Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಮಂಜೇಶ್ವರ ಗೋವಿಂದಪೈ ನಿವಾಸದಲ್ಲಿ ಇಂದು ಸಂಜೆ ನಡೆದ ಕನ್ನಡ ಚಿಂತನ ಕಾರ್ಯಕ್ರಮ

ಮಂಜೇಶ್ವರ ಗೋವಿಂದಪೈ ನಿವಾಸದಲ್ಲಿ ಇಂದು ಸಂಜೆ ನಡೆದ ಕನ್ನಡ ಚಿಂತನ ಕಾರ್ಯಕ್ರಮ.
ಮಂಜೇಶ್ವರ: “ಬ್ರಿಟಿಷ್ ವಶಾಹತ್ ಶಾಹೀ ವ್ಯವಸ್ಥೆ” ನಮ್ಮನ್ನು ಗುಲಾಮಗಿರಿಗೆ ತಳ್ಳಿದ ವ್ಯವಸ್ಥೆ. ಈ ವ್ಯವಸ್ಥೆಯನ್ನು ವಿರೋಧಿಸಿದ ಎರಡು ಮಹಾನ್ ವ್ಯಕ್ತಿಗಳು ಮಹಾತ್ಮಗಾಂಧಿ ಮತ್ತು ಗೋವಿಂದಪೈ ಅವರು. ಆದರೆ ಅವರು ಆ ವ್ಯವಸ್ಥೆಯನ್ನು ವಿರೋಧಿಸಿದರು ಹೊರತು ಆ ಸಂಸ್ಕೃತಿಯನ್ನು ವಿರೋಧಿಸಲಿಲ್ಲ. ಆ ಸಂಸ್ಕೃತಿಯಿಂದ ಬಂದ ಅನೇಕ ಮಹನೀಯರನ್ನು ವಿರೋಧಿಸಲಿಲ್ಲ ಮತ್ತು ಎಲ್ಲದಕ್ಕಿಂತ ಮಿಗಿಲಾಗಿ ಆ ಸಂಸ್ಕೃತಿಯನ್ನು ತಿರಸ್ಕರಿಸಲಿಲ್ಲ. ದೊಡ್ಡ ದೊಡ್ಡ ವಿಚಾರಗಳನ್ನು, ನಾಟಕಗಳನ್ನು, ಕಾವ್ಯಗಳನ್ನು ತಿರಸ್ಕರಿಸಲಿಲ್ಲ ಎಂದು ಮಂಜೇಶ್ವರ ಗೋವಿಂದಪೈ ಸ್ಮಾರಕ ಗ್ರಂಥಾಲಯ (ಗಿಳಿವಿಂಡು) ನಿವಾಸದಲ್ಲಿ ಇಂದು ಸಂಜೆ ನಡೆದ ಕನ್ನಡ ಚಿಂತನ ಕಾರ್ಯಕ್ರಮದಲ್ಲಿ ಹಿರಿಯ ರಂಗಭೂಮಿ ನಿರ್ದೇಶಕರಾದ ಪ್ರಸನ್ನಾ ಅವರು ಹೇಳಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಮಹಾಕವಿ ಮಂಜೇಶ್ವರ ಗೋವಿಂದಪೈ ಸ್ಮಾರಕ ಗ್ರಂಥಾಲಯ ನೇತೃತ್ವದಲ್ಲಿ ನಡೆದ ಕನ್ನಡ ಚಿಂತನ ಕಾರ್ಯಕ್ರಮದಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧಿ ರಾಷ್ಟ್ರಕವಿ ಗೋವಿಂದಪೈ “ಚಿಂತನ ಮಂಥನ “ ಕಾರ್ಯಕ್ರಮದಲ್ಲಿ ಪ್ರಸನ್ನ ಅವರು ವಿಷಯ ಮಂಡನೆ ಮಾಡಿದರು. ಉಮೇಶ್ ಎಂ ಸಾಲಿಯಾನ್ ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿದರು. ಉಸೇನ್ ಮಾಸ್ಟರ್, ಕಮಲಾಕ್ಷ ಡಿ, ಪ್ರದೀಪ್ ಮೊದಲಾದವರು ಉಪಸ್ಥಿತರಿದ್ದರು.
ನಾಡೋಜ ಕಯ್ಯಾರ ಕಿoಞ್ಞಣ್ಣ ರೈ ಅವರ ಕಥನ ಕಾವ್ಯವನ್ನು ಉದಯ ಸಾರಂಗ ನಿರ್ದೇಶಿಸಿ “ಪಂಜರದ ಗಿಳಿ” ನಾಟಕ ವಿದ್ಯಾರ್ಥಿಗಳಿಂದ ಪ್ರದರ್ಶನಗೊಂಡಿತು. ಬಾಲಕೃಷ್ಣ ಶೆಟ್ಟಿಗಾರ್ ಸ್ವಾಗತಿಸಿ ಜಯಂತ್ ಮಾಸ್ಟರ್ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.