ಬಾಲ ಸಂಘ ಕಾಸರಗೋಡು ಜಿಲ್ಲಾ ಸಮ್ಮೇಳನ ಪೈವಳಿಕೆಯಲ್ಲಿ ಸ್ವಾಗತ ಸಮಿತಿ ರಚನೆ.
ಆಗಸ್ಟ್ 28, 2024
0
ಬಾಲ ಸಂಘ ಕಾಸರಗೋಡು ಜಿಲ್ಲಾ ಸಮ್ಮೇಳನ ಪೈವಳಿಕೆಯಲ್ಲಿ ಸ್ವಾಗತ ಸಮಿತಿ ರಚನೆ.
ಪೈವಳಿಕೆ: ಮಕ್ಕಳ ಅತ್ಯಂತ ದೊಡ್ಡ ಬದಲು ವಿದ್ಯಾಭ್ಯಾಸ ಸಾಂಸ್ಕೃತಿಕ ಸಂಘಟನೆಯಾದ ಬಾಲ ಸಂಘದ ಕಾಸರಗೋಡು ಜಿಲ್ಲಾ ಸಮ್ಮೇಳನ 2024 ಸೆಪ್ಟೆಂಬರ್ 28, 29 ರಂದು ಪೈವಳಿಕೆಯಲ್ಲಿ ನಡೆಯಲಿದೆ. ಸ್ವತಂತ್ರ ಹೋರಾಟ ಕಾಲಘಟ್ಟದಲ್ಲೂ ನಂತರವೂ, ಕೇರಳದ ಬಾಲ್ಯವನ್ನು ಸಂಘಟಿಸಿ ವೈಜ್ಞಾನಿಕ ಜೀವನ ವೀಕ್ಷಣವು, ತಾರ್ಕಿಕ ಚಿಂತನೆ ಮತ್ತು ಐತಿಹಾಸಿಕ ಅರಿವಿನೊಂದಿಗೆ ಜಾತ್ಯತೀತ ಪ್ರಜಾಸತ್ತಾತ್ಮಕ ಸಮಾಜವನ್ನು ನಿರ್ಮಿಸಲು ಬೇಕಾಗಿರುವ ಹೊರಟವಾಗಿದೆ ಬಾಲಸಂಘ ನಡೆಸುತ್ತಿರುವುದು. ಸಮ್ಮೇಳನ ಯಶಸ್ವಿಗೊಳಿಸಲು ಬೇಕಾಗಿರುವ ಸ್ವಾಗತ ಸಮಿತಿ ರಚನೆ ಸಭೆಯು ಪೈವಳಿಕೆ ಕುಟುಂಬ ಶ್ರೀ ಹಾಲ್ ನಲ್ಲಿ ನಡೆಯಿತು. ಮಾಜಿ ಶಾಸಕ ಕೆ.ವಿ ಕುಂಞರಾಮನ್ ಉದ್ಘಾಟಿಸಿದರು. ಜಿಲ್ಲೆಯ 1705 ಯೂನಿಟ್ ಸಮ್ಮೇಳನಗಳು, 146 ವಿಲೇಜ್ ಸಮ್ಮೇಳನಗಳು,12 ಏರಿಯಾ ಸಮ್ಮೇಳನಗಳು ಪೂರ್ತಿಗೊಳಿಸಿ ಒಟ್ಟು 200 ಪ್ರತಿನಿಧಿಗಳು ಜಿಲ್ಲಾ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಸಭೆಯಲ್ಲಿ ಬಾಲಸಂಘ ಜಿಲ್ಲಾ ಕಾರ್ಯದರ್ಶಿ ಪ್ರವಿಷ ಪ್ರಮೋದ್, ಜಿಲ್ಲಾ ಕನ್ವಿನರ್ ಪಿ.ಕೆ ನಿಶಾಂತ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಕೆ.ಆರ್ ಜಯಾನಂದ, ಭಾರತಿ.ಎಸ್, ವಿನಯ್ ಕುಮಾರ್ ಬಾಯಾರು, ಪ್ರಶಾಂತ್ ಕನಿಲ, ನಿಶಿತ್ ಕೊರಿಕ್ಕಾರ್ ಮತ್ತಿತರರು ಮಾತನಾಡಿದರು. ಪದ್ಮಜಾ ಕೂಳೂರು ಸ್ವಾಗತಿಸಿದರು. ಬಾಲ ಸಂಘ ಜಿಲ್ಲಾ ಅಧ್ಯಕ್ಷ ಎಂ.ಅನುರಾಗ್ ಅಧ್ಯಕ್ಷತೆ ವಹಿಸಿದ್ದರು. ಸ್ವಾಗತ ಸಮಿತಿ ಚೆಯರ್ಮನ್ ರಾಗಿ ಬೇಬಿ ಬಾಲಕೃಷ್ಣನ್ ಹಾಗೂ ಕನ್ವಿನರ್ ಹಾಗೂ ಕೆ.ಆರ್ ಜಯಾನಂದ ಒಳಗೊಂಡ 501 ಮಂದಿಯ ಸ್ವಾಗತ ಸಮಿತಿ ಆಯ್ಕೆ ಮಾಡಲಾಯಿತು.

