ನಿರ್ಮಾಣ ಕಾರ್ಮಿಕ ಸಂಘಟನೆ (STU) ವತಿಯಿಂದ ಜುಲೈ 31 ರಂದು ಕಲೆಕ್ಟ್ರೇಟ್ ಮಾರ್ಚ್. ವರ್ಕಾಡಿಯಿಂದ 100 ಮಂದಿ.
ಜುಲೈ 27, 2024
0
ನಿರ್ಮಾಣ ಕಾರ್ಮಿಕ ಸಂಘಟನೆ (STU) ವತಿಯಿಂದ ಜುಲೈ 31 ರಂದು ಕಲೆಕ್ಟ್ರೇಟ್ ಮಾರ್ಚ್. ವರ್ಕಾಡಿಯಿಂದ 100 ಮಂದಿ.
ವರ್ಕಾಡಿ: ನಿರ್ಮಾಣ ಕಾರ್ಮಿಕರ ವಿವಿಧ ಬೇಡಿಕೆಗಳಾದ 13 ತಿಂಗಳು ಬಾಕಿ ಇರುವ ಪಿಂಚಣಿಯನ್ನು ಕೂಡಲೇ ವಿತರಿಸಬೇಕು, ಇನ್ನಿತರ ಮೊಟಕುಗೊಂಡ ವಿವಿಧ ಸವಲತ್ತುಗಳನ್ನು ಶೀಘ್ರದಲ್ಲೇ ವಿತರಿಸಬೇಕು, ಮುಂತಾದ ಬೇಡಿಕೆಗಳನ್ನಿಟ್ಟು ಸರಕಾರದ ಜನವಿರೋಧಿ ಆಡಳಿತಕ್ಕೆದುರಾಗಿ ಜುಲೈ 31 ರಂದು ನಡೆಸಲ್ಪಡುವ ಕಲೆಕ್ಟ್ರೇಟ್ ಮಾರ್ಚ್ ವಿಜಯಗೊಳಿಸಲು ಹಾಗೂ ವರ್ಕಾಡಿ ಭಾದದಿಂದ 100 ಮಂದಿ ತೆರಳಲು ವರ್ಕಾಡಿ ಪಂಚಾಯತ್ ವ್ಯಾಪ್ತಿಯ ಆನೆಕಲ್ಲು, ಪಾತೂರು, ಧರ್ಮನಗರ, ಪಾವೂರು ಶಾಖೆಯ S.T.U ಸಭೆಯು ಇಂದು ಬೆಳಗ್ಗೆ ನಡೆಯಿತು. ಈ ಕುರಿತು ನಡೆದ ಸಭೆಯನ್ನು S.T.U ರಾಜ್ಯ ಕಾರ್ಯದರ್ಶಿ ಶರೀಫ್ ಕೊಡವಂಜೆ ಉದ್ಘಾಟಿಸಿದರು. ನೇತಾರರಾದ P.I.A ಲತೀಫ್, ಇಬ್ರಾಹಿಂ ಎದಿತೋಡು, ಶಿಹಾಬ್ ರಹ್ಮಾನಿಯ ನಗರ್, ಅಬ್ದುಲ್ ಮಜೀದ್ B.A, K ಹಸನ್ ಕುಂಞಿ, K ಮುಹಮ್ಮದ್, ಉಮರಬ್ಬ ಆನೆಕಲ್, ಹಾರಿಸ್ ಪಾವೂರು, ಇಬ್ರಾಹಿಂ ಬದಿಯಾರ್, ಇಸ್ಮಾಯಿಲ್ ಧರ್ಮನಗರ, A.K ಮುಹಮ್ಮದ್ ಆನೆಕಲ್, ಅಶ್ರಫ್ ಆನೆಕಲ್, ಬದ್ರುದ್ದೀನ್ ಪಾವೂರು, ರಮೇಶ್ ಸಪಾಳ್ಯ ಬಾಕ್ರಬೈಲ್, ಲತೀಫ್ ನಡಿಬೈಲ್, DBA ಕಾದರ್, ಉಮ್ಮರ್ ಬಾಕಿಮಾರ್ ಭಾಗವಹಿಸಿದರು.





