ತಲಪಾಡಿ ಟೋಲ್ ಬೂತ್ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಿ :ಎಸ್ ಡಿ ಪಿ ಐ ಮನವಿ.
ಜುಲೈ 11, 2024
0
ತಲಪಾಡಿ ಟೋಲ್ ಬೂತ್ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಿ :ಎಸ್ ಡಿ ಪಿ ಐ ಮನವಿ.
ಮಂಜೇಶ್ವರ: ತಲಪಾಡಿ ಟೋಲ್ ಬೂತ್ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಲು ಹಾಗೂ 5 ಕಿಲೋಮೀಟರ್ ವ್ಯಾಪ್ತಿಯ ವಾಹನಗಳಿಗೆ ಉಚಿತ ಪಾಸ್ ನೀಡುವಂತೆ ಒತ್ತಾಯಿಸಿ ಎಸ್ ಡಿ ಪಿ ಐ ಮಂಜೇಶ್ವರ ಮಂಡಲಾಧ್ಯಕ್ಷ ಅಶ್ರಫ್ ಬಡಾಜೆ ನೇತೃತ್ವದ ನಿಯೋಗವು ಭಾರತೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ (NHAI) ಯೋಜನಾ ನಿರ್ದೇಶಕರನ್ನು (ಮಂಗಳೂರು ಕಛೇರಿ) ಭೇಟಿಯಾಗಿ ಮನವಿ ಸಲ್ಲಿಸಿದರು. ಎಸ್. ಡಿ. ಟಿ. ಯು ಜಿಲ್ಲಾ ಕಾರ್ಯದರ್ಶಿ ಖಾದರ್ ಹೊಸಂಗಡಿ ಎಸ್ಡಿಪಿಐ ಮಂಡಲ ಕೋಶಧಿಕಾರಿ ತಾಜು ಉಪ್ಪಳ ಎಸ್ಡಿಪಿಐ ಮಂಜೇಶ್ವರ ಪಂಚಾಯತ್ ಸಮಿತಿ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಕುಂಜತ್ತೂರು, ಬ್ರಾಂಚ್ ಸಮಿತಿ ಸದಸ್ಯ ಶಂಸುದ್ದೀನ್ ಮೊದಲಾದವರು ಭೇಟಿ ನೀಡಿದ ನಿಯೋಗದಲ್ಲಿ ಉಪಸ್ಥಿತರಿದ್ದರು.

