Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಶಾರದಾ ಆರ್ಟ್ಸ್ ಕಲಾವಿದರು (ರಿ.) ಮಂಜೇಶ್ವರ ಸಂಸ್ಥೆಯ ಬೆಳ್ಳಿ ಹಬ್ಬ ಸಂಭ್ರಮದ ಅಮಂತ್ರಣ ಪತ್ರ ಬಿಡುಗಡೆ.

ಶಾರದಾ ಆರ್ಟ್ಸ್ ಕಲಾವಿದರು (ರಿ.) ಮಂಜೇಶ್ವರ ಸಂಸ್ಥೆಯ ಬೆಳ್ಳಿ ಹಬ್ಬ ಸಂಭ್ರಮದ ಅಮಂತ್ರಣ ಪತ್ರ ಬಿಡುಗಡೆ.
ಮಂಜೇಶ್ವರ: ನಾಡಿನ ಪ್ರಖ್ಯಾತ ನಾಟಕ ತಂಡ ಕೃಷ್ಣ ಜಿ ಮಂಜೇಶ್ವರ ಸಾರಥ್ಯದ ಶಾರದಾ ಆರ್ಟ್ಸ್ ಕಲಾವಿದರು (ರಿ.) ಮಂಜೇಶ್ವರ ಸಂಸ್ಥೆಯ ಬೆಳ್ಳಿ ಹಬ್ಬ ಸಂಭ್ರಮದ ಕಾರ್ಯಕ್ರಮಗಳು 2025 ನೇ ಜನವರಿ ತಿಂಗಳ 17,18,19 ನೇ ತಾರೀಕಿನಂದು ಉದ್ಯಾವರ ಮಾಡದ ಶ್ರೀ ಅರಸು ಮಂಜಿಷ್ಣಾರ್ ದೈವಗಳ ಕ್ಷೇತ್ರದ ವಠಾರದಲ್ಲಿ ವಿಜೃಂಭಣೆಯಿಂದ ಜರಗಲಿದ್ದು ಈ 3 ಮೂರು ದಿನಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ನಿನ್ನೆ ಸಂಜೆ ಮಾಡ ಪರಿಸರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ಮಾಡಿದ ಕಣಿಯೂರು ಶ್ರೀ ಶ್ರೀ ಮಹಾಬಲೇಶ್ವರ ಸ್ವಾಮೀಜಿಗಳು, ಈ ಸಂಸ್ಥೆಯ ಜೊತೆಗೆ ನನಗೆ 21 ವರ್ಷಗಳ ಸಂಪರ್ಕವಿದ್ದು, ಅತ್ಯಂತ ಸುಂದರವಾದ ಸಂದೇಶವಿರುವ ನಾಟಕಗಳನ್ನು ನಾಡಿಗೆ ನೀಡಿದ ಈ ಸಂಸ್ಥೆಗೆ ಶುಭವನ್ನು ಹಾರೈಸುವೆ ಹಾಗೂ ನಾನು ಕೂಡಾ ಹಿಂದೆ ಓರ್ವ ಕಲಾವಿದನಾಗಿ ಇದ್ದುದರಿಂದ ಒಂದು ಸಂಸ್ಥೆಯನ್ನು ಕಟ್ಟಿ ಬೆಳೆಸುವುದು ಎಷ್ಟು ಕಷ್ಟವಿದೆ ಎಂಬ ಅರಿವು ನನಗಿದೆ. ಹಲವು ಸವಾಲುಗಳನ್ನು ಎದುರಿಸಿ ಇಷ್ಟೊಂದು ಎತ್ತರಕ್ಕೆ ಏರಿರುವ ಈ ಸಂಸ್ಥೆಗೆ ಇನ್ನೂ ಕೂಡಾ ಒಳ್ಳೆಯದಾಗಲಿ ಸಂಸ್ಥೆ ಸುವರ್ಣ ಮಹೋತ್ಸವ ವನ್ನು ಆಚರಿಸುವ0ತಾಗಲಿ ಎಂದು ಹಾರೈಸಿದರು. ಸಮಾರಂಭದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಪುತ್ತೂರು ಅಕ್ಷಯ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಜಯಂತ ನಡುಬೈಲು ಮಾತನಾಡಿ ಈ ಸಂಸ್ಥೆಯ ನಾಟಕಗಳು ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ನೀಡುವ ಕಾರ್ಯವನ್ನು ಮಾಡುತಿದ್ದು ನಾನು ಈ ತಂಡಕ್ಕೆ ನನ್ನಿಂದಾಗುವ ಎಲ್ಲಾ ಸಹಾಯ ಸಹಕಾರಗಳನ್ನು ನೀಡುವೆನೆಂಬ ಭರವಸೆಯನ್ನು ನೀಡಿ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು. ಕಾರ್ಯಕ್ರಮದಲ್ಲಿ ಬಡಾಜೆ ಬ್ರಹ್ಮ ಶ್ರೀ ಗೋಪಾಲಕೃಷ್ಣ ತಂತ್ರಿಗಳು ಭಾಗವಹಿಸಿ ಶುಭಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬೆಳ್ಳಿ ಹಬ್ಬ ಸಂಭ್ರಮ ಸಮಿತಿಯ ಅಧ್ಯಕ್ಷರಾದ ಸಂಪತ್ ಸುವರ್ಣ ಈ ಸಂಸ್ಥೆಯ ಯಶಸ್ಸಿನ ಹಿಂದೆ ಇದರ ಸಾರಥ್ಯವಹಿಸಿ ಮುನ್ನಡೆಸಿದ ಕೃಷ್ಣ ಜಿ ಮಂಜೇಶ್ವರ ಇವರ ಶ್ರಮ ಇದೆ, 2 ತಂಡಗಳನ್ನು ಕಟ್ಟಿಕೊಂಡು ಕಲಾವಿದರನ್ನು ಸೇರಿಸಿಕೊಂಡು ಮುನ್ನಡೆಸುವ ಕಾರ್ಯಕ್ಕೆ ಶ್ಲಾಘನೆಯನ್ನು ವ್ಯಕ್ತ ಪಡಿಸಿ ಈ ಕಾರ್ಯಕ್ರಮದ ಯಶಸಿನಲ್ಲಿ ನಾನು ಕೂಡಾ ಕೈ ಜೋಡಿಸುವೆ ಹಾಗೂ ಸಂಪೂರ್ಣ ಸಹಕಾರ ನೀಡುವುದಾಗಿ ಹಾರೈಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಜ್ಯೋತಿಷ್ಯರಾದ ಅನಿಲ್ ಪಂಡಿತ್ ಶುಭ ಹಾರೈಸಿದರು ಹಾಗೂ ಉದ್ಯಾವರ ಮಾಡದ ಅಣ್ಣ ದೈವದ ಪಾತ್ರಿ ರಾಜ ಬೆಳಚ್ಚಪ್ಪಾಡರು ಶುಭ ಹಾರೈಸಿ ಆಶೀರ್ವದಿಸಿದರು. ಸಮಾರಂಭದಲ್ಲಿ ಬ್ರಹ್ಮ ಕೃಷ್ಣ ಭಟ್ ಪವಿತ್ರ ಪಾಣಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಬೀರು ಚೌಟರು, ತಿಮಿರಿ ಬೆಳಚಪ್ಪಾಡರು, ಮುಂಡತ್ತಾಯ ಬೆಳಚಪ್ಪಾಡರು, ಪದ್ಮ ಗುರಿಕಾರರು, ಮಾಡದ ಅಧ್ಯಕ್ಷರಾದ ಕಿರಣ್ ಶೆಟ್ಟಿ ಮಾಡ, ಉದ್ಯಮಿಗಳಾದ ಮೋಹನ್ ಶೆಟ್ಟಿ ತೂಮಿನಾಡು ಹಾಗೂ ಶ್ರೀ ನರಸಿಂಹ ಕುಲಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಜೇಶ್ ಮುಗುಳಿ ಸ್ವಾಗತಿಸಿ, ಹರೀಶ್ ಮಾಡ ವಂದಿಸಿದರು, ದಿನಕರ್ ಹೊಸಂಗಡಿ ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.