Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ವರ್ಕಾಡಿ: ಪಾತೂರು ಕಜೆಯಲ್ಲಿ ಭೂಕುಸಿತ, ಸಂತ್ರಸ್ತರಿಗೆ ಪರಿಹಾರ ಒದಗಿಸಲು ಅಧಿಕಾರಿಗಳಿಗೆ ಮನವಿ.

ವರ್ಕಾಡಿ: ಪಾತೂರು ಕಜೆಯಲ್ಲಿ ಭೂಕುಸಿತ, ಸಂತ್ರಸ್ತರಿಗೆ ಪರಿಹಾರ ಒದಗಿಸಲು ಅಧಿಕಾರಿಗಳಿಗೆ ಮನವಿ.
ಮಂಜೇಶ್ವರ: ವರ್ಕಾಡಿ ಗ್ರಾಮ ಪಂಚಾಯತ್ ನ 7 ನೇ ವಾರ್ಡ್ ಪಾತೂರು ಗ್ರಾಮದ ಕಜೆಯಲ್ಲಿ ಇತ್ತೀಚೆಗೆ ಭೂಮಿಯು ಒಡೆದು ಸೀಳಾಗಿ, ಕುಸಿತವುಂಟಾಗಿ ಈ ಪ್ರದೇಶವು ಬಹಳ ಆತಂಕವುಂಟಾಗಿತ್ತು. ಈ ಪ್ರದೇಶದಿಂದ ಮೂರು ಕುಟುಂಬಗಳಾದ ಅಹ್ಮದ್ ಕುಂಞಿ, ಅವ್ವಮ್ಮ, ಅಬೂಬಕ್ಕರ್ ಎಂಬವರನ್ನು ಆ ಕೂಡಲೇ ಸ್ಥಳಾಂತರಿಸಲಾಗಿದ್ದು, ಇವರ ಮನೆ ಕೃಷಿಸ್ಥಳ ಎಲ್ಲವನ್ನೂ ಉಪೇಕ್ಷಿಸಬೇಕಾಗಿದ್ದು, ಈ ಸಮಯದಲ್ಲಿ ಪಂಚಾಯತ್ ನ ಜನಪ್ರತಿನಿಧಿಗಳು ಹಾಗೂ ಉದ್ಯೋಗಸ್ಥರು ಭೇಟಿ ನೀಡಿದರೂ ಇದುವರೆಗೆ ಯಾವುದೇ ಪರ್ಯಾಯ ವ್ಯವಸ್ಥೆ ಒದಗಿಸಲು ಸಾಧ್ಯವಾಗಿಲ್ಲ.
ರಾಜ್ಯವನ್ನು ಆಳುತ್ತಿರುವ ಪಕ್ಷವೇ ವರ್ಕಾಡಿ ಪಂಚಾಯತಿನಲ್ಲಿ ಆಡಳಿತದಲ್ಲಿದ್ದು, ಇದೀಗ ಅವಗನಣೆಯನ್ನು ತೋರಿಸುತ್ತಿದೆ. ವಯನಾಡಿನಲ್ಲಿ ಉಂಟಾದ ದುರಂತವು ಇನ್ನು ಮುಂದೆ ಇಲ್ಲಿ ಸಂಭವಿಸದಿರಲು ಮುಂಜಾಗ್ರತ ಕ್ರಮ ವಹಿಸಬೇಕಾಗಿದೆ. ಇದೀಗ ವಾರ್ಡ್ ಪ್ರತಿನಿಧಿ ಅಬ್ದುಲ್ ಮಜೀದ್ B.A ನೇತೃತ್ವದಲ್ಲಿ ಸಂತ್ರಸ್ತರಾದ ಅಹ್ಮದ್ ಕುಂಞಿ, ಅಬೂಬಕ್ಕರ್, ಅವಮ್ಮ ಎಂಬವರು, ಮಂಜೇಶ್ವರ ಶಾಸಕ AKM ಅಶ್ರಫ್ ಮತ್ತು ಕಾಸರಗೋಡು ಜಿಲ್ಲಾಧಿಕಾರಿ ಕೆ ಇಂಬಶೇಖರ್, ADM ಅಖಿಲ್ P ಎಂಬವರನ್ನ ಮುಖತಃ ಭೇಟಿಯಾಗಿ ಮನವಿ ನೀಡುವ ಮೂಲಕ ಕೂಡಲೇ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.