ಗ್ರಂಥ ಶಾಲಾ, ಅಧ್ಯಾಪಕ ಚಳವಳಿಗಳ ಜಿಲ್ಲೆಯ ಹಿರಿಯ ನಾಯಕ, ಪೈವಳಿಕೆಯ ಕುರುವೇರಿಯ ಎಸ್ ನಾರಾಯಣ ಭಟ್( 88 ) ಕೋಝಿಕ್ಕೋಡ್ ನಲ್ಲಿ ಇಂದು ಮುಂಜಾನೆ ನಿಧನ.
ಆಗಸ್ಟ್ 24, 2024
0
ಗ್ರಂಥ ಶಾಲಾ, ಅಧ್ಯಾಪಕ ಚಳವಳಿಗಳ ಜಿಲ್ಲೆಯ ಹಿರಿಯ ನಾಯಕ, ಪೈವಳಿಕೆಯ ಕುರುವೇರಿಯ ಎಸ್ ನಾರಾಯಣ ಭಟ್( 88 ) ಕೋಝಿಕ್ಕೋಡ್ ನಲ್ಲಿ ಇಂದು ಮುಂಜಾನೆ ನಿಧನ.
ಪೈವಳಿಕೆ: ಗ್ರಂಥ ಶಾಲಾ, ಅಧ್ಯಾಪಕ ಚಳವಳಿಗಳ ಜಿಲ್ಲೆಯ ಹಿರಿಯ ನಾಯಕ, ಪೈವಳಿಕೆಯ ಕುರುವೇರಿಯ ಎಸ್ ನಾರಾಯಣ ಭಟ್( 88 ) ಕೋಝಿಕ್ಕೋಡ್ ನಲ್ಲಿ ಇಂದು ಮುಂಜಾನೆ ನಿಧನ ಹೊಂದಿದ್ದಾರೆ. ಮೃತರು ಮುಳಿಗದ್ದೆ ಹೆದ್ದಾರಿ ಎ.ಯು.ಪಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾಗಿದ್ದರು. ಇವರು ಗ್ರಂಥ ಶಾಲಾ ಸಂಘದ ಸಂಸ್ಥಾನ ಕೌನ್ಸಿಲರ್, ಅಧ್ಯಾಪಕ ಸಂಘಟನೆ ಕೆ.ಎಸ್.ಟಿ.ಎ ಯ ಪ್ರಾಂತ್ಯ ಸಮಿತಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್ ನ ಪ್ರಥಮ ಅಧ್ಯಕ್ಷ, ಅವಿಭಜಿತ ಕಾಸರಗೋಡು ತಾಲೂಕು ಲೈಬ್ರೆರಿ ಕೌನ್ಸಿಲ್ ನ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಮೃತರ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರ ಇಂದು ಅಪರಾಹ್ನ 3 ಗಂಟೆಗೆ ಕುರುವೇರಿ ಸ್ವಗೃಹ ದಲ್ಲಿ ಜರಗಲಿದೆ. ಮೃತರು: ತಂದೆ ಗಣಪತಿ ಭಟ್,
ತಾಯಿ ಗಂಗಮ್ಮ, ಪತ್ನಿ: ಲಕ್ಷ್ಮಿ, ಮಕ್ಕಳಾದ: ಗಣೇಶ್ ಭಟ್,
ರೇಖಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

