Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಬಹು ರಾಜ್ಯ ಸಹಕಾರ ಸಂಘಗಳನ್ನು ನಿಯಂತ್ರಿಸಬೇಕು: ಕೇರಳ ಕೋ - ಓಪರೇಟಿವ್ ಎಂಪ್ಲಾಯಿಸ್ ಕೌನ್ಸಿಲ್.

ಬಹು ರಾಜ್ಯ ಸಹಕಾರ ಸಂಘಗಳನ್ನು ನಿಯಂತ್ರಿಸಬೇಕು: ಕೇರಳ ಕೋ - ಓಪರೇಟಿವ್ ಎಂಪ್ಲಾಯಿಸ್ ಕೌನ್ಸಿಲ್.
ಮಂಜೇಶ್ವರ: ಆಯಾ ರಾಜ್ಯಗಳಲ್ಲಿ ಯಾವುದೇ ರೀತಿಯ ನಿಯಂತ್ರಣವಿಲ್ಲದೆ ಕಾರ್ಯನಿರ್ವಹಿಸುತ್ತಿರುವ ಅಂತಾರಾಜ್ಯ ಸಹಕಾರಿ ಸಂಘಗಳ ನಿಯಂತ್ರಣ ಅಧಿಕಾರವನ್ನು ರಾಜ್ಯ ಸರಕಾರ ಹೊಂದಿರಬೇಕು ಎಂದು ಕೇರಳ ಕೋ ಆಪರೇಟಿವ್ ಎಂಪ್ಲಾಯೀಸ್ ಕೌನ್ಸಿಲ್ (ಎ.ಐ.ಟಿ.ಯು.ಸಿ) ಮಂಜೇಶ್ವರ ಯೂನಿಟ್ ಸಭೆ ಆಗ್ರಹಿಸಿದೆ. ಎ.ಐ.ಟಿ.ಯು.ಸಿ. ಜಿಲ್ಲಾ ಕಾರ್ಯದರ್ಶಿ ಟಿ. ಕೃಷ್ಣ ಸಮ್ಮೇಳನ ಉದ್ಘಾಟಿಸಿದರು.
ಕೆ. ಸಿ. ಇ. ಸಿ.ಜಿಲ್ಲಾ ಕಾರ್ಯದರ್ಶಿ ಬಿ.ಸುಕುಮಾರನ್, ಅಧ್ಯಕ್ಷ ರಾಮಕೃಷ್ಣ ಕಡಂಬಾರ್ ಎಸ್. ರಾಮಚಂದ್ರ, ರಾಜನ್ ನಾಯರ್, ಶ್ರೀಧರ ಆರ್.ಕೆ ಮೊದಲಾದವರು ಮಾತನಾಡಿದರು. ಕೇಂದ್ರ ಸರ್ಕಾರ ಡಿ.ಎ. ಘೋಷಣೆಯಾದ ಕೂಡಲೇ ಸಹಕಾರಿ ಸಮೂಹದ ನೌಕರರು ಡಿ.ಎ.ಗೆ ಅವಕಾಶ ನೀಡುವಂತೆ ತಹಶೀಲ್ದಾರರಿಗೆ ಸೂಚನೆ ನೀಡಬೇಕು ಎಂದೂ ಮನವಿ ಮಾಡಲಾಗಿದೆ. ಎ.ಐ.ಟಿ.ಯು.ಸಿ. ಉತ್ತರ ವಲಯ ಜಾಥಾವನ್ನು ವಿಜಯಿಸಲು ಕರೆ ನೀಡಲಾಯಿತು. ನೂತನ ಪದಾಧಿಕಾರಿಗಳು
ಕಾರ್ಯದರ್ಶಿ ಪ್ರದೀಶ್ ಬಡಾಜೆ,
ಅಧ್ಯಕ್ಷ ಉಮೇಶ್ ಪದವು, ಜೊತೆ ಕಾರ್ಯದರ್ಶಿ ಶನೀಶ್ ಮಂಜೇಶ್ವರ, ಉಪಾಧ್ಯಕ್ಷ ಧನುರಾಜ್ ಕೀರ್ತೇಶ್ವರ, ಖಜಾಂಜಿಯಾಗಿ ಗಣೇಶ್ ಕುಂಜತ್ತೂರ್ ಆಯ್ಕೆಯಾದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.