ಹೊಸ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಗಳ ಅಕ್ರಮ ಪಾರ್ಕಿಂಗ್ ಅಪಘಾತಕ್ಕೆ ಕಾರಣ - ಯೂತ್ ಲೀಗ್.
ಜುಲೈ 22, 2024
0
ಹೊಸ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಗಳ ಅಕ್ರಮ ಪಾರ್ಕಿಂಗ್ ಅಪಘಾತಕ್ಕೆ ಕಾರಣ - ಯೂತ್ ಲೀಗ್.
ಮಂಜೇಶ್ವರ: ಮುಸ್ಲಿಮ್ ಯೂತ್ ಲೀಗ್ ಮಂಜೇಶ್ವರ ಪಂಚಾಯತ್ ಅಧ್ಯಕ್ಷ ಹನೀಫ್ ಕುಚ್ಚಿಕಾಡ್ ಮತ್ತು ಜತೆ ಕಾರ್ಯದರ್ಶಿ ಇರ್ಷಾದ್ ಚೆಕ್‌ಪೋಸ್ಟ್ ನಿಯೋಗವು ಮಂಜೇಶ್ವರ ವೃತ್ತ ನಿರೀಕ್ಷಕರನ್ನು ಭೇಟಿಯಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಗಳನ್ನು ನಿಲ್ಲಿಸುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿನ ಅಕ್ರಮ ಲಾರಿ ನಿಲುಗಡೆಯನ್ನು ತೆರವುಗೊಳಿಸ ಬೇಕು ನಿಯಮವನ್ನು ಪಾಲಿಸದವರ ವಿರುದ್ಧ ಪೊಲೀಸರು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ, ಮಂಜೇಶ್ವರ ಪಂಚಾಯತ್ ಯೂತ್ ಲೀಗ್ ವತಿಯಿಂದ ಪೊಲೀಸರಿಗೆ ಮನವಿ ನೀಡಿದ್ದಾರೆ. ಮಂಜೇಶ್ವರ ವೃತ್ತ ನಿರೀಕ್ಷಕರು ಲಾರಿಗಳ ವಿರುದ್ಧ ಕ್ರಮಕೈಗೊಳ್ಳುವ ಭರವಸೆ ನೀಡಿದರು. ಈ ವೇಳೆ ಯೂತ್ ಲೀಗ್ ನ ಪದಾಧಿಕಾರಿಗಳಾದ
ಅಚ್ಚು, ರಿಯಾಝ್ ಉದ್ಯಾವರ, ಮುಬಾರಕ್ ಗುಡ್ಡೆಕೇರಿ ಮೊದಲಾದ ಮುಖಂಡರು ಪಾಲ್ಗೊಂಡರು

