ಮಂಜೇಶ್ವರ: ಮಂಜೇಶ್ವರ ಉಪಜಿಲ್ಲಾ ಕ್ರೀಡಾಕೂಟ 2024 - 25 ಸಂಘಟಕ ಸಮಿತಿ ರೂಪೀಕರಣ ಸಭೆ.
ಆಗಸ್ಟ್ 28, 2024
0
ಮಂಜೇಶ್ವರ: ಮಂಜೇಶ್ವರ ಉಪಜಿಲ್ಲಾ ಕ್ರೀಡಾಕೂಟ 2024 - 25 ಸಂಘಟಕ ಸಮಿತಿ ರೂಪೀಕರಣ ಸಭೆ.
ಮಂಜೇಶ್ವರ: 2024 - 25 ನೇ ಶೈಕ್ಷಣಿಕ ವರ್ಷದ ಮಂಜೇಶ್ವರ ಉಪಜಿಲ್ಲಾ ಕ್ರೀಡಾಕೂಟದ ಸಂಘಟಕ ಸಮಿತಿಯ ರೂಪೀಕರಣ ಸಭೆಯು ಕುರ್ಚಿಪಳ್ಳ
ಜಿ.ಯಚ್.ಯು.ಪಿ. ಶಾಲೆಯಲ್ಲಿ ನಡೆಯಿತು. ಶಾಲಾ ಮಕ್ಕಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಶಾಲಾ ಮಖ್ಯ ಶಿಕ್ಷಕ
ಉಮೇಶ್ ಸ್ವಾಗತಿಸಿದರು. ಮಂಗಲ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ರುಬೀನ ನೌಫಲ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಇರ್ಫಾನ ಸಭೆಯ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪಂಚಾಯತ್ ಸದಸ್ಯ ಗೋಲ್ಡನ್ ಅಬ್ದುಲ್ ರಹ್ಮಾನ್, ಬ್ಲಾಕ್ ಪಂಚಾಯತ್ ಉಪಾಧ್ಯಕ್ಷೆ ಹನೀಫ್ ಪಿ. ಕೆ. ಮುಖ್ಯ ಅತಿಥಿಗಳಾಗಿದ್ದರು. ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ರಾಜಗೋಪಾಲ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ತಿರುಮಲೇಶ್ವರಿ ಸಂಘಟಕ ಸಮಿತಿಯ ಪ್ಯಾನಲ್ ಮಂಡಿಸಿದರು. ಮುಖ್ಯ ಶಿಕ್ಷಕ ಉಮೇಶ್ ಬಜೆಟ್ ಮಂಡಿಸಿದರು. ವಾರ್ಡ್ ಸದಸ್ಯ ಮೊಹಮ್ಮದ್ ರಫೀಕ್, ಸಿ.ಡಿ ಯಸ್ ಅಧ್ಯಕ್ಷೆ ಸುಶೀಲ, H.M ಕಾರ್ಯಕ್ರಮ ನಿರ್ವಾಹಕರು ಶ್ಯಾಮ್ ಭಟ್, ಬ್ಲಾಕ್ ಪಂಚಾಯತ್ ಸದಸ್ಯ ಅಶೋಕ್ ಮೊದಲಾದವರು ಶುಭ ಹಾರೈಸಿದರು.
PTA ಅಧ್ಯಕ್ಷ ಇಬ್ರಾಹಿಂ ಮೋಮಿನ್, ಪೈವಳಿಕೆ ನಗರ ಶಾಲೆಯ ಪ್ರಾಂಶುಪಾಲ ರಘುರಾಮ ಆಳ್ವ, PTA ಉಪಾಧ್ಯಕ್ಷ ಸತೀಶ್, MPTA
ಉಪಾಧ್ಯಕ್ಷೇ ಶ್ರೀಮತಿ ಫಾತಿಮತ್ ಜೌರ, ಡೆವಲಪ್ಮೆಂಟ್ ಸ್ಟಾಂಡಿಂಗ್ ಕಮಿಟಿ ಅಧ್ಯಕ್ಷೆ ಕೈರುನ್ನಿಸ ಉಮ್ಮರ್, ವಿವಿಧ ಶಾಲಾ ಮುಖ್ಯ ಶಿಕ್ಷಕರು, ಸಂಘಟನಾ ನೇತಾರರು, ಮತ್ತು ರಾಜಕೀಯ ನೇತಾರರು ಉಪಸ್ಥಿತರಿದ್ದರು. ತಾಹಿರ ಟೀಚರ್ ಕಾರ್ಯಕ್ರಮ ನಿರೂಪಿಸಿದರು. ಧನ್ಯ ವಂದಿಸಿದರು.


