ಕಾಸರಗೋಡು ಜಿಲ್ಲಾ ಶೋಪ್ಸ್ & ಕಮರ್ಶಿಯಲ್ ಎಸ್ಟಾಬ್ಲಿಷ್ ಮೆಂಟ್ ವರ್ಕರ್ಸ್ ಯೂನಿಯನ್ (AITUC) ಅಸ್ತಿತ್ವಕ್ಕೆ.
ಆಗಸ್ಟ್ 24, 2024
0
ಕಾಸರಗೋಡು ಜಿಲ್ಲಾ ಶೋಪ್ಸ್ & ಕಮರ್ಶಿಯಲ್ ಎಸ್ಟಾಬ್ಲಿಷ್ ಮೆಂಟ್ ವರ್ಕರ್ಸ್ ಯೂನಿಯನ್ (AITUC) ಅಸ್ತಿತ್ವಕ್ಕೆ.
ಮಂಜೇಶ್ವರ: ಕಾಸರಗೋಡು ಜಿಲ್ಲಾ ಶೋಪ್ಸ್ & ಕಮರ್ಶಿಯಲ್ ಎಸ್ಟಾಬ್ಲಿಷ್ ಮೆಂಟ್ ವರ್ಕರ್ಸ್ ಯೂನಿಯನ್ (AITUC) ಅಸ್ತಿತ್ವಕ್ಕೆ. ಸಂಘಟನೆಯ ನೂತನ ಮಂಜೇಶ್ವರ ವಲಯ ಸಮಿತಿ ಸಭೆಯು ಉಪ್ಪಳ ಸಿಪಿಐ ಕಚೇರಿಯಲ್ಲಿ ಇಂದು ಬೆಳಗ್ಗೆ ಜರಗಿತು. ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಬಿಜು ಉಣ್ಣಿತಾನ್ ಉದ್ಘಾಟಿಸಿ ಮಾತನಾಡಿದರು. ಸಿಪಿಐ ಉಪ್ಪಳ ಲೋಕಲ್ ಕಾರ್ಯದರ್ಶಿ ಓಂ ಪ್ರಕಾಶ್ ಅಧ್ಯಕ್ಷತೆ ವಹಿಸಿದರು. ಸಭೆಯಲ್ಲಿ ಸಿಪಿಐ ಮಂಜೇಶ್ವರ ಮಂಡಲ ಕಾರ್ಯದರ್ಶಿ ಜಯರಾಮ್ ಬಲ್ಲಂಗುಡೇಲ್, ಮೋಟಾರ್ ಯೂನಿಯನ್ (AITUC) ಕಾಸರಗೋಡು ಜಿಲ್ಲಾ ಅಧ್ಯಕ್ಷ ಮುಸ್ತಫಾ ಕಡಂಬಾರ್ ಮೊದಲಾದವರು ಉಪಸ್ಥಿತರಿದ್ದರು. ನೂತನ ಮಂಜೇಶ್ವರ ವಲಯ ಸಮಿತಿಗೆ ಅಧ್ಯಕ್ಷರಾಗಿ ಶರತ್ ಬೆಜ್ಜ, ಪ್ರಧಾನ ಕಾರ್ಯದರ್ಶಿಯಾಗಿ ಜಿಲ್ಲಾ ಸಮಿತಿ ಸದಸ್ಯರಾದ ನಾರಾಯಣ ಕುಂಬಳೆ, ಉಪಾಧ್ಯಕ್ಷರಾಗಿ ಜಿಲ್ಲಾ ಸಮಿತಿ ಸದಸ್ಯ ಶನೀಶ್ ಮಂಜೇಶ್ವರ, ಹಾಗೂ ದಯಾನಂದ್ ಪಂಡಿತ್, ಜೊತೆ ಕಾರ್ಯದರ್ಶಿಯಾಗಿ ದಯಾಕರ ಮಾಡ, ಸಯೀದ್ ಉಪ್ಪಳ ಸಹಿತ 13 ಮಂದಿಯ ನೂತನ ಸಮಿತಿಯನ್ನು ರೂಪೀಕರಿಸಲಾಯಿತು. ಸಿಪಿಐ ಜಿಲ್ಲಾ ಕೌನ್ಸಿಲ್ ಸದಸ್ಯರಾದ ಎಸ್. ರಾಮಚಂದ್ರ ಬಡಾಜೆ ಸ್ವಾಗತಿಸಿ, ವಂದಿಸಿದರು.



