Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಬಿಜೆಪಿ ಸದಸ್ಯತ್ವ ಅಭಿಯಾನ, ಜಾಗತಿಕ ಸಂಘಟನಾ ಶಕ್ತಿಯಾಗಿ ಬಿಜೆಪಿ. - ನ್ಯಾ ಬಾಲಕೃಷ್ಣ ಶೆಟ್ಟಿ.

ಬಿಜೆಪಿ ಸದಸ್ಯತ್ವ ಅಭಿಯಾನ, ಜಾಗತಿಕ ಸಂಘಟನಾ ಶಕ್ತಿಯಾಗಿ ಬಿಜೆಪಿ. - ನ್ಯಾ ಬಾಲಕೃಷ್ಣ ಶೆಟ್ಟಿ.
ಮಂಜೇಶ್ವರ: ಜಗತ್ತಿನ ಅತೀ ದೊಡ್ಡ ರಾಜಕೀಯ ಪಕ್ಷ ಬಿಜೆಪಿ ಮತ್ತೆ ಸದಸ್ಯತ್ವ ಅಭಿಯಾನ ಸೆಪ್ಟೆಂಬರ್ 1 ರಿಂದ ಆರಂಭ ವಾಗಲಿದೆ. ದೇಶದಲ್ಲಿ 35 ಕೋಟಿ ಸದಸ್ಯತ್ವ ಗುರಿ ಬಿಜೆಪಿ ಈ ಬಾರಿ ಮಾಡಿದೆ ರಾಜ್ಯದಲ್ಲಿ 45 ಲಕ್ಷ ಸದಸ್ಯತ್ವ ಗುರಿ ಮುಟ್ಟಲಿದೆ ಎಂದು ಬಿಜೆಪಿ ರಾಜ್ಯ ಸಮಿತಿ ಸದಸ್ಯ ಬಾಲಕೃಷ್ಣ ಶೆಟ್ಟಿ ಹೇಳಿದರು. ಬಿಜೆಪಿ ಮಂಜೇಶ್ವರ ಮಂಡಲ ಸದಸ್ಯತ್ವ ಕಾರ್ಯಾಗಾರವನ್ನು ದೀಪ ಬೆಳಗಿಸಿ, ಉದ್ಘಾಟಿಸಿ ಅವರು ಮಾತನಾಡಿದರು.
ಸದಸ್ಯತ್ವ ಪಡೆದವರು ಪಕ್ಷ ತೀರ್ಮಾನಿಸಿದ ಕಾರ್ಯಗಳನ್ನು ಮಾಡುವ ಕಾರ್ಯಕರ್ತರು ಆಗಬೇಕು ಆಗ ಪಕ್ಷದ ಬೆಳವಣಿಗೆ ಆಗುತ್ತೆ. ಅಲ್ಲದೆ ಪಕ್ಷವನ್ನು ದೂಶಿಸುವುದೇ ಕಾಯಕವಾಗಬಾರದು ಎಂದು ಹೇಳಿದರು.
ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಅಧ್ಯಕ್ಷತೆ ವಹಿಸಿದ್ದರು. ಮತ್ತು ಕಾರ್ಯಾಗಾರ ನಡೆಸಿ, ಮಾಹಿತಿ ನೀಡಿದರು.
ಬಿಜೆಪಿ ಜಿಲ್ಲಾ ಪ್ರ ಕಾರ್ಯದರ್ಶಿ ವಿಜಯ್ ಕುಮಾರ್ ರೈ, ಜಿಲ್ಲಾ ಕಾರ್ಯದರ್ಶಿ ಮಣಿಕಂಠ ರೈ, ರಾಜ್ಯ ಎಸ್.ಸಿ ಮೋರ್ಚಾ ಉಪಾಧ್ಯಕ್ಷ ಎ.ಕೆ ಕಯ್ಯಾರ್, ಪ್ರಸಾದ್ ರೈ, ಜಯಲಕ್ಷ್ಮಿ ಭಟ್, ಯಾದವ ಬಡಾಜೆ, ಸುಬ್ರಮಣ್ಯ ಭಟ್, ನಾರಾಯಣ ನಾಯ್ಕ್, ಭಾಸ್ಕರ್ ಪೊಯ್ಯೇ, ಲೋಕೇಶ್ ನೋಂಡ, ಪುಷ್ಪ ಲಕ್ಷ್ಮಿ, ಆಶಾಲತಾ ಪೆಲಪಾಡಿ, ಚುನಾಯಿತ ಸದಸ್ಯರುಗಳು, ಯುವ ಮೋರ್ಚಾ ನೇತಾರರು ಉಪಸ್ಥಿತರಿದ್ದರು. ಯತೀರಾಜ್ ಶೆಟ್ಟಿ ಸ್ವಾಗತಿಸಿ, ಕೆ.ವಿ ಭಟ್ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.