Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಪ್ರಸಿದ್ಧ ತಬಲ ವಾದಕರೂ, ಭಜನಾ ಸಂಕೀರ್ತನಾ ರಚನೆಗಾರ, "ಬ್ರಹ್ಮಶ್ರೀ ಪುರಸ್ಕಾರ" ವಿಜೇತ, ಕೋಟೆಕಾರು ನಿವಾಸಿ ಬ್ರಹ್ಮ ಶ್ರೀ ಪುರೋಹಿತ ಸ್ವಸ್ತಿಕ್ ಕೆ. ರಮಾನಂದ ಆಚಾರ್ಯ (72) ಹೃದಯಾಘಾತದಿಂದ ನಿಧನ.

ಕೋಟೆಕಾರು: ಬ್ರಹ್ಮ ಶ್ರೀ ಪುರೋಹಿತ ಸ್ವಸ್ತಿಕ್ ಕೆ. ರಮಾನಂದ ಆಚಾರ್ಯ (72) ನಿಧನ.
ತಲಪಾಡಿ: ಮೂಲತಃ ಸೋಮೇಶ್ವರ ರೈಲ್ವೆ ಗೇಟ್ ನಿವಾಸಿ ಇದೀಗ ಕೋಟೆಕಾರು ಜಂಕ್ಷನ್ ನಲ್ಲಿ ವಾಸಿಸುತ್ತಿರುವ ಬ್ರಹ್ಮ ಶ್ರೀ ಪುರೋಹಿತ ಸ್ವಸ್ತಿಕ್ ಕೆ. ರಮಾನಂದ ಆಚಾರ್ಯ (72) ಹೃದಯಾಘಾತದಿಂದ ನಿಧನರಾದರು. ಮೃತರು ಕೋಟೆಕಾರು "ಸ್ವಸ್ತಿಕ್ ನಡುಮನೆ" ನಿವಾಸಿ ದಿ. ಕೆ. ಲಿಂಗಪ್ಪ ಆಚಾರ್ಯ - ದಿ. ಕೆ. ರತ್ನಾವತಿ ದಂಪತಿಗಳ ಪುತ್ರನಾಗಿದ್ದು, ಪತ್ನಿ: ಶ್ರೀಮತಿ ಭಾರತಿ, ಏಕ ಪುತ್ರಿ ಚೈತ್ರ, ಅಳಿಯ: ಮುರಳಿ ಆಚಾರ್ಯ ಬೆಂಗಳೂರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರು ಪರಂಪರಾಗತವಾಗಿ ಬಂದ ಚಿನ್ನ ಬೆಳ್ಳಿ ಕುಸುರಿ ಕೆಲಸಗಳನ್ನ ಮಾಡುತ್ತಿದ್ದರು. ಬಳಿಕ ಕೋಟೆಕಾರು ಶ್ರೀ ಅಯ್ಯಪ್ಪ ಮಂದಿರದಲ್ಲಿ 30 ವರ್ಷಗಳಿಂದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿ, ಕೋಟೆಕಾರು ನೆಲ್ಲಿಸ್ಥಳ ಶ್ರೀ ಕಾಳಿಕಾಂಬ ದೇವಸ್ಥಾನದಲ್ಲಿ ಶ್ರೀ ಧೂಮವತಿ ದೈವದ ಪಾತ್ರಿಯಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ ಕಳೆದ 15 ವರ್ಷಗಳಿಂದ ಕ್ಷೇತ್ರದ ಆಡಳಿತ ಸಮಿತಿ ಜತೆ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದರು. ಪ್ರಸಿದ್ಧ ತಬಲ ವಾದಕರಾಗಿ ವಿವಿಧ ಭಜನಾ ಮಂಡಳಿಯಲ್ಲಿ ಭಜಕರಾಗಿದ್ದು, ಸಾಹಿತ್ಯ ಕ್ಷೇತ್ರದ ಹಲವು ಪುಸ್ತಕಗಳನ್ನ ಓದಿ ಸ್ವತಃ ಭಜನಾ ಸಂಕೀರ್ತನೆಯನ್ನ ಬರೆದು ರಚಿಸುವಲ್ಲಿ ಯಶಸ್ವಿಯಾಗಿದ್ದರು. ವಿಶ್ವಕರ್ಮ ದೇವರ ಹಾಗೂ ಶ್ರೀ ಕಾಳಿಕಾಂಬೆಯ ಹಲವು ಭಜನೆಯನ್ನು ಸ್ವತಃ ರಚಿಸಿ, ಹಾಡಿ, ಭಜಕರ ಮನಗೆದ್ದಿದ್ದರು. ಇವರು ಸ್ವತಃ ಬರೆದ ಭಜನಾ ಸಂಕೀರ್ತನೆಯು ಹಲವು ವರ್ಷಗಳ ಹಿಂದೆ ಪುಸ್ತಕ ರೂಪದಲ್ಲಿ ಬಿಡುಗಡೆಗೊಂಡಿತ್ತು. ಹಲವು ಮಂದಿ ಇವರು ಬರೆದ ಭಜನೆಯನ್ನು ಹಾಡುವ ಪರಿಪಾಠ ಈಗಲೂ ಕೋಟೆಕಾರು ಭಾಗದಲ್ಲಿ ಇದೆ. ಸೋಮೇಶ್ವರದ ಅರುಣ ಕಲಾ ವೃಂದದ ಸಂಗೀತ ಕಲಾ ತಂಡದಲ್ಲಿ ಹಲವು ವರ್ಷಗಳಿಂದ ತಬಲ ವಾದಕರಾಗಿದ್ದರು. ವೃತ್ತಿಯಲ್ಲಿ ಪೌರೋಹಿತ್ಯವಾಗಿದ್ದರೂ ಈ ನಡುವೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಕೂಡಾ ಪರಿಣತರಾಗಿ ಜಾತಕಗಳನ್ನ ಮಾಡಿ ಕೊಡುತ್ತಿದ್ದರು. ಇವರ ಸೇವೆಯನ್ನು ಗಮನಿಸಿ ಹಲವು ಸಂಘ ಸಂಸ್ಥೆಗಳು ಸನ್ಮಾನವನ್ನು ಮಾಡಿದ್ದರು. ಕುಂಬಳೆ ಆರಿಕ್ಕಾಡಿ ಶ್ರೀ ಕಾಳಿಕಾಂಬ ದೇವಸ್ಥಾನದಲ್ಲಿ ಪುರೋಹಿತರ ಒಕ್ಕೂಟದ ವತಿಯಿಂದ ಇವರಿಗೆ "ಬ್ರಹ್ಮಶ್ರೀ ಪುರಸ್ಕಾರ" ನೀಡಿ ಗೌರವಿಸಲಾಗಿತ್ತು. ಸಾಧು ಸ್ವಭಾವದವರಾಗಿದ್ದ ಇವರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಬಳಿಕ ಇದೀಗ ವಿಶ್ರಾಂತ ಜೀವನದಲ್ಲಿದ್ದರು. ಮೃತರ ಅಂತಿಮ ಕಾರ್ಯಗಳು ಇಂದು ಬೆಳಗ್ಗೆ 9 ಕ್ಕೆ ಕೋಟೆಕಾರು ರೈಲ್ವೆ ಗೇಟ್ ಬಳಿ ಇರುವ ಮನೆಯಲ್ಲಿ ನಡೆದು ಬಳಿಕ 10 ಗಂಟೆಗೆ ಮಾಡೂರು ಹಿಂದೂ ರುದ್ರ ಭೂಮಿಯಲ್ಲಿ ಸಂಸ್ಕಾರ ಕ್ರಿಯೆ ನಡೆಯಲಿದೆ. ಎಂದು ಕುಟುಂಬಿಕರು ತಿಳಿಸಿದ್ದಾರೆ. ಮೃತರ ನಿಧನಕ್ಕೆ ಕೋಟೆಕಾರು ನೆಲ್ಲಿಸ್ಥಳ ಶ್ರೀ ಕಾಳಿಕಾಂಬ ದೇವಸ್ಥಾನದ ಆಡಳಿತ ಸಮಿತಿ, ಮಹಿಳಾ ಸಮಿತಿ, ಸೇವಾ ಸಮಿತಿ, ನಡುಮನೆ ಕುಟುಂಬಸ್ಥರು ಗಾಢವಾದ ಸಂತಾಪ ಸೂಚಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.