Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಯಶಸ್ವಿ ಮೂರನೇ ವರ್ಷದಲ್ಲಿ ಕೇರಳ ತುಳು ಅಕಾಡೆಮಿಯ ಕ್ಯಾಲೆಂಡರ್ "ಕಾಲ ಕೊಂದೆ" ಬಿಡುಗಡೆ.

ಯಶಸ್ವಿ ಮೂರನೇ ವರ್ಷದಲ್ಲಿ ಕೇರಳ ತುಳು ಅಕಾಡೆಮಿಯ ಕ್ಯಾಲೆಂಡರ್ "ಕಾಲ ಕೋಂದೆ" ಬಿಡುಗಡೆ.
ಮಂಜೇಶ್ವರ: ತುಳುನಾಡಿನ ಸರ್ವ ಧರ್ಮ ಉತ್ಸವ, ಆಚಾರ, ತುಳುನಾಡು ಆಯನ, ಉತ್ಸವ ಇತ್ಯಾದಿ ವಿಶೇಷ ದಿನಗಳ ಕುರಿತು ಸಮಗ್ರ ಮಾಹಿತಿ ನೀಡುವ ತುಳು - ಕನ್ನಡ ಕ್ಯಾಲೆಂಡರ್ "ಕಾಲಕೋಂದೆ” ಯನ್ನು ಕೇರಳದ ಮಾನ್ಯ ಹಿರಿಯ ಸಚಿವರಾದ ಕಡನಪಳ್ಳಿ ರಾಮಚಂದ್ರನ್ ಮತ್ತು ಕ್ರೀಡಾ ಮಂತ್ರಿ ಅಬ್ದುಲ್ ರಹಿಮಾನ್ ರವರು ಬಿಡುಗಡೆ ಗೊಳಿಸಿದರು. ಉದುಮ ಶಾಸಕರಾದ ಸಿ. ಹೆಚ್.ಕುಂಞ್ಞoಬು ,ತುಳು ಅಕಾಡೆಮಿ ಅಧ್ಯಕ್ಷ ಕೆ.ಆರ್ ಜಯಾನಂದ, ಕಾರ್ಯದರ್ಶಿ ಪ್ರದೀಪ್ ಕುಮಾರ್, ಹಾಗೂ ಅಕಾಡೆಮಿ ಸದಸ್ಯರಾದ ಶ್ರೀಮತಿ ಕೃಷ್ಣವೇಣಿ ಟೀಚರ್, ಭುಜಂಗ ಶೆಟ್ಟಿ, ತುಳು ಲಿಪಿ ಮತ್ತು ಕ್ಯಾಲೆಂಡರ್ ವಿನ್ಯಾಸಕ ಡಾ. ಪ್ರವೀಣರಾಜ್ ಎಸ್ ರಾವ್, ವಿವೇಕ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು. ಪ್ರತೀ ವರ್ಷಗಳಲ್ಲಿ ಬರುವ ಸಂಕ್ರಾಂತಿ, ತಿಥಿ, ನಕ್ಷತ್ರಗಳು (ಭರಣಿ, ಕಾರ್ತಿಕ ಇತ್ಯಾದಿ) ಕೆಡ್ಡಸ, ದೀಪಾವಳಿ, ಪತ್ತನಾಜೆ, ಸೋಣ, ಮಾರ್ನಮಿ, ಆಯನೋ, ಕೋಲ, ಕೊಡಿ, ತೇರ್, ಹಬ್ಬ, ಹರಿದಿನಗಳು ಇತ್ಯಾದಿ ತುಳುವರ ‘ಸಿಂಗೋಡೆ’ ಇತ್ಯಾದಿಗಳಲ್ಲದೆ ಹಿಂದೂ, ಕ್ರೈಸ್ತ, ಮುಸ್ಲಿಂ, ಬೌದ್ಧ, ಜೈನ ಧರ್ಮದ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ ಮತ್ತು ಎಲ್ಲರಿಗೂ ಉಪಯುಕ್ತವಾಗಳಿದೆ. ತುಳು ತಿಂಗಳು "ಬಿಸು" ಅಥವಾ ಕೇರಳದ 'ವಿಷು' ವಿನ ದಿನದಿಂದ ಅಂದರೆ "ಪಗ್ಗು" ಮಾಸದಿಂದ ಆರಂಭ ಗೊಳ್ಳುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.