ಸಹಕಾರಿ ಸೇವಾ ಪರೀಕ್ಷಾ ಮಂಡಳಿ ಮೂಲಕ ನಡೆಯುವ ನೇಮಕಾತಿಗಳಿಗೆ ಭಾಷಾ ಅಲ್ಪಸಂಖ್ಯಾತರನ್ನ ಪರಿಗಣಿಸಬೇಕು - ಕೆ.ಸಿ.ಇ.ಸಿ.
ನವೆಂಬರ್ 27, 2024
0
ಸಹಕಾರಿ ಸೇವಾ ಪರೀಕ್ಷಾ ಮಂಡಳಿ ಮೂಲಕ ನಡೆಯುವ ನೇಮಕಾತಿಗಳಿಗೆ ಭಾಷಾ ಅಲ್ಪಸಂಖ್ಯಾತರನ್ನ ಪರಿಗಣಿಸಬೇಕು - ಕೆ.ಸಿ.ಇ.ಸಿ.
ಮಂಜೇಶ್ವರ: ಸಹಕಾರಿ ಸೇವಾ ಪರೀಕ್ಷಾ ಮಂಡಳಿ ಮೂಲಕ ನಡೆಯುವ ನೇಮಕಾತಿಗಳಿಗೆ ಭಾಷಾ ಅಲ್ಪಸಂಖ್ಯಾತರ ವಲಯಕ್ಕೆ ವಿಶೇಷ ಪರಿಗಣನೆ ನೀಡಬೇಕು ಎಂದು ಕೇರಳ ಕೋ - ಓಪರೇಟಿವ್ ಎಂಪ್ಲೋಯಿಸ್ ಕೌನ್ಸಿಲ್ (KCEC-AITUC)ಮಜಿಬೈಲ್ ಘಟಕ ಸಮ್ಮೇಳನ ಆಗ್ರಹಿಸಿದೆ. ಪ್ರಸ್ತುತ ಬೇರೆ ಜಿಲ್ಲೆಗಳಿಂದ ಬರುವವರು ನಿರಂತರವಾಗಿ ರಜೆಯ ಮೇಲೆ ತೆರಳುತ್ತಿದ್ದು, ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚಿರುವುದರಿಂದ ಸಾಕಷ್ಟು ಸಿಬ್ಬಂದಿ ಇಲ್ಲದೇ ಸಂಸ್ಥೆಗಳನ್ನು ನಡೆಸುವುದು ದುಸ್ತರವಾಗಿದೆ. ಇದನ್ನು ಪರಿಹರಿಸಲು ಸರಕಾರ ಮಧ್ಯಪ್ರವೇಶಿಸಬೇಕೆಂದು ಸಮಾವೇಶದಲ್ಲಿ ಆಗ್ರಹಿಸಿತು. AITUC ಜಿಲ್ಲಾ ಖಜಾಂಚಿ ಪಿ.ವಿಜಯಕುಮಾರ್ ಉದ್ಘಾಟಿಸಿದರು. ಕೆ.ಸಿ.ಇ. ಸಿ. ಜಿಲ್ಲಾ ಕಾರ್ಯದರ್ಶಿ ಬಿ.ಸುಕುಮಾರನ್. ಅಧ್ಯಕ್ಷ ರಾಮಕೃಷ್ಣ ಕಡಂಬಾರ್ ರಾಮಚಂದ್ರ ಮೊದಲಾದವರು ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಹರೀಶ್ ಕೆ.ಆರ್
ಧ್ವಜಾರೋಹಣಗೈದರು. ಗಂಗಾಧರ ಕೊಡ್ಡೆ ವರದಿ ಮಂಡಿಸಿದರು. ನೂತನ ಸಮಿತಿಗೆ ಹರೀಶ್. ಕೆ.ಆರ್. ಅಧ್ಯಕ್ಷ, ಗಂಗಾಧರ ಕೊಡ್ಡೆ ಕಾರ್ಯದರ್ಶಿ, ಹಾಗೂ ಮುನೀರ್ ಖಜಾಂಜಿಯಾಗಿ ಆಯ್ಕೆಯಾದರು.







