ಮೀಯಪದವು - ಪೊಲ್ಲಕಜೆ - ಕೋಳಿಯೂರ್ ರಸ್ತೆ ಸಂಚಾರ ಯೋಗ್ಯಗೊಳಿಸಬೇಕು. ಸಿಪಿಐ (ಎಂ).
ನವೆಂಬರ್ 06, 2024
0
ಮೀಯಪದವು - ಪೊಲ್ಲಕಜೆ - ಕೋಳಿಯೂರ್ ರಸ್ತೆ ಸಂಚಾರ ಯೋಗ್ಯಗೊಳಿಸಬೇಕು. ಸಿಪಿಐ (ಎಂ).
ಮಂಜೇಶ್ವರ: ಮೀಯಪದವು - ಕೋಳಿಯೂರ್ ಸಂಪರ್ಕ ರಸ್ತೆಯ ಕುಂಡಡ್ಕದಲ್ಲಿ ಸಂಕ ನಿರ್ಮಿಸಿ ಸಂಚಾರ ಯೋಗ್ಯಗೊಳಿಸಬೇಕೆಂದು ಸಿಪಿಐ (ಎಂ) ಮೀಂಜ ಫಸ್ಟ್ ಲೋಕಲ್ ಸಮ್ಮೇಳನವು ಅಧಿಕಾರಿಗಳನ್ನು ಒತ್ತಾಯಿಸಿದೆ. ಸಮ್ಮೇಳನವನ್ನು ಪಾರ್ಟಿ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ಆರ್. ಜಯಾನಂದರವರು ಇಂದು ಸಂಜೆ ಮೀಯಪದವಿನಲ್ಲಿರುವ ಮಾರ್ಕೆಟ್ ಹಾಲ್ ನಲ್ಲಿ ಉದ್ಘಾಟಿಸಿದರು. ಶ್ರೀಮತಿ ಐರಿನ್ ಜೋಸ್ಪಿನ್ ಅಧ್ಯಕ್ಷತೆ ವಹಿಸಿದರು. ಶಿವರಾಜ್ ಕೆ. ಎಂ ಹುತಾತ್ಮ ಠರಾವನ್ನೂ, ವಿನೋದ್ ರಾಜ್ ಶ್ರದ್ದಾoಜಲಿ ಠರಾವನ್ನೂ ಮಂಡಿಸಿದರು. ಪಾರ್ಟಿ ಏರಿಯಾ ಸಮಿತಿ ಸದಸ್ಯರಾದ ಶ್ರೀಮತಿ ಬೇಬಿ ಶೆಟ್ಟಿ, ಅಬ್ದುಲ್ ರಸಾಕ್ ಚಿಪ್ಪಾರ್, ಚಂದ್ರಹಾಸ ಶೆಟ್ಟಿ ಮಾಸ್ಟರ್, ಶ್ರೀಮತಿ ಭಾರತಿ ಸುಳ್ಯಮೆ, ಸಾದಿಕ್ ಚೆರುಗೋಳಿ, ವಿನಯ ಕುಮಾರ್ ಬಾಯರ್, ಪ್ರಶಾಂತ್ ಕನಿಲ, ಡಿ. ಕಮಲಾಕ್ಷ, ಗೀತಾ ಸಾಮಾನಿ, ಭಾಗವಹಿಸಿದರು. ಬಿ ಸದಾಶಿವ ರೈ ಧ್ವಜಾರೋಹಣ ನಡೆಸಿದರು. ರಾಮಚಂದ್ರ ಟಿ ಸ್ವಾಗತಿಸಿ, ಸ್ವಾಗತ ಸಂಘ ಚೆಯರ್ಮೆನ್ ರಘುನಾಥ ಶೆಟ್ಟಿ ಕೊಮ್ಮಂಗಳ ವಂದಿಸಿದರು. ಲೋಕಲ್ ಕಾರ್ಯದರ್ಶಿಯಾಗಿ ರಾಮಚಂದ್ರ ತೊಟ್ಟೆತೋಡಿ ಯವರನ್ನು ಸಮ್ಮೇಳನವು ಆಯ್ಕೆ ಮಾಡಿತು.


