Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಪೈವಳಿಕೆ ಲಾಲ್ಬಾಗ್ ಸುಭಾಷ್ ಫ್ರೆಂಡ್ಸ್ ಕ್ಲಬ್ ನ ಆಶ್ರಯದಲ್ಲಿ "ಶ್ರೀ ಕೃಷ್ಣ ಜನ್ಮಾಷ್ಟಮಿ" ಆಚರಣೆ ಸಂಪನ್ನ.

ಪೈವಳಿಕೆ ಲಾಲ್ಬಾಗ್ ಸುಭಾಷ್ ಫ್ರೆಂಡ್ಸ್ ಕ್ಲಬ್ ನ ಆಶ್ರಯದಲ್ಲಿ "ಶ್ರೀ ಕೃಷ್ಣ ಜನ್ಮಾಷ್ಟಮಿ" ಆಚರಣೆ ಸಂಪನ್ನ.
ಪೈವಳಿಕೆ: ಸುಭಾಷ್ ಫ್ರೆಂಡ್ಸ್ ಕ್ಲಬ್ ಲಾಲ್ ಬಾಗ್ ಪೈವಳಿಕೆ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಲಾಲ್ ಬಾಗ್ ನಲ್ಲಿರುವ ಸಿ.ಕೆ ಚಿಪ್ಪಾರ್ ವೇದಿಕೆಯಲ್ಲಿ ಬಹಳ ವಿಜೃಂಭಣೆಯಿಂದ ಜರಗಿತು.
ನಿನ್ನೆ ರಾತ್ರಿ ನಡೆದ ಸಮಾರೋಪ ಸಮಾರಂಭ ಕಾರ್ಯಕ್ರಮದ ಉದ್ಘಾಟನೆಯನ್ನು ರಂಗ ಭೂಮಿ ಕಲಾವಿದ, ಕನ್ನಡ ತುಳು ಚಿತ್ರನಟ, ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್ ನೆರವೇರಿಸಿದರು. ಹರೀಶ್ ಬೊಟ್ಟಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಮಾತನಾಡಿದರು.
ಅಥಿತಿಗಳಾಗಿ ಆಗಮಿಸಿದ ರಣಜಿ ಕ್ರಿಕೆಟ್ ಆಟಗಾರ ಚಂದ್ರಶೇಖರ ಕೆ, ಸ್ನೇಹಾಲಯ ಸಂಸ್ಥಾಪಕ ಜೋಸೆಫ್ ಕ್ರಾಸ್ತಾ, ಗಡಿನಾಡ ಸಾಹಿತ್ಯ ಅಕಾಡೆಮಿ ಕಾಸರಗೋಡಿನ ಪ್ರಧಾನ ಕಾರ್ಯದರ್ಶಿ: ಅಖಿಲೇಶ್ ನಗುಮುಗಮ್, ಪೈವಳಿಕೆ ಗ್ರಾಮ ಪಂಚಾಯತ್ ಸದಸ್ತರಾದ ಸುನೀತಾ ವಾಲ್ಟಿ'ಡಿ ಸೋಜಾ, ರಹಿಮತ್ ರಹಿಮಾನ್, ಕೇರಳ ತುಳು ಅಕಾಡೆಮಿ ಕಾರ್ಯದರ್ಶಿ ಪ್ರದೀಪ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಹಿಂದುಳಿದ ವರ್ಗಗಳ ಕಲ್ಯಾಣ ಕರ್ನಾಟಕದ ವಿಶೇಷಧಿಕಾರಿ ಡಾ.ಕೆ ಗಂಗಾಧರ್, ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟದ ರಾಜ್ಯಾಧ್ಯಕ್ಷ ಕೆ. ನಾಗರಾಜ್ ಕೆ.ಎನ್, ವಿವಿಧ ಸಾಮಾಜಿಕ ವಲಯಗಳ ಪ್ರಮುಖರಾದ ಕೇಶವ ಬಾಯಿಕಟ್ಟೆ, ನಾಸಿರ್ ಕೊರಿಕ್ಕಾರ್, ಸಹದೇವ ನಾಯಕ್, ಶಾಲಿನಿ ಸನತ್ ರೈ ಕಳ್ಳಿಗೆ, ಗಣೇಶ್ ಪೂಜಾರಿ ಸ್ಥಾನದಮನೆ, ವಾಸುದೇವ ಶೆಟ್ಟಿಗಾರ್, ಗಣೇಶ್ ಸುಣ್ಣಾಡ, ಉಮ್ಮಾರ್ ಮಾಸಿಕುಮೇರಿ ಮೂಸ ಮಾಸಿಕುಮೇರಿ, ವೆಂಕಪ್ಪ ಎಸ್ ಲಾಲ್ ಬಾಗ್ ಉಪಸ್ಥಿತರಿದ್ದು, ಶುಭಾಶಂಸನೆಗೈದರು.
ಸುಭಾಸ್ ಫ್ರೆಂಡ್ಸ್ ನ ಗೌರವಾಧ್ಯಕ್ಷ ಅಶೋಕ್ ಎಂ.ಸಿ ಲಾಲ್ ಬಾಗ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮೋಹನ್ ಸುವರ್ಣ ಲಾಲ್ ಬಾಗ್ ಸ್ವಾಗತಿಸಿ, ವಸಂತ ನಾಯ್ಕ್ ಧನ್ಯವಾದವಿತ್ತರು. ಕುಮಾರಿ ಅಶ್ವಿನ್ ಪೆರುವಾಯಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ನಡೆದ ಹಗ್ಗಜಗ್ಗಾಟದಲ್ಲಿ ಪ್ರಥಮ ಡಿ.ಕೆ ಬ್ರದರ್ಸ್ ಸುದೆಂಬಲ, ದ್ವಿತೀಯ ಎಸ್. ಎಂ ಫ್ರೆಂಡ್ಸ್ ಕಾಯಾರ್ ಕಟ್ಟೆ, ತೃತೀಯ ಆಂಜನೇಯ ಕಣ್ವತೀರ್ಥ, ಚತುರ್ಥ ಬಿ.ಕೆ ಬ್ರದರ್ಸ್ ಸ್ವರ್ಗ ಪಡೆದರು. ಬೆಳೆಗ್ಗೆಯಿಂದ ಜಾನಪದ ನೃತ್ಯ, ಡೊಳ್ಳು ಕುಣಿತ, ಸುಗುಮ ಸಂಗೀತ, ಶಾಸ್ತ್ರೀಯ ನೃತ್ಯ, ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಕಾರ್ಯಕ್ರಮ ಮತ್ತು ವಿವಿಧ ಆಟೋಟ ಸ್ಪರ್ಧೆಗಳು ಜರಗಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.