Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಖ್ಯಾತ ಯಕ್ಷಗಾನ ಕಲಾವಿದ ಕುಂಬಳೆ ಶ್ರೀಧರ ರಾಯರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜನ ಜಾಗೃತಿ ವೇದಿಕೆ ಕಾರಡ್ಕ ವಲಯದಿಂದ ಶ್ರದ್ಧಾಂಜಲಿ ಸಭೆ.

ಖ್ಯಾತ ಯಕ್ಷಗಾನ ಕಲಾವಿದ ಕುಂಬಳೆ ಶ್ರೀಧರ ರಾಯರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜನ ಜಾಗೃತಿ ವೇದಿಕೆ ಕಾರಡ್ಕ ವಲಯದಿಂದ ಶ್ರದ್ಧಾಂಜಲಿ ಸಭೆ.
ಬದಿಯಡ್ಕ: ತೆಂಕುತಿಟ್ಟು ಯಕ್ಷಗಾನದಲ್ಲಿ ಆರು ದಶಕಗಳ ಕಾಲ ತಿರುಗಾಟ ನಡೆಸಿದ ಧರ್ಮಸ್ಥಳ ಮಂಜುನಾಥೇಶ್ವರ ಯಕ್ಷಗಾನ ಮೇಳದ ಖ್ಯಾತ ಕಲಾವಿದರಾದ ಕುಂಬಳೆ ಶ್ರೀಧರ ರಾಯರ ಅಗಲುವಿಕೆಯ ಹಿನ್ನಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜನ ಜಾಗೃತಿ ವೇದಿಕೆ ಕಾರಡ್ಕ ವಲಯದ ವತಿಯಿಂದ ವಲಯ ಕಛೇರಿಯಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು. ವಲಯ ಅಧ್ಯಕ್ಷರಾದ ಬಾಲಕೃಷ್ಣ ರೈ ದೀಪ ಬೆಳಗಿಸಿ ಉದ್ಘಾಟಿಸಿದರು. ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಕಾಸರಗೋಡು ತಾಲೂಕು ಅಧ್ಯಕ್ಷ ಅಖಿಲೇಶ್ ನಗುಮುಗಂ ಅಧ್ಯಕ್ಷತೆ ವಹಿಸಿದರು. ಹಿರಿಯ ಯಕ್ಷಗಾನ ಕಲಾವಿದರೂ ಗುರುಗಳೂ ಆದ ಜಯರಾಮ ಪಾಟಾಳಿ ಪಡುಮಲೆ ಮಾತನಾಡಿ ಶ್ರೀಧರ ರಾಯರು ಶ್ರೀ ಧರ್ಮಸ್ಥಳ ಮೇಳದಲ್ಲಿ ಸುಮಾರು ಆರು ದಶಕಗಳ ಕಾಲ ಸೇವೆ ಸಲ್ಲಿಸಿದ್ದು ಮಾತ್ರವಲ್ಲದೆ ಯಕ್ಷಗಾನದ ತೆಂಕು ತಿಟ್ಟಿನ ನಾಟ್ಯ ಅಲ್ಲದೆ ಶಿವರಾಮ ಕಾರಂತರ ಬಡಗಿನ ನಾಟ್ಯವೂ ಕಲಿತ ಅವರು ಭರತನಾಟ್ಯವನ್ನು ಅಭ್ಯಸಿಸಿದರು. ಇವರು ಕಾಸರಗೋಡಿನ ಕುಂಬಳೆ ಯವರು ಎಂಬುದು ನಮಗೆ ಹೆಮ್ಮೆ. ಧರ್ಮಸ್ಥಳದ ಮೇಳದಲ್ಲಿ ಇದ್ದ ಕಾರಣ ಧರ್ಮಸ್ಥಳ ಜನ ಜಾಗೃತಿ ವೇದಿಕೆಯಿಂದ ಶ್ರದ್ಧಾಂಜಲಿ ಕಾರ್ಯಕ್ರಮ ನಡೆದದ್ದು ಶ್ಲಾಘನೀಯ ಕಾರ್ಯ ಎಂದರು. ಹಿರಿಯ ಸದಸ್ಯರಾದ ಸಂಜೀವ ಶೆಟ್ಟಿ ಮೊಟ್ಟೆಕುಂಜ, ರಾಮಯ್ಯ ರೈ, ಮಾಟೆ ನಾರಾಯಣ, ಚನಿಯಪ್ಪ ನಾಯ್ಕ, ಗಂಗಾಧರ ಮಣಿಯಾಣಿ ಮುಂತಾದವರು ಈ ಸಂದರ್ಭದಲ್ಲಿ ಶ್ರದ್ಧಾಂಜಲಿ ಸಮರ್ಪಿಸಿದರು. ಕಾರಡ್ಕ ವಲಯ ಮೇಲ್ವಿಚಾರಕರಾದ ಸುರೇಶ್ ಸ್ವಾಗತಿಸಿ, ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.