Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಕಾಸರಗೋಡು ಹಾಗೂ ಶ್ರೀ ಸತ್ಯಸಾಯಿ ಸೇವಾ ಸಮಿತಿ ಪೆರ್ಲ ಇವರ ಜಂಟಿ ಆಶ್ರಯದಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಉಚಿತ ಆಯುರ್ವೇದ ವೈದ್ಯಕೀಯ ಶಿಬಿರ.

ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಕಾಸರಗೋಡು ಹಾಗೂ ಶ್ರೀ ಸತ್ಯಸಾಯಿ ಸೇವಾ ಸಮಿತಿ ಪೆರ್ಲ ಇವರ ಜಂಟಿ ಆಶ್ರಯದಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಉಚಿತ ಆಯುರ್ವೇದ ವೈದ್ಯಕೀಯ ಶಿಬಿರ.
ಕಾಸರಗೋಡು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಕಾಸರಗೋಡು, ಶ್ರೀ ಸತ್ಯಸಾಯಿ ಸೇವಾ ಸಮಿತಿ ಪೆರ್ಲ ಇವರ ಸಹಭಾಗಿತ್ವದಲ್ಲಿ ಇಂದು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಉಚಿತ ಆಯುರ್ವೇದ ವೈದ್ಯಕೀಯ ಶಿಬಿರ ತಜ್ಞ ವೈದ್ಯರುಗಳಿಂದ ನಡೆಯಿತು. ಉಚಿತ ವೈದ್ಯಕೀಯ ಆಯುರ್ವೇದ ಶಿಬಿರವನ್ನು ಡಾ. ಕೃಷ್ಣ ಮೋಹನ ಪೆರ್ಲ, ಡಾ.ಸತ್ಯನಾರಾಯಣ, ಸತ್ಯನಾರಾಯಣ ಹೆಗಡೆ, ವಾಸುದೇವ ಕಾರಂತ ಉಜಿರೆಕೆರೆ ಮುಂತಾದ ಗಣ್ಯರು ಸೇರಿ ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿದರು. ಡಾ. ಸತ್ಯನಾರಾಯಣ ಬಿ. ಪ್ರಶಾಂತಿ ಕ್ಲಿನಿಕ್ ಬಾಯಾರುಪದವು, ಡಾ. ಕೃಷ್ಣಮೋಹನ ಬಿ. ಆರ್ ಚಿನ್ಮಯ ಕ್ಲಿನಿಕ್ ಪೆರ್ಲ, ಮುಂದಾಳತ್ವದಲ್ಲಿ ಶ್ರೀ ಗೋಪಾಲಕೃಷ್ಣ ಫಾರ್ಮಸಿ ಕುಂಬ್ಳೆ ಡಾ. ರವಿನಾರಾಯಣ, ಸಂಜೀವಿನಿ ಕ್ಲಿನಿಕ್, ನೆಹರೂ ನಗರ, ಪುತ್ತೂರು, ಶ್ರೀ ಸದ್ಗುರು ಡಿಸ್ಟ್ರಿಬ್ಯೂಟರ್ . ಸುಮತಿ ಕಾಂಪ್ಲೆಕ್ಸ್ಕಬಕ, ಸೀ. ಕೇಮ್ . ಫಾರ್ಮಸಿ. ಬೆಂಗಳೂರು. ಶ್ರೀ ಕಿಶೋರ ಹೇರಳ ಉಡುವ ಮೊದಲಾದವರು ಸಹಕರಿಸಿದರು. ಸತ್ಯಸಾಯಿ ಸೇವಾ ಬಳಗದ 2024 ರಲ್ಲಿ ನಡೆದ 5 ನೇ ಶಿಬಿರ ಇದಾಗಿರುತ್ತದೆ. ಕಳೆದ ವರ್ಷ ಕೆ.ಎಂ.ಸಿಯ ಶಿಬಿರವನ್ನು ಪ್ರತಿಷ್ಠಾನವು ನಡೆಸಿತ್ತು. ಸಿರಿಬಾಗಿಲು ಪ್ರತಿಷ್ಠಾನವು ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆ ಸಮಾಜಕ್ಕೆ ಉಪಯುಕ್ತವಾಗುವ ಇಂತಹ ಶಿಬಿರಗಳನ್ನು ಆಯೋಜಿಸುತ್ತಿರುವುದು ಒಂದು ಉತ್ತಮ ಕಾರ್ಯ ಎಂಬುದಾಗಿ ಗಣ್ಯರು ಅಭಿಮತ ವ್ಯಕ್ತಪಡಿಸಿದರು. ಪ್ರತಿಷ್ಠಾನದಲ್ಲಿ ಮುಂದಿನ ದಿನಗಳಲ್ಲಿ ಈ ವರ್ಷವೂ ಕೆ.ಎಂ.ಸಿ ಯ ವೈದ್ಯಕೀಯ ತಪಾಸಣಾ ಶಿಬಿರವು ನಡೆಯಲಿರುತ್ತದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.