Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಆನೆಕಲ್ಲು ಸೇತುವೆಯ ಬಳಿ ಬೃಹತ್ "ದೇವದಾರು" ಮರ ಕಡಿಯುವ ಕಾರ್ಯಕ್ಕೆ ವರ್ಕಾಡಿ ಗ್ರಾಮ ಪಂಚಾಯತ್ ನ ಸಹಕಾರದೊಂದಿಗೆ ಕೇರಳ ಪಿ.ಡಬ್ಲ್ಯೂ.ಡಿ ಇಲಾಖೆ ನಿರ್ಧಾರ. ಆನೆಕಲ್ಲು ಸೇತುವೆಯಲ್ಲಿ - ಕನ್ಯಾನ ಸಂಪರ್ಕಿಸುವ ಅಂತರ್ ರಾಜ್ಯ ರಸ್ತೆ ಇಂದು ಬೆಳಗ್ಗಿನಿಂದ ಸಂಜೆ 5.30 ರ ತನಕ ಬಂದ್. ವಾಹನಗಳು ಬದಲಿ ರಸ್ತೆಯಲ್ಲಿ ಸಂಚರಿಸಲು ಕರೆ.

ಆನೆಕಲ್ಲು ಸೇತುವೆಯ ಬಳಿ ಬೃಹತ್ "ದೇವದಾರು" ಮರ ಕಡಿಯುವ ಕಾರ್ಯಕ್ಕೆ ವರ್ಕಾಡಿ ಗ್ರಾಮ ಪಂಚಾಯತ್ ನ ಸಹಕಾರದೊಂದಿಗೆ ಕೇರಳ ಪಿ.ಡಬ್ಲ್ಯೂ.ಡಿ ಇಲಾಖೆ ನಿರ್ಧಾರ. ಆನೆಕಲ್ಲು ಸೇತುವೆಯಲ್ಲಿ - ಕನ್ಯಾನ ಸಂಪರ್ಕಿಸುವ ಅಂತರ್ ರಾಜ್ಯ ರಸ್ತೆ ಇಂದು ಬೆಳಗ್ಗಿನಿಂದ ಸಂಜೆ 5.30 ರ ತನಕ ಬಂದ್. ವಾಹನಗಳು ಬದಲಿ ರಸ್ತೆಯಲ್ಲಿ ಸಂಚರಿಸಲು ಕರೆ.
ಮಂಜೇಶ್ವರ: ವರ್ಕಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಟ್ಟ ಆನೆಕಲ್ಲು ಪ್ರದೇಶದಲ್ಲಿ ಅಪಾಯಕಾರಿ ಮರವನ್ನು ಕಡಿದು ತೆರವುಗೊಳಿಸಲಿರುವುದರಿಂದ ಇಂದು( 30 - 07 - 2024 ಮಂಗಳವಾರ ) ಬೆಳಗ್ಗೆ 8.30 ಗಂಟೆಯಿಂದ ಸಂಜೆ 5.30 ಗಂಟೆ ವರೆಗೆ ರಸ್ತೆ ಸಂಚಾರ ನಿಯಂತ್ರಣ ಹೇರಲಾಗಿದೆಯೆಂದು ವರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಭಾರತಿ ಎಸ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆನೆಕಲ್ಲು ಹೊಳೆ (ಸೇತುವೆ)ಯ ಪಕ್ಕ ರಸ್ತೆಗೆ ತಾಗಿ, ಸುಮಾರು 60 ವರ್ಷ ಹಳೆಯ ದೇವದಾರು ಮರವಿದ್ದು, ಇದು ದಷ್ಟಪುಷ್ಟವಾಗಿ ಬೆಳೆದು, ರಸ್ತೆಗೆ ಬಾಗಿ ನಿಂತಿದೆ. ಅಲ್ಲದೆ ಇದರ ಪಕ್ಕ ಇನ್ನೊಂದು ಮರವಿದ್ದು, ಅದರ ಕೊಂಬೆ ನಿನ್ನೆ ಮುರಿದು ವಿದ್ಯುತ್ ಕಂಬದ ಮೇಲೆ ಬಿದ್ದ ಕಾರಣ ವಿದ್ಯುತ್ ಕಂಬ ಮುರಿತಗೊಂಡು ದುರಸ್ತಿಯ ನೆಪದಲ್ಲಿ ಹಲವು ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಯಿತು. ಇದರಿಂದ ಮುಂದಿನ ದಿನಗಳಲ್ಲಿ ಈ ಮರಗಳಿಂದ ಯಾವುದೇ ತೊಂದರೆ ಉಂಟಾಗಬಾರದೆಂಬ ಉದ್ದೇಶದಿಂದ ಕೇರಳ ಪಿ.ಡಬ್ಲೂ.ಡಿ ಮಂಜೇಶ್ವರ ವಲಯದ ಎ. ಇ. ಒ ಆದೇಶದಂತೆ ಇಂದು ಮರವನ್ನು ಕಡಿಯಲಾಗುತ್ತಿದೆ. ಆದ್ದರಿಂದ ಆನೆಕಲ್ಲು ಸೇತುವೆ ಮುಖಾಂತರ ಕನ್ಯಾನಕ್ಕೆ ಸಂಚರಿಸುವ ಎಲ್ಲಾ ವಾಹನಗಳು ಬದಲಿ ರಸ್ತೆಯಲ್ಲಿ ಸಂಚರಿಸಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ. ಹೊಸಂಗಡಿ ಮಾರ್ಗವಾಗಿ ಆನೆಕಲ್ಲು ಕನ್ಯಾನ ವಿಟ್ಲ ಭಾಗಕ್ಕೆ ತೆರಳುವವವರು ಹೊಸಂಗಡಿಯಿಂದ ನೇರ ಗುವೇದಪಡ್ಫು, ಬಾಕ್ರಬೈಲು, ಸಾಲೆತ್ತೂರು ರೂಟಿನಲ್ಲಿ ವಿಟ್ಲ ಭಾಗಕ್ಕೆ ತೆರಳಬಹುದು. ಅಲ್ಲದೆ ವಿಟ್ಲ ರೂಟಿನಿಂದ ಕನ್ಯಾನ ಆನೆಕಲ್ಲು ರೂಟಿನಲ್ಲಿ ಬರುವವರು ಮೇಲೆ ತಿಳಿಸಿದ ರೂಟ್ ಹೊರತು ಪಡಿಸಿ, ಕನ್ಯಾನದಿಂದ ಒಡಿಯೂರು, ಬಾಯಾರ್, ಪೈವಳಿಕೆ, ಬಾಯಿಕಟ್ಟೆ, ಮೀಯಪದವು ಮೂಲಕವೂ ಹೊಸಂಗಡಿಗೆ ಸುತ್ತು ಬಳಸಿ ತಲುಪಬಹುದಾಗಿದೆ. ಇಂದಿನ ಒಂದು ದಿನಕ್ಕೆ ಮಾತ್ರ ಬದಲಿ ರಸ್ತೆಯಲ್ಲಿ ಸಂಚರಿಸಬೇಕಾಗಿ ಬರುತ್ತದೆ ಎಂದು ಇಲಾಖೆ ಅಧಿಕಾರಿಗಳು, ಪಂಚಾಯತ್ ಅಧ್ಯಕ್ಷೆ ವಿನಂತಿಸಿಕೊಂಡಿದ್ದಾರೆ. ಇವತ್ತಿನ ಒಂದು ದಿನ ಮರ ಕಡಿಯುವ ಕಾರಣ ಈ ನಿರ್ಧಾರವನ್ನು ಮಾಡಲಾಗಿದ್ದು, ಆನೆಕಲ್ಲು ಸೇತುವೆ ಮೂಲಕ ಕೇರಳ - ಕರ್ನಾಟಕ ಸಂಚರಿಸುವ ನಿತ್ಯ ಯಾತ್ರಿಕರು, ಪ್ರಯಾಣಿಕರು, ವಾಹನ ಸವಾರರು, ನಿತ್ಯ ಸರ್ವಿಸ್ ನಡೆಸುವ ಅಂತಾರಾಜ್ಯ ಬಸ್ ಸಿಬ್ಬಂದಿಗಳು ಸಹಕರಿಸಬೇಕೆಂದು ವರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಭಾರತಿ ಸುಳ್ಯಮೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.