KMCC ರಿಯಾದ್ ಸಮಿತಿಯ ವತಿಯಿಂದ IUML ನೇತೃತ್ವದಲ್ಲಿ ವರ್ಕಾಡಿಯ ಬಡ ಕುಟುಂಬದ ವಧುವಿಗೆ ವಿವಾಹ ಧನ ಸಹಾಯ ವಿತರಣೆ.
ಆಗಸ್ಟ್ 28, 2024
0
IUML ಮುಖಾಂತರ ರಿಯಾದ್ KMCC ಸಹಾಯ ವಿತರಣೆ.
ವರ್ಕಾಡಿ: ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಮುಖಾಂತರ KMCC ರಿಯಾದ್ ಸಮಿತಿಯು ವರ್ಕಾಡಿ ಪಂಚಾಯತಿನ 5 ನೇ ವಾರ್ಡಿನ ಉರ್ಣಿ ಎಂಬಲ್ಲಿನ ಬಡ ಕುಟುಂಬಕ್ಕೆ ವಿವಾಹ ಧನಸಹಾಯವಾಗಿ ನೀಡುವ 30000 ಸಾವಿರ ರೂಪಾಯಿಯನ್ನು ವರ್ಕಾಡಿ ಪಂಚಾಯತ್ ಮುಸ್ಲಿಂ ಲೀಗ್ ಅಧ್ಯಕ್ಷ K ಮುಹಮ್ಮದ್ ರಿಗೆ KMCC ನೇತಾರರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ KMCC ನೇತಾರರಾದ ಅಶ್ರಫ್ ಮೀಪಿರಿ, ಕುಂಞಿ ಉಪ್ಪಳ, ಮಜೀದ್, IUML ನೇತಾರರಾದ ಅಬ್ದುಲ್ಲಾ ಮಾದೇರಿ, ಅಬ್ದುಲ್ ಮಜೀದ್ ಬಿ.ಎ, V.S ಮೊಹಮ್ಮದ್ ಧರ್ಮನಗರ, ಇಬ್ರಾಹಿಂ ಧರ್ಮನಗರ, ಇಬ್ರಾಹಿಂ ಕಜೆ, ಸಲೀಂ ಧರ್ಮನಗರ ಉಪಸ್ಥಿತರಿದ್ದರು.

