Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

"ದೇವರ ಕಂಬಳ" ಎಂದೇ ಪ್ರಸಿದ್ಧಿ ಪಡೆದ ಅರಿಬೈಲು ಶ್ರೀ ನಾಗಬ್ರಹ್ಮ ದೇವಸ್ಥಾನದಲ್ಲಿ ನಡೆಯಿತು, ಪಾರಂಪರಿಕ "ಅರಿಬೈಲು ಕಂಬಳ".

ಅರಿಬೈಲು ಶ್ರೀ ನಾಗಬ್ರಹ್ಮ ದೇವಸ್ಥಾನದಲ್ಲಿ ಪಾರಂಪರಿಕ ಅರಿಬೈಲು ಕಂಬಳ.
ಮಂಜೇಶ್ವರ: ದೇವರ ಕಂಬಳವೆಂದೇ ಖ್ಯಾತಿ ಪಡೆದ ಅರಿಬೈಲು ಶ್ರೀ ನಾಗಬ್ರಹ್ಮ ದೇವಸ್ಥಾನದ "ಅರಿಬೈಲು ಕಂಬಳ" ವು ನಿನ್ನೆ ಅಪರಾಹ್ನ ನಡೆಯಿತು. ಪುರಾತನ ಕಾಲದಿಂದಲೂ ಪಾರಂಪರಿಕವಾಗಿ ನಡೆದು ಬಂದ ರೀತಿಯಲ್ಲಿ ಅರಿಬೈಲು ಕಂಬಳವು ವಿಜ್ರಂಭಣೆಯಿಂದ ಜರಗಿತು. ಕ್ಷೇತ್ರದ ತಂತ್ರಿವರ್ಯರಾದ ಅರಿನಾಯರು ಕಂಬಳಕ್ಕೆ ಚಾಲನೆ ನೀಡಿದರು. ಹಗ್ಗ ವಿಭಾಗದಲ್ಲಿ ಪಾವೂರು ನೆಕ್ಕಳ ವಿಜಯಾ ಮೋನಪ್ಪ ಪೂಜಾರಿಯವರ ಕೋಣಗಳು ಪ್ರಥಮ ಬಹುಮಾನ, ನೇಗಿಲು ವಿಭಾಗದಲ್ಲಿ ಮುಳ್ಳೇರಿಯ ಎಡಪಾಡಿ ಚಂದ್ರಹಾಸ ಶೆಟ್ಟಿ ಪ್ರಥಮ ಬಹುಮಾನಗಳು ಪಡೆದವು. ನೇಗಿಲು ವಿಭಾಗದಲ್ಲಿ ತಲಪಾಡಿ ಪಂಜಾಲ ಕೀರ್ತಣ್ ರವೀಂದ್ರ ಪಕಳ, ಅಡಕಳಕಟ್ಟೆ ಚಂದ್ರಹಾಸ ಕುಲಾಲ್, ವರ್ಕಾಡಿ ತೋಕೆ ಹರೀಶ್ ಯುವಭಾವರು, ಪಾವೂರು ಕುಧುಕೊರಿ ಮಾಧವ ಕಿಂಞಣ್ಣ ಪೂಜಾರಿ, ನಚ್ಚೆ ಕೊಡಂಗೆ ಜಗದೀಶ್ ಶೆಟ್ಟಿ, ಮಜಿಬೈಲು ಆಲಿ, ಪೊಯ್ಯತ್ತಬೈಲು ಪಾಲೇಂಗಿರಿ ಉಮ್ಮರ್, ಮುಳ್ಳೇರಿಯ ಕಾರ್ಲ್ಲೆ ಕಟ್ಟದ ಮನೆ ಬಾಲಕೃಷ್ಣ ಶೆಟ್ಟಿಯವರ ಕೋಣಗಳು ಭಾಗವಹಿಸಿದವು. ಹಗ್ಗ ವಿಭಾಗದಲ್ಲಿ ದೇಲಂಪಾಡಿ ಮಯ್ಯಳ ಉಮೇಶ್ ಸುವರ್ಣ, ಪಜಿಂಗಾರು ಅಶೋಕ್, ಪಜಿಂಗಾರ್ ಉದಯ ಕುಮಾರ್, ಕಲ್ಲಾಜೆ ಜಗನ್ನಾಥ ಶೆಟ್ಟಿ, ಪಾವೂರು ನೆಕ್ಕಳ ನಮ್ಮ ಜವನೆರ್, ಪಾವೂರು ಕೊಪ್ಪಳ ಮೊನಿಚಾ ಬ್ಯಾರಿ ಎಂಬಿವರ ಕೋಣಗಳು ಪಾಲ್ಗೊಂಡವು. ಒಟ್ಟು 16 ಜೊತೆ ಕೋಣಗಳು ಕಂಬಳದಲ್ಲಿ ಭಾಗವಹಿಸಿದವು. ಧಾರ್ಮಿಕ, ಸಾಮಾಜಿಕ ಮುಂದಾಳು ಗೋಪಾಲ ಶೆಟ್ಟಿ ಅರಿಬೈಲ್ ನೆತ್ಯ ಕಂಬಳ ನಿರ್ವಹಣೆ ಮಾಡಿದರು. ತೀರ್ಪುಗಾರರಾಗಿ ಕಕ್ಯಪದವು ಗೋಪಾಲ ಶೆಟ್ಟಿ, ಪಕೀರ ಮೂಲ್ಯ ಕಟ್ಟೆ ಮನೆ ಮತ್ತು ರಾಮ ಮೂಲ್ಯ ಸಹಕರಿಸಿದರು.
ಸಾವಿರಾರು ಭಕ್ತರು ದೇವಸ್ಥಾನಕ್ಕೆ ಭೇಟಿಯಿತ್ತು ಶ್ರೀ ನಾಗಬ್ರಹ್ಮರ ಉತ್ಸವದಲ್ಲಿ ಪಾಲ್ಗೊಂಡು,
ಪಾರಂಪರಿಕ ಅರಿಬೈಲು ಕಂಬಳ ಮತ್ತು ಪೂಕರೆ ಸ್ಥಾಪನೆಯನ್ನು ವೀಕ್ಷಿಸಿ ಪುನೀತರಾದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.