Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ನಿವೃತ್ತ ಗ್ರಾಮಾಧಿಕಾರಿ ಕೋಳ್ಯೂರು, ಸಿಂತಾಜೆ ನಿವಾಸಿ, ಸಿ. ನಾರಾಯಣ ನಿಧನ.

ನಿವೃತ್ತ ಗ್ರಾಮಾಧಿಕಾರಿ ಕೋಳ್ಯೂರು, ಸಿಂತಾಜೆ ನಿವಾಸಿ, ಸಿ. ನಾರಾಯಣ ನಿಧನ.
ಮಿಂಜ: ಕೋಳ್ಯೂರು ಸಿಂತಾಜೆ ನಿವಾಸಿ ನಿವೃತ್ತ ಗ್ರಾಮಧಿಕಾರಿ ಸಿ.ನಾರಾಯಣ (82) ವಯೋಸಹಜ ಕಾಯಿಲೆಯಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ನಿನ್ನೆ ರಾತ್ರಿ ಉಸಿರಾಟದ ಸಮಸ್ಯೆಯಿಂದ ಸಾವಿಗೀಡಾದರು. ಮೃತರು 25 ಕ್ಕೂ ಹೆಚ್ಚು ವರ್ಷಗಳ ಕಾಲ ಪೈವಳಿಕೆ, ಕೊಡ್ಲಮೊಗರು, ಮೀಂಜ, ವರ್ಕಾಡಿ, ಕಡಂಬಾರು ಮೊದಲಾದ ಗ್ರಾಮ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಮೃತರು ದಿ.ಪಾಂಡಿ ಮೂಲ್ಯ ಮತ್ತು ದಿ.ಪೂವಕ್ಕೆ ದಂಪತಿಗಳ ಪುತ್ರನಾಗಿದ್ದು, ಪತ್ನಿ ಗುಲಾಬಿ, ಮಕ್ಕಳಾದ ಪ್ರೇಮ, ರವೀಂದ್ರ, ಶಾಂತಾರಾಮ್, ಜಯಭಾರತಿ ಮತ್ತು ಅಳಿಯಂದಿರಾದ: ನಾರಾಯಣ, ಸುರೇಶ್ ಎಡನಾಡು (ಪತ್ರಕರ್ತರು) ಸೊಸೆಯಂದಿರಾದ ರಚನಾ, ಚೈತ್ರ, ಏಕ ಸಹೋದರಿ ಲಕ್ಷ್ಮೀ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಅಪರಾಹ್ನ ವೇಳೆ ಮನೆ ಪರಿಸರದಲ್ಲಿ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.