ಸೇವಾ ಭಾರತಿ ಮಂಗಲ್ಪಾಡಿ ಹಾಗೂ ಮಂಗಲ್ಪಾಡಿ ಸಹಕಾರಿ ಬ್ಯಾಂಕ್ ಜಂಟಿ ಆಶ್ರಯದಲ್ಲಿ ಮಂಗಳೂರು ಕೆ.ಎಂ.ಸಿ. ಆಸ್ಪತ್ರೆ ಸಹಯೋಗದೊಂದಿಗೆ ಐಲದಲ್ಲಿ ರಕ್ತದಾನ ಶಿಬಿರ.
ಆಗಸ್ಟ್ 26, 2024
0
ಸೇವಾ ಭಾರತಿ ಮಂಗಲ್ಪಾಡಿ ಹಾಗೂ ಮಂಗಲ್ಪಾಡಿ ಸಹಕಾರಿ ಬ್ಯಾಂಕ್ ಜಂಟಿ ಆಶ್ರಯದಲ್ಲಿ ಮಂಗಳೂರು ಕೆ.ಎಂ.ಸಿ. ಆಸ್ಪತ್ರೆ ಸಹಯೋಗದೊಂದಿಗೆ ಐಲದಲ್ಲಿ ರಕ್ತದಾನ ಶಿಬಿರ.
ಮಂಜೇಶ್ವರ: ಹೇರೂರು ಶಂಕರ ಆಳ್ವ ಮೆಮೋರಿಯಲ್ ಚಾರಿಟೇಬಲ್ ಸೊಸೈಟಿ, ಸೇವಾಭಾರತಿ ಮಂಗಲ್ಪಾಡಿ ಮತ್ತು ಸೇವಾ ಸಹಕಾರಿ ಬ್ಯಾಂಕ್ ಮಂಗಲ್ಪಾಡಿ ಇವುಗಳ ಜಂಟಿ ಆಶ್ರಯದಲ್ಲಿ ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಇವರ ಸಹಕಾರದೊಂದಿಗೆ ದಿ. ಜನಾರ್ಧನ ಪ್ರತಾಪನಗರ ರವರ ಸ್ಮರಣಾರ್ಥ ರಕ್ತದಾನ ಶಿಬಿರವು ಐಲ ಶ್ರೀ ದುರ್ಗಾಪರಮೇಶ್ವರೀ ಕಲಾಭವನದಲ್ಲಿ ನಡೆಯಿತು. ಶಿಬಿರವನ್ನು ಹೇರೂರು ಶಂಕರ ಆಳ್ವ ಮೆಮೋರಿಯಲ್ ಚಾರಿಟೇಬಲ್ ಸೊಸೈಟಿ ಮಂಗಲ್ಪಾಡಿಯ ಅಧ್ಯಕ್ಷ ಕೃಷ್ಣ.ಪಿ ಬಂದ್ಯೋಡು ದ್ವೀಪ ಪ್ರಜ್ವಲಿಸಿ, ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಜೇಶ್ವರ ಘಂಡ ಕಾರ್ಯವಾಹಕ ಮಹಾಬಲ ವಹಿಸಿದ್ದರು. ಐಲ ಕ್ಷೇತ್ರದ ಆಡಳಿತ ಮೊಕ್ತೇಸರ ನಾರಾಯಣ ಹೆಗ್ಡೆ ಕೋಡಿಬೈಲು, ಮಂಗಳೂರು ಕೆ.ಎಂ. ಸಿ ಆಸ್ಪತ್ರೆ ವೈದ್ಯರಾದ
ಡಾ. ಐಶಾನ್, ಸೇವಾ ಭಾರತಿ ಅಧ್ಯಕ್ಷ ಕೃಷ್ಣ.ಪಿ ಬಂದಿಯೋಡ್,
ಕಾರ್ಯದರ್ಶಿ ಸತೀಶ್ ಶೆಟ್ಟಿ, ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ
ಪ್ರೇಮ್ ಕುಮಾರ್, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ಶುಭಾಶಂಸನೆಗೈದರು. ಸೇವಾ ಭಾರತೀಯ ಪ್ರಮುಖ್ ಸತೀಶ್ ಮಾಸ್ತರ್ ಸ್ವಾಗತಿಸಿ, ಪದ್ಮಾವತಿ ಟೀಚರ್ ನಿರೂಪಿಸಿ, ರಾಮಚಂದ್ರ ಬಳ್ಳಾಲ್ ವಂದಿಸಿದರು. ಬಳಿಕ ಹಲವಾರು ಮಂದಿ ಕಾರ್ಯಕರ್ತರು ರಕ್ತದಾನಗೈದರು.




