Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಎಡನೀರು ಮಠಾಧೀಶರ ಕಾರಿನ ಮೇಲೆ ದಾಳಿ : ಅಡ್ವಕೇಟ್ ಬಿ. ಸುಬ್ಬಯ್ಯ ರೈ ಖಂಡನೆ.

ಎಡನೀರು ಮಠಾಧೀಶರ ಕಾರಿನ ಮೇಲೆ ದಾಳಿ : ಅಡ್ವಕೇಟ್ ಬಿ. ಸುಬ್ಬಯ್ಯ ರೈ ಖಂಡನೆ.
ಕಾಸರಗೋಡು: ಬೋವಿಕ್ಕಾನ- ಇರಿಯಣ್ಣಿ ರಾಜ್ಯ ಹೆದ್ದಾರಿಯಲ್ಲಿ ಎಡನೀರು ಮಠಾಧೀಶರಾದ ಶ್ರೀಮದ್ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರು ಸಂಚರಿಸುತ್ತಿದ್ದ ಕಾರನ್ನು ತಡೆದು ನಿಲ್ಲಿಸಿ ಹಾನಿ ಉಂಟುಮಾಡಿದ ಘಟನೆಯನ್ನು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಅದ್ವಕೇಟ್ ಬಿ. ಸುಬ್ಬಯ್ಯ ರೈ ಖಂಡಿಸಿದ್ದಾರೆ. ದುಷ್ಕೃತ್ಯ ಮಾಡಿದವರ ವಿರುದ್ಧ ಇದೀಗ ಎಲ್ಲಾ ಕಡೆಗಳಲ್ಲಿ ಪ್ರತಿಭಟನೆ ವ್ಯಕ್ತವಾಗುತ್ತಿದ್ದು, ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಕೇವಲ ಕ್ಷಮೆ ಕೋರಿ ಹಿಂತಿರುಗಿದರೆ ಮುಂದೆ ಆರೋಪಿಗೆ ಎಂದಿನಂತೆ ಇಂತಹ ಕೃತ್ಯಗಳನ್ನು ನಡೆಸಲು ಅವಕಾಶ ಕಲ್ಪಿಸಿಕೊಟ್ಟಾಗೆ ಆಗುತ್ತೆ, ಕಾಸರಗೋಡು ಜಿಲ್ಲೆಯ ಸಮಸ್ತ ಜನತೆ ಗೌರವಿಸುವ ಎಡನೀರು ಮಠಾಧೀಶರು ಸಂಚರಿಸುವ ಕಾರಿನ ಮೇಲಿನ ದಾಳಿಯನ್ನು ಯಾವ ಕಾರಣಕ್ಕೂ ಕ್ಷಮಿಸಲು ಸಾಧ್ಯವಿಲ್ಲವೆಂದು ಅವರು ಹೇಳಿದ್ದಾರೆ. ಈ ಕೃತ್ಯವನ್ನಸೆಗಿದ ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.