ಹಿಂದೂ ವಿರೋಧಿ ಹೇಳಿಕೆ ನೀಡಿದ ರಾಹುಲ್ ಗಾಂಧಿ ವಿರುದ್ಧ ಹಿಂದೂ ಐಕ್ಯ ವೇದಿ ನೇತೃತ್ವದಲ್ಲಿ ಸಂಘ ಪರಿವಾರದಿಂದ ಕುಂಬಳೆ ಪೇಟೆಯಲ್ಲಿ ಪ್ರತಿಭಟನೆ.
ಜುಲೈ 05, 2024
0
ಕುಂಬಳೆಯಲ್ಲಿ ಹಿಂದು ಐಕ್ಯ ವೇದಿ ನೇತ್ರತ್ವದಲ್ಲಿ ಸಂಘ ಪರಿವಾರದಿಂದ ಪ್ರತಿಭಟನಾ ಮೆರವಣಿಗೆ.
ಕುಂಬಳೆ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯು ಲೋಕಸಭೆಯಲ್ಲಿ ನೀಡಿದ ಹಿಂದು ವಿರೋಧಿ ಹೇಳಿಕೆ ಪ್ರತಿಭಟಿಸಿ ಹಿಂದು ಐಕ್ಯ ವೇದಿ ನೇತ್ರತ್ವದಲ್ಲಿ ಸಂಘ ಪರಿವಾರ ಸಂಘಟನೆಗಳು ಕುಂಬಳೆಯಲ್ಲಿ ಇಂದು ಸಂಜೆ ಪ್ರತಿಭಟನೆ ನಡೆಸಿದರು. ಹಿಂದು ಐಕ್ಯವೇದಿ ತಾಲೂಕು ಅಧಕ್ಷ ಸುರೇಶ್ ಶಾಂತಿಪಳ್ಳ ಅಧ್ಯಕ್ಷತೆ ವಹಿಸಿದರು. ಹಿಂ.ಐ.ವೇ ಜಿಲ್ಲಾಧ್ಯಕ್ಷ ಎಸ್. ಪಿ. ಶಾಜಿ ಮತ್ತು ಭಾಜಪ ನೇತಾರ ಮುರಳಿಧರ್ ಯಾಧವ ನಾಯ್ಕಪ್ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು. ಸಂಘಪರಿವಾರದ ನೇತಾರರಾದ ಸುರೇಶ್ ಶಟ್ಟಿ ಪೂಕಟ್ಟೆ, ಅಶೋಕ್ ಮಾಸ್ಟರ್ ಬಾಡೂರು, ವಸಂತಿ ಕೃಷ್ ಕುಂಬಳೆ, ಸುರೇಶ್ ಶೆಟ್ಟಿ ಪ್ರತಾಪ್ ನಗರ, ಸುಜಿತ್ ಕುಂಬಳೆ, ಸುಕುಮಾರ್ ಅನಂತಪುರ, ಸುನೀಲ್ ಅನಂತಪುರ, ಶಂಕರ ಆಳ್ವ ಕೊಟೆಕಾರ್, ದಿನೇಶ್ ಬಂಬ್ರಾಣ, ಹರೀಶ್ ಸಿದ್ದಿಬೈಲ್, ಜಿತೇಂದ್ರ ನಾಯ್ಕಪ್, ಸಂದೀಪ್ ಗಟ್ಟಿ ಕುಂಬಳೆ, ಮಾಧವ ಗಟ್ಟಿ ಪೆರುವಾಡ್, ಗಣೇಶ್ ಆಚಾರ್ಯ ಕೃಷ್ಣ ನಗರ ಪ್ರೇಮಲತಾ ಗಟ್ಟಿ, ಸುನೀತಾ ಟೀಚರ್ ಕುಂಬಳೆ ಮೊದಲಾದವರು ಉಪಸ್ಥಿತರಿದ್ದು, ಪ್ರತಿಭಟನೆಗೆ ನೇತೃತ್ವ ನೀಡಿದರು.


