ಡೈಜಿವರ್ಲ್ಡ್ ವಾಹಿನಿಯ ವರದಿಗಾರ, ಪತ್ರಕರ್ತ ಸ್ಟೀಫನ್ ಕ್ರಾಸ್ತಾರಿಗೆ ಪಿತೃ ವಿಯೋಗ.
ಆಗಸ್ಟ್ 28, 2024
0
ಡೈಜಿವರ್ಲ್ಡ್ ವಾಹಿನಿಯ ವರದಿಗಾರ, ಪತ್ರಕರ್ತ ಸ್ಟೀಫನ್ ಕ್ರಾಸ್ತಾರಿಗೆ ಪಿತೃ ವಿಯೋಗ.
ಮಂಜೇಶ್ವರ: ಡೈಜಿವರ್ಲ್ಡ್ ವಾಹಿನಿಯ ಕಾಸರಗೋಡು ಜಿಲ್ಲಾ ವರದಿಗಾರ ಸ್ಟೀಫನ್ ಕ್ರಾಸ್ತಾರ ತಂದೆ, ಕಯ್ಯಾರ್ ಕೊಂದಲಕಾಡ್ ನಿವಾಸಿ ಕರ್ನೆಲ್ ಕ್ರಾಸ್ತ (84) ಅನಾರೋಗ್ಯದಿಂದ ಇಂದು ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಮೃತರು ಹಿರಿಯ ಪ್ರಗತಿಪರ ಕೃಷಿಕರಾಗಿದ್ದು, ಪೈವಳಿಕೆ ಗ್ರಾಮ ಪಂಚಾಯತ್ ಸೇರಿದಂತೆ ವಿವಿಧ ಕಡೆಗಳಲ್ಲಿ ಸನ್ಮಾನವನ್ನು ಸ್ವೀಕರಿಸಿದ್ದರು. ಮೃತರು ಪತ್ನಿ: ಲೂಸಿ ಡಿ'ಸೋಜಾ, ಮಕ್ಕಳಾದ: ಐರಿನ್ ರೋಷಿ ಕ್ರಾಸ್ತಾ, ಜೋನ್ ಕ್ರಾಸ್ತಾ, ರೊನಾಲ್ಡ್ ಕ್ರಾಸ್ತಾ , ಪತ್ರಕರ್ತ ಸ್ಟೀಫನ್ ಕ್ರಾಸ್ತಾ ಕಯ್ಯಾರ್, ಲವೀನಾ ಫೆಲ್ಸಿ, ಅಳಿಯಂದಿರಾದ ಹಿರಿಯ ಪತ್ರಕರ್ತ ಹಿಲರಿ ಕ್ರಾಸ್ತಾ ನಾರಂಪಾಡಿ, ವಿಜಯ ಕ್ರಾಸ್ತಾ (ಯು.ಕೆ), ಸೊಸೆ: ಮರಿಯ ಸುವಿ, ಅನಿತಾ ಡಿ ಸೋಜಾ, ಸಹೋದರ ಸಹೋದರಿಯರಾದ ಸಿಸಿಲಿಯ ಕ್ರಾಸ್ತಾ ಕುಪ್ಪೆಪದವು, ಫೌಲ್ ಕ್ರಾಸ್ತಾ ಮುಂಬಯಿ, ಪೌಲಿನ್ ಕ್ರಾಸ್ತಾ ತೊಕ್ಕೊಟ್ಟು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ (ತಾ: 01 - 09 - 2024 ನೇ ಆದಿತ್ಯವಾರ, ಸಂಜೆ 4.00 ಗಂಟೆಗೆ ) ಕಯ್ಯಾರು ಚರ್ಚ್ ನಲ್ಲಿ ನಡೆಯಲಿದೆ. ಅಂದು ಅಪರಾಹ್ನ 2.30 ಕ್ಕೆ ಮೃತದೇಹವನ್ನು ಮನೆಗೆ ತರಲಾಗುವುದು ಎಂದು ಮನೆಯವರು ತಿಳಿಸಿದ್ದಾರೆ. ಮೃತರ ನಿಧನಕ್ಕೆ ಹಿರಿಯ ಸಾಹಿತಿ, ಅಂಕಣಕಾರ, ನ್ಯಾಯವಾದಿ ಥೋಮಸ್ ಡಿ'ಸೋಜಾ ಸೀಂತಾಗೋಳಿ ಹಾಗೂ ಕರ್ನಾಟಕ ರಾಜ್ಯ ಕನ್ನಡ ಪತ್ರಕರ್ತರ ಸಂಘ ಕಾಸರಗೋಡು ಜಿಲ್ಲಾ ಸಮಿತಿ ಗಾಢವಾದ ಸಂತಾಪ ಸೂಚಿಸಿದ್ದಾರೆ.

