ಮಾಣಿಲ, ಪಕಳಕುಂಜ ನಿವಾಸಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರಿಯ ಕಾರ್ಯಕರ್ತ ಸಾಯ ಭುಜಂಗ ಆಚಾರ್ಯ (83) ನಿಧನ.
ಆಗಸ್ಟ್ 11, 2024
0
ಮಾಣಿಲ, ಪಕಳಕುಂಜ ನಿವಾಸಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರಿಯ ಕಾರ್ಯಕರ್ತ ಸಾಯ ಭುಜಂಗ ಆಚಾರ್ಯ (83) ನಿಧನ.
ಪೆರುವಾಯಿ: ಮಾಣಿಲ, ಪಕಳಕುಂಜ ನಿವಾಸಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರಿಯ ಕಾರ್ಯಕರ್ತ ಸಾಯ ಭುಜಂಗ ಆಚಾರ್ಯ (83) ನಿನ್ನೆ ಸಂಜೆ ಸ್ವ - ಗೃಹದಲ್ಲಿ ನಿಧನರಾದರು. ಮೃತರು ಕಬ್ಬಿನ ಕೆಲಸ ಮಾಡುತ್ತಿದ್ದರು. ಮೃತರು ದಿ. ಕುಂಞಿಯ್ಯ ಆಚಾರ್ಯ - ಲಕ್ಷ್ಮೀ ದಂಪತಿಗಳ ಪುತ್ರರಾಗಿದ್ದು, ಪತ್ನಿ: ಹೇಮಾವತಿ, ಮಕ್ಕಳಾದ ಖ್ಯಾತ ದಾಸವಾಣಿ ಗಾಯಕ ಅರವಿಂದ ಆಚಾರ್ಯ ಮಾಣಿಲ, ಶಕುಂತಲಾ, ಭುವನೇಶ್ವರೀ, ಅಳಿಯಂದಿರಾದ ಅನಂತ ಆಚಾರ್ಯ ಮಾಣಿಲ, ಖ್ಯಾತ ರಂಗಭೂಮಿ ಕಲಾವಿದ, ನಟ ಜಯರಾಮ ಆಚಾರ್ಯ ಹೊಸಂಗಡಿ, ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತಿಮ ವಿಧಿ ವಿಧಾನ ಇಂದು ಬೆಳಗ್ಗೆ ಸ್ವ - ಗೃಹದಲ್ಲಿ ನಡೆದು, ಬಳಿಕ ವಿಟ್ಲದಲ್ಲಿರುವ ಸಾರ್ವಜನಿಕ ಹಿಂದೂ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಿತು.

