Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಮಂಗಳೂರು ಅಂಚೆ ವಿಭಾಗ 2023 - 24 ನೇ ಸಾಲಿನಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆಗಳನ್ನು ಮಾಡಿದ ಅಂಚೆ ಸಿಬ್ಬಂದಿಗಳಿಗೆ ಪ್ರಶಸ್ತಿ ಪ್ರದಾನ.

ಮಂಗಳೂರು ಅಂಚೆ ವಿಭಾಗ 2023 - 24 ನೇ ಸಾಲಿನಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆಗಳನ್ನು ಮಾಡಿದ ಅಂಚೆ ಸಿಬ್ಬಂದಿಗಳಿಗೆ ಪ್ರಶಸ್ತಿ ಪ್ರದಾನ.
ಮಂಗಳೂರು: ಮಂಗಳೂರು ಅಂಚೆ ವಿಭಾಗ 2023 - 24 ನೇ ಸಾಲಿನಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹಲವಾರು ಸಾಧನೆಗಳನ್ನು ಮಾಡಿದ್ದು ಇದಕ್ಕೆ ಕಾರಣರಾದ ಅಂಚೆ ಸಿಬ್ಬಂದಿಗಳಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ದಕ್ಷಿಣ ಕರ್ನಾಟಕ ವಲಯದ ಅಂಚೆ ಸೇವೆಗಳ ನಿರ್ದೇಶಕರಾದ ಸಂದೇಶ ಮಹದೇವಪ್ಪರವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಪ್ರಶಸ್ತಿ ಪ್ರದಾನ ಮಾಡಿದರು. ಮಂಗಳೂರು ಅಂಚೆ ವಿಭಾಗ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಯಾವತ್ತೂ ಮುಂಚೂಣಿಯಲ್ಲಿದ್ದು, ಇಲ್ಲಿನ ಅಂಚೆ ಸಿಬ್ಬಂದಿಗಳ ಸೇವೆಯನ್ನು ಶ್ಲಾಘಿಸಿದರು. ಮತ್ತು ಸರಕಾರಿ ಸೇವೆಯನ್ನು ನೀಡುವಲ್ಲಿ ಆರೋಗ್ಯಕರ ಸ್ಪರ್ಧೆ ಇದ್ದಲ್ಲಿ ಇಲಾಖೆ ಇನ್ನಷ್ಟು ಜನರಿಗೆ ಹತ್ತಿರವಾಗುವುದು ಎಂದು ಈ ಸಂದರ್ಭದಲ್ಲಿ ಅವರು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರಾದ ಸುಧಾಕರ ಮಲ್ಯ 2023 - 24 ರಲ್ಲಿ ಮಂಗಳೂರು ಅಂಚೆ ವಿಭಾಗದ ಸಾಧನೆಗಳ ಬಗ್ಗೆ ವಿವರಿಸಿದರು. ಮತ್ತು ಅಂಚೆ ಜನ ಸಂಪರ್ಕ ಅಭಿಯಾನಗಳ ಮೂಲಕ ಅಂಚೆ ಸೇವೆಯನ್ನು ಜನರ ಮನೆ ಬಾಗಿಲಿನಲ್ಲಿ ನೀಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದರು. ವಿವಿಧ ಅಂಚೆ ಸೇವೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಅಂಚೆ ಸಿಬ್ಬಂದಿಗಳಿಗೆ ಸುಮಾರು 70 ಕ್ಕೂ ಅಧಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಉಪ ಅಂಚೆ ಅಧೀಕ್ಷಕರಾದ ದಿನೇಶ್ ಪಿ. ಸ್ವಾಗತಿಸಿ, ವರಿಷ್ಠ ಅಂಚೆ ಪಾಲಕ ಶ್ರೀನಾಥ್ ಎನ್. ಬಿ. ವಂದಿಸಿದರು. ಸಹಾಯಕ ಅಂಚೆ ಅಧೀಕ್ಷಕರಾದ ಸಿ. ಪಿ. ಹರೀಶ್, ಲೋಕೇಶ್, ಮೆಲ್ವಿನ್ ಲೋಬೊ, ನಿರೀಕ್ಷಕರಾದ ಪ್ರದೀಪ್ ಭಂಡಾರಿ, ಐ. ಪಿ. ಪಿ. ಬಿ. ವ್ಯವಸ್ಥಾಪಕ ಶಿಹಾಸ್, ಅಂಚೆ ಪಾಲಕ ಕಿರಣ್ ಕುಮಾ‌ರ್ ಮೊದಲಾದವರು ಉಪಸ್ಥಿತರಿದ್ದರು. ಅಕ್ಷತಾ ನಾಯಕ್ ಕಾರ್ಯಕ್ರಮವನ್ನು ನಿರ್ವಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.