Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಕೆಸರು ತುಂಬಿ ಬ್ಲಾಕ್ ಆಗಿದ್ದ ಚರಂಡಿಯಿಂದ ಮನೆ ಸುತ್ತಲೂ ಆವರಿಸಿದ ನೀರು. ಬುಲ್ಡೋಜರ್ ಬಳಸಿ ಶುಚಿಗೊಳಿಸಿ, ಮನೆಯವರು ವಾಸಿಸಲು ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ವರ್ಕಾಡಿ ಗ್ರಾಮ ಪಂಚಾಯತ್ ಮಾದರಿ.

ಕೆಸರು ತುಂಬಿ ಬ್ಲಾಕ್ ಆಗಿದ್ದ ಚರಂಡಿಯಿಂದ ಮನೆ ಸುತ್ತಲೂ ಆವರಿಸಿದ ನೀರು. ಬುಲ್ಡೋಜರ್ ಬಳಸಿ ಶುಚಿಗೊಳಿಸಿ, ಮನೆಯವರು ವಾಸಿಸಲು ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ವರ್ಕಾಡಿ ಗ್ರಾಮ ಪಂಚಾಯತ್ ಮಾದರಿ.
ಮಂಜೇಶ್ವರ: ಮನೆ ಸುತ್ತಲೂ ಆವರಿಸಿದ ನೀರನ್ನು ಹರಿದು ಹೋಗಲು ಹಾಗೂ ಕಸಕಡ್ಡಿಗಳು, ಕೆಸರು ತುಂಬಿ ಬ್ಲಾಕ್ ಆಗಿದ್ದ ಚರಂಡಿಯನ್ನು ಬುಲ್ಡೋಜರ್ ಮೂಲಕ ಶುಚಿಗೊಳಿಸಿ, ಮನೆಯವರು ವಾಸಿಸಲು ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ವರ್ಕಾಡಿ ಗ್ರಾಮ ಪಂಚಾಯತ್ ಮಾದರಿಯಾಗಿದೆ.
ಆನೆಕಲ್ಲು ಸಂತಾನ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬಳಿಯ ನಿವಾಸಿ ದಿ. ರಾಮಭಟ್ ರ ಮನೆ ಸುತ್ತಾ ಮಳೆ ನೀರು ಸೇರಿದಂತೆ
ಪಕ್ಕದಲ್ಲಿ ಹರಿಯುತ್ತಿದ್ದ ಚರಂಡಿ ನೀರಿನಿಂದ ಜಲಾವೃತವಾಗಿದ್ದು, ಪತ್ನಿ ಮಲ್ಲಿಕಾ (60) ಏಕಾಂತವಾಗಿ ಈ ಮನೆಯಲ್ಲಿ ವಾಸಿಸುತ್ತಿದ್ದು, ಮಳೆ ನೀರಿನಿಂದ ಹೊರ ಬರಲು ಎರಡು ದಿನಗಳ ಕಾಲ ಅಸಾಧ್ಯವಾಗಿತ್ತು. ಈ ಬಗ್ಗೆ ಮಾಹಿತಿ ತಿಳಿದ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಭಾರತಿ ಹಾಗೂ ವಾರ್ಡ್ ಸದಸ್ಯೆ ಶ್ರೀಮತಿ ಸೀತಾರವರು ಮಲ್ಲಿಕರ ಮನೆಗೆ ಭೇಟಿ ನೀಡಿ ಮಲ್ಲಿಕಾರವರನ್ನು ಮನೆ ಬಳಿ ಇರುವ ಸಂಬಂಧಿಕರ ಮನೆಯಲ್ಲಿ ತಾತ್ಕಾಲಿಕವಾಗಿ ವಾಸ್ತವ್ಯ ಹೂಡಲು ವ್ಯವಸ್ಥೆ ಮಾಡಿದ್ದಾರೆ.
ಬಳಿಕ ಪಂಚಾಯತ್ ನ ವತಿಯಿಂದ ಬುಲ್ಡೋಜರ್ ತರಿಸಿ, ಕಸ ಕಡ್ಡಿಗಳಿಂದ ತುಂಬಿ ತುಳುಕಿದ್ದ ಚರಂಡಿಯನ್ನು ದುರಸ್ತಿಗೊಳಿಸಿ, ಮನೆ ಸುತ್ತ ಆವರಿಸಿದ್ದ ನೀರಿನಿಂದ ಮುಕ್ತಗೊಳಿಸಿ, ಸೂಕ್ತ ಕ್ರಮ ಕೈಗೊಂಡಿದ್ದಾರೆ. ಈ ವೇಳೆ ವರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಭಾರತಿ, ಪಂಚಾಯತ್ ಕಾರ್ಯದರ್ಶಿ, ಸದಸ್ಯ ಉಮ್ಮರ್ ಬೋರ್ಕಳ, ವಾರ್ಡ್ ಸದಸ್ಯೆ ಶ್ರೀಮತಿ ಸೀತಾ ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.