ಎಸ್. ಎನ್.ಡಿ. ಪಿ ಹೊಸಂಗಡಿ ಮಂಜೇಶ್ವರ ಯೋಗಂ ವತಿಯಿಂದ ಶ್ರೀ ನಾರಾಯಣ ಗುರುವರ್ಯರ 170 ನೇ ಜಯಂತಿ.
ಆಗಸ್ಟ್ 20, 2024
0
ಎಸ್. ಎನ್.ಡಿ. ಪಿ ಹೊಸಂಗಡಿ ಮಂಜೇಶ್ವರ ಯೋಗಂ ವತಿಯಿಂದ ಶ್ರೀ ನಾರಾಯಣ ಗುರುವರ್ಯರ 170 ನೇ ಜಯಂತಿ.
ಮಂಜೇಶ್ವರ: ಎಸ್. ಎನ್.ಡಿ. ಪಿ ಹೊಸಂಗಡಿ ಮಂಜೇಶ್ವರ ಯೋಗಂ ವತಿಯಿಂದ ಶ್ರೀ ನಾರಾಯಣ ಗುರುವರ್ಯರ 170 ನೇ ಜಯಂತಿಯನ್ನು ಕನಿಲ ಭಗವತಿ ಕ್ಷೇತ್ರದಲ್ಲಿ ಕ್ಷೇತ್ರದ ಹಿರಿಯ ಕಾರ್ನವರ್ ರವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಚಾಲನೆಗೊಳಿಸಿದರು. ಎಸ್. ಎನ್.ಡಿ. ಪಿ ಜಿಲ್ಲಾ ಅಧ್ಯಕ್ಷರಾದ ನಾರಾಯಣ ಕನಿಲ, ಅಧ್ಯಕ್ಷರಾದ ಜಯರಾಜ್ ಎಂ.ಎಸ್. ಕಾರ್ಯದರ್ಶಿ ರಮೇಶ್ ಹೊಸಂಗಡಿ, ನಿಕಟ ಪೂರ್ವ ಅಧ್ಯಕ್ಷರಾದ ನ್ಯಾ. ನವೀನ್ ರಾಜ್ ಕೆ.ಜೆ, ಕನಿಲ ಕ್ಷೇತ್ರದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಪದ್ಮನಾಭ ಕಡಪ್ಪರ, ಪದಾಧಿಕಾರಿಗಳಾದ ದೇವರಾಜ್ ಎಂ.ಎಸ್, ಸದಾಶಿವ ಅಂಗಡಿಪದವು, ನವೀನ್ ಕೌಡೂರ್, ಅರ್ಚಕರಾದ ಭಾಸ್ಕರ ಉಪ್ಪಳ ಉಪಸ್ಥಿತರಿದ್ದರು.


