ಭಾಷಣ ಮಾಡಿದರು. ಅಧ್ಯಕ್ಷತೆಯನ್ನು ಅಧ್ಯಕ್ಷ ಇಸ್ಮಾಯಿಲ್ ಪಿ ವಹಿಸಿದರು. ರಾಜ್ಯ ಅಲ್ಪಸಂಖ್ಯಾತ ಸೆಲ್ ಸಂಚಾಲಕ ಪಿ ಜಲಜಾಕ್ಷಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ರೆವೆನ್ಯೂ ಜಿಲ್ಲಾ ಸಂಯುಕ್ತ ಕಾರ್ಯದರ್ಶಿ ಗೋಪಾಲಕೃಷ್ಣ ಕೆ, ಜಿಲ್ಲಾ ಸಂಯುಕ್ತ ಕಾರ್ಯದರ್ಶಿ ಜನಾರ್ದನನ್ ಕೆ ವಿ, ಶಿಕ್ಷಣ ಜಿಲ್ಲಾ ಅಧ್ಯಕ್ಷ ವಿಮಲ್ ಅಡಿಯೋಡಿ, ಜಾರ್ಜ್ ಕ್ರಾಸ್ಟ್, ಚಿತ್ರಾವತಿ , ಸೌಮ್ಯ ಪಿ, ಪದ್ಮನಾಭ, ಅಬ್ಸ, ಅಬೂಬಕ್ಕರ್ ಮೊದಲಾದವರು ವಿವಿಧ ಅಧಿವೇಶನಗಳಲ್ಲಿ ಮಾತನಾಡಿದರು. ಕೋಶಾಧಿಕಾರಿ ಪ್ರಸೀತ ಕುಮಾರಿ ಧನ್ಯವಾದ ಹೇಳಿದರು. ಪದಾಧಿಕಾರಿಗಳು: ಇಸ್ಮಾಯಿಲ್ ಎಂ (ಅಧ್ಯಕ್ಷ,) ಓ. ಎಮ್. ರಶೀದ್ (ಕಾರ್ಯದರ್ಶಿ), ಪ್ರಸೀತ ಕುಮಾರಿ (ಕೋಶಾಧಿಕಾರಿ)ಯಾಗಿ ಅಯ್ಕೆಗೂಂಡರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.