Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಕೊಡ್ಲಮೊಗರು ಸೇವಾ ಸಹಕಾರಿ ಬ್ಯಾಂಕ್ ಗೆ ಕಳ್ಳರು ನುಗ್ಗಿದ ಪ್ರಕರಣ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಡಾಗ್ ಸ್ಕಾಡ್ ನಿಂದ ತನಿಖೆ.

ಕೊಡ್ಲಮೊಗರು ಸೇವಾ ಸಹಕಾರಿ ಬ್ಯಾಂಕ್ ಗೆ ಕಳ್ಳರು ನುಗ್ಗಿದ ಪ್ರಕರಣ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಡಾಗ್ ಸ್ಕಾಡ್ ನಿಂದ ತನಿಖೆ.
ಮಂಜೇಶ್ವರ: ಮೊನ್ನೆ ರಾತ್ರಿ ಕೊಡ್ಲಮೊಗರು ಸೇವಾ ಸಹಕಾರಿ ಬ್ಯಾಂಕ್ ನ ಶಟರ್ ಮುರಿದು ಒಳ ನುಗ್ಗಿ ಕಳವು ಮಾಡಲು ಯತ್ನಿಸಿದ ಪ್ರಕರಣದ ಮುಂದುವರಿದ ತನಿಖೆಯ ಭಾಗದಂತೆ ಸ್ಥಳಕ್ಕೆ ಬೆರಳಚ್ಚು ತಜ್ಞರು, ಪೊಲೀಸ್ ನಾಯಿ ಆಗಮಿಸಿ, ಬ್ಯಾಂಕ್ ನಲ್ಲಿ ಪರಿಶೀಲನೆ ನಡೆಸಿದ್ದಾರೆ.
ಪೊಲೀಸ್ ನಾಯಿ ಬ್ಯಾಂಕ್ ನಿಂದ ದೈಗೊಳಿ ರಸ್ತೆ ತನಕ ಅಲ್ಪ ದೂರ ತೆರಳಿ ಹಿಂದಿರುಗಿ ಶ್ರೀ ವಾಣಿ ವಿಜಯ ಶಾಲೆ ರಸ್ತೆಯ ಅರ್ಧದ ವರೆಗೆ ತೆರಳಿ ಹಿಂದಿರುಗಿತು. ಬೆರಳಚ್ಚು ತಜ್ಞರ ಪರಿಶೀಲನೆಯಲ್ಲಿ ಮೂರು ಬೆರಳಚ್ಚು ಸಂಗ್ರಹಿಸಿದ್ದಾರೆ. ಕಳೆದ ಎರಡು ತಿಂಗಳಿನಿಂದ ವರ್ಕಾಡಿ ಮೀಂಜ ಪಂಚಾಯತ್ ವ್ಯಾಪ್ತಿ ಪ್ರದೇಶದಲ್ಲಿ ಹಲವು ಕಳವು ಪ್ರಕರಣ ಪದೇ ಪದೇ ನಡೆಯುತ್ತಿದ್ದು, ಕಳವು ಆರೋಪಿಗಳ ಪತ್ತೆಗಾಗಿ ಪೊಲೀಸ್ ಇಲಾಖೆ ಸಮಗ್ರವಾಗಿ ತನಿಖೆ ನಡೆಸಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.